ಮನೆ ಕಾನೂನು ಕಲಬುರಗಿ: 3 ಸಾವಿರ ರೂ.ಲಂಚ ಪಡೆಯುತ್ತಿದ್ದ ಬಿಲ್‌ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ಕಲಬುರಗಿ: 3 ಸಾವಿರ ರೂ.ಲಂಚ ಪಡೆಯುತ್ತಿದ್ದ ಬಿಲ್‌ ಕಲೆಕ್ಟರ್ ಲೋಕಾಯುಕ್ತ ಬಲೆಗೆ

0

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಹರನೂರು ಗ್ರಾಮ ಪಂಚಾಯತಿಯ ಬಿಲ್‌ ಕಲೆಕ್ಟರ್ ಮೂರು ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಲಂಚ ಸ್ವೀಕರಿಸುವಾಗ ಬಿಲ್ ಕಲೆಕ್ಟರ್ ಬಾಬುರಾವ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ರಾಜೀವ್ ಗಾಂಧಿ ಅವಾಸ್ ಯೋಜನೆ ಅಡಿಯಲ್ಲಿ ಮನೆ ಜಿಪಿಎಸ್ ಮತ್ತು ಖಾತಾ ಏರಿಸಲು ಮೂರು ಸಾವಿರ ರೂ. ಬೇಡಿಕೆ ಇಟ್ಟಿದ್ದ. ಆ ಹಣವನ್ನು ನಾಗಣ್ಣ ಗೌಡ ಅನ್ನುವವರ ಬಳಿ ಶುಕ್ರವಾರ ಸಂಜೆ ವಿಜಯಪುರ ಕ್ರಾಸ್ ಬಳಿಯಲ್ಲಿ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ಗೀತಾ, ಸಿಪಿಐ ನಾನಾಗೌಡ ಗೌಡ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.