ಮನೆ ಸುದ್ದಿ ಜಾಲ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹುಲಿಮರಿಗಳ ಕಳೇಬರ ಪತ್ತೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹುಲಿಮರಿಗಳ ಕಳೇಬರ ಪತ್ತೆ

0

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ ನಡೆಯುತ್ತಿರುವ ಸಂದರ್ಭದಲ್ಲಿ  ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿರುವ ಎರಡು ಹುಲಿ ಮರಿಗಳ ಕಳೇಬರಗಳು ಪತ್ತೆಯಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದೊಡ್ಡ ಬೈರನಕುಪ್ಪೆ ವಲಯದ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ನಾಗರಹೊಳೆಯ ಹುಲಿ ಯೋಜನೆಯ ಮುಖ್ಯಸ್ಥ ಮಹೇಶ್ ಕುಮಾರ್ ನೇತೃತ್ವದ ತಂಡ ಗಣತಿ ನಡೆಸುತ್ತಿದೆ.

ಈ ವೇಳೆ 8 ರಿಂದ 9 ತಿಂಗಳ ಎರಡು ಹುಲಿ ಮರಿಗಳ ಕಳೇಬರಗಳು ಪತ್ತೆಯಾಗಿದ್ದು, ಒಂದು ಹೆಣ್ಣು ಹುಲಿಯಾಗಿದೆ. ಇನ್ನೊಂದು ಹುಲಿ ಹೆಣ್ಣೋ, ಗಂಡೋ ಎಂದು ತಿಳಿಯಲು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಡಿಸಿಎಫ್ ಮಹೇಶ್ ಕುಮಾರ್, ಎನ್​​​ಟಿಸಿಎಯ ರಘುರಾಂ ಹಾಗೂ ವೈದ್ಯರು ಸೇರಿ ಹುಲಿ ಮರಿಗಳ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲಿಯೇ ನಡೆಸಿ, ಕಳೇಬರಗಳನ್ನು ಸುಟ್ಟು ಹಾಕಲಾಗಿದೆ.

ಮೃತಪಟ್ಟಿದ್ದ ಒಂದು ಹುಲಿ ಮರಿಯ ಎರಡು ಕಾಲುಗಳು ಮುರಿದಿದ್ದು, ಮತ್ತೊಂದು ಹುಲಿಯ ಮಾಂಸವನ್ನು ತಿಂದು ಹಾಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಹುಲಿಮರಿಗಳ ಕಳೇಬರ ಪತ್ತೆಯಾದ ಸ್ಥಳದಲ್ಲೇ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ಎಂದು ನಾಗರಹೊಳೆ ಮುಖ್ಯಸ್ಥ ಡಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಹಿಂದಿನ ಲೇಖನಮದ್ಯ ಸೇವಿಸಿ ವಾಹನ ಚಾಲನೆ ಅಪರಾಧ: ಸುಪ್ರೀಂ ಕೋರ್ಟ್ ತೀರ್ಪು
ಮುಂದಿನ ಲೇಖನಬಿಜೆಪಿ ಎಂಬ ವೈರಸ್ ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ ಖರ್ಗೆ