ಮನೆ ಸುದ್ದಿ ಜಾಲ ಡೆನ್ಮಾರ್ಕ್‌ ಗೆ ತೆರಳಿದ ಪ್ರಧಾನಿ ಮೋದಿ: ದ್ವಿಪಕ್ಷೀಯ ಸಂಬಂಧದ ಸಂಬಂಧ

ಡೆನ್ಮಾರ್ಕ್‌ ಗೆ ತೆರಳಿದ ಪ್ರಧಾನಿ ಮೋದಿ: ದ್ವಿಪಕ್ಷೀಯ ಸಂಬಂಧದ ಸಂಬಂಧ

0

ಕೂಪನ್‌ಹೇಗನ್ (Copenhagen)-ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಜರ್ಮನಿಯಿಂದ ಡೆನ್ಮಾರ್ಕ್‌ ಗೆ ತೆರಳಿದ್ದಾರೆ.

ಜರ್ಮನಿಯಿಂದ ಡೆನ್ಮಾರ್ಕ್‌ ನ ಕೂಪನ್‌ಹೇಗನ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸ್ವತಃ ಡೆನ್ಮಾರ್ಕ್‌ ಪ್ರಧಾನಿ ಮೇಟ್‌ ಫ್ರೆಡೆರಿಕ್‌ ಸೆನ್‌ (Mette Frederiksen) ಅವರು ಸ್ವಾಗತಿಸಿದರು. ಇದು ‘ವಿಶೇಷ ನಡೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಬಣ್ಣಿಸಿದ್ದಾರೆ.

ನಂತರ ಮೋದಿ ಅವರನ್ನು ಫ್ರೆಡೆರಿಕ್‌ಸೆನ್ ಅವರು ಮರಿಯೆನ್‌ಬರ್ಗ್‌ನಲ್ಲಿರುವ ಪ್ರಧಾನಿಗಳ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಬಂದರು. ಅಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಡೆನ್ಮಾರ್ಕ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಮಂಗಳವಾರ ಮತ್ತು ಬುಧವಾರ ದ್ವಿಪಕ್ಷೀಯ ಹಾಗೂ ಬಹು ರಾಷ್ಟ್ರೀಯ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.

ಭಾರತ- ಯುರೋಪಿಯನ್ ಮುಕ್ತ ವ್ಯಾಪಾರ ಒಪ್ಪಂದದ ಸಂಧಾನ ಮಾತುಕತೆಗಳು ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಅವರು ಫ್ರೆಡೆರಿಕ್‌ಸೆನ್ ಅವರ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದರು.

ಭಾರತದಲ್ಲಿ ವಿವಿಧ ವಲಯಗಳಲ್ಲಿ 200ಕ್ಕೂ ಹೆಚ್ಚು ಡ್ಯಾನಿಶ್ ಕಂಪೆನಿಗಳು ಕೆಲಸ ಮಾಡುತ್ತಿವೆ. ಭಾರತದಲ್ಲಿನ ಸುಗಮ ಉದ್ಯಮ ಪರಿಸರ ಮತ್ತು ಆರ್ಥಿಕ ಸುಧಾರಣೆಯಿಂದ ಈ ಕಂಪೆನಿಗಳು ಲಾಭ ಪಡೆಯುತ್ತಿವೆ. ಡ್ಯಾನಿಶ್ ಕಂಪೆನಿಗಳಿಗೆ ಇನ್ನಷ್ಟು ಹೂಡಿಕೆ ಅವಕಾಶಗಳು ಇವೆ ಎಂದು ತಿಳಿಸಿದರು.

ಭಾರತ- ಯುರೋಪ್ ಸಂಬಂಧ, ಉಕ್ರೇನ್ ಯುದ್ಧ, ಭಾರತ-ಪೆಸಿಫಿಕ್ ಸೇರಿದಂತೆ ಅನೇಕ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಬಗ್ಗೆ ಮಂಗಳವಾರ ಮಾತುಕತೆ ನಡೆಸಲಾಗಿದೆ ಎಂದಿರುವ ಪ್ರಧಾನಿ ಮೋದಿ, ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮಕ್ಕೆ ಮನವಿ ಮಾಡಿದ್ದಾರೆ.

ಹವಾಮಾನ ಬದಲಾವಣೆ, ತಂತ್ರಜ್ಞಾನ ಮತ್ತು ನವೀಕರಿಸುವ ಸಂಪನ್ಮೂಲ ವಿಷಯಗಳು ಪ್ರಧಾನಿ ಮೋದಿ ಅವರ ಭೇಟಿಯ ಪ್ರಮುಖ ಕಾರ್ಯಸೂಚಿಗಳಾಗಿವೆ. ಎರಡನೇ ಭಾರತ- ನೋರ್ಡಿಕ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅವರು ನೋರ್ಡಿಕ್ (ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್‌ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್) ದೇಶಗಳ ಜತೆ ಮಾತನಾಡಲಿದ್ದಾರೆ.ಲಿದ್ದಾರೆ.