ಮನೆ ರಾಷ್ಟ್ರೀಯ ದೇಶದಲ್ಲಿ ʻಓಮಿಕ್ರಾನ್ ಎಕ್ಸ್ ಇʼ ರೂಪಾಂತರಿ ಪತ್ತೆ

ದೇಶದಲ್ಲಿ ʻಓಮಿಕ್ರಾನ್ ಎಕ್ಸ್ ಇʼ ರೂಪಾಂತರಿ ಪತ್ತೆ

0

ನವದೆಹಲಿ (New Delhi)-ದೇಶದಲ್ಲಿ ಕೋವಿಡ್‌ 4ನೇ ಅಲೆಯ ಭೀತಿಯ ನಡುವೆ ʻಓಮಿಕ್ರಾನ್ ಎಕ್ಸ್ ಇʼ (omicron xe variant) ರೂಪಾಂತರಿಯ ಮೊದಲ ಪ್ರಕರಣ ಪತ್ತೆಯಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ʻಓಮಿಕ್ರಾನ್ ಎಕ್ಸ್ ಇʼ ರೂಪಾಂತರಿಯು ಓಮಿಕ್ರಾನ್ ಗಿಂತ ಶೇ. 10 ಹೆಚ್ಚು ಹರಡುತ್ತದೆ ಎಂದು ಐಎನ್‌ಎಸ್‌ಎಸಿಒಜಿ (ಇಂಡಿಯಾ ಸಾರ್ಸ್‌ ಕೋವ್‌ –2 ಜೆನೋಮಿಕ್‌ ಕನ್ಸೋರ್ಟಿಯಂ) ದೃಢಪಡಿಸಿದೆ.

ಇದು ಓಮಿಕ್ರಾನ್ ನ BA.1 ಮತ್ತು BA.2 ಉಪ ವಂಶಾವಳಿಗಳ ಮರುಸಂಯೋಜಕವಾಗಿದ್ದು, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳದಲ್ಲಿ ಓಮಿಕ್ರಾನ್ ಎಕ್ಸ್ ಇ ಪ್ರಕರಣ ವರದಿಯಾಗಿದೆ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ. ಈ ಹೊಸ ರೂಪಾಂತರಿ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏಪ್ರಿಲ್ 25 ರ ಬುಲೆಟಿನ್ ನಲ್ಲಿ, ಭಾರತದಲ್ಲಿ ಒಂದು XE ರೂಪಾಂತರಿ ವರದಿಯಾಗಿದೆ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ. ಆದಾಗ್ಯೂ ಈ ಮರುಸಂಯೋಜಕ ರೂಪಾಂತರಿ ಯಾವ ರಾಜ್ಯದಿಂದ ವರದಿಯಾಗಿದೆ ಎಂಬುದರ ಬಗ್ಗೆ ನಿರ್ದಿಷ್ಟವಾಗಿ ಹೇಳಿಲ್ಲ.

ಈ ಹಿಂದೆ ಮಹಾರಾಷ್ಟ್ರ ಮತ್ತು ಗುಜಾರಾತ್ ನಲ್ಲಿ ಎಕ್ಸ್ ಇ ರೂಪಾಂತರಿ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಆದರೆ INSACOG ಪ್ರಯೋಗಾಲಯ ಇದನ್ನು ದೃಢಪಡಿಸಿರಲಿಲ್ಲ.

ಹಿಂದಿನ ಲೇಖನಭಾರತವನ್ನು ಜ್ಞಾನಾಧರಿತ `ಸೂಪರ್ ಪವರ್’ ಮಾಡಲಾಗುವುದು: ಅಮಿತ್‌ ಶಾ
ಮುಂದಿನ ಲೇಖನಡೆನ್ಮಾರ್ಕ್‌ ಗೆ ತೆರಳಿದ ಪ್ರಧಾನಿ ಮೋದಿ: ದ್ವಿಪಕ್ಷೀಯ ಸಂಬಂಧದ ಸಂಬಂಧ