ಬೆಂಗಳೂರು: ದೇಶದಲ್ಲಿ ದುಷ್ಕೃತ್ಯ ನಡೆಸಲು ಉಗ್ರರು ಸಂಚು ನಡೆಸಿರುವ ಹಿನ್ನೆಲೆ ಎನ್ ಐಎ ತನ್ನ ದಾಳಿಯನ್ನು ಮುಂದುವರೆಸಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿನ ಒಟ್ಟು 6 ಕಡೆಗಳಲ್ಲಿ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಯುತ್ತಿದೆ.
ಶಂಕಿತ ತಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ಎನ್ಐಎ ಈ ದಾಳಿಯನ್ನು ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಹಿಂದೆ ಹೆಬ್ಬಾಳದಲ್ಲಿ ಗ್ರೇನೇಡ್ ದೊರೆತ ಪ್ರಕರಣದ ಬಗ್ಗೆ ಎಫ್ ಐಆರ್ ದಾಖಲಾಗಿತ್ತು. ಆರ್ ಟಿ ನಗರದ ಮನೆಯೊಂದರಲ್ಲಿ ಗ್ರೆನೇಡ್ ಹಾಗು ಪಿಸ್ತೂಲ್ ಸಿಕ್ಕಿತ್ತು. ಈ ಪ್ರಕರಣ ಎನ್ಐಎಗೆ ವರ್ಗಾವಣೆಯಾಗಿದ್ದು, ತನಿಖಾ ಸಂಸ್ಥೆ ತೀವ್ರವಾಗಿ ತನಿಖೆ ನಡೆಸುತ್ತಿದೆ.
ಬಂಧಿತ ಶಂಕಿತ ಉಗ್ರ ಈ ವಿಚಾರದಲ್ಲಿ ಹಲವು ಮಾಹಿತಿ ನೀಡಿದ್ದು, ಆತನಿಂದ ಪಡೆದ ಮಾಹಿತಿಯಂತೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ಬಂಧನವಾಗಿದ್ದ ಐವರು ಶಂಕಿತ ಉಗ್ರರ ಪ್ರಕರಣಕ್ಕೆ ಸಂಬಂಧಿಸಿ ದಾಳಿಗಳು ನಡೆದಿವೆ. ಮುದಾಸಿರ್, ಜಾಹಿದ್, ತಬ್ರೇಜ್ ಮಹಮದ್ ಉಮರ್ ಸೇರಿ 5 ಜನರನ್ನು ಬಂಧಿಸಲಾಗಿತ್ತು.
ಹೆಬ್ಬಾಳ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಮೊದಲು ಸಿಸಿಬಿ ಅಧಿಕಾರಿಗಳು ಜುಲೈ 1ರಂದು ದಾಳಿ ಮಾಡಿದ್ದರು. ಈ ವೇಳೆ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ಈ ಪ್ರಕರಣ ಇತ್ತೀಚೆಗಷ್ಟೇ ಎನ್ಐಎಗೆ ವರ್ಗಾವಣೆ ಆಗಿತ್ತು.
ವಿಚಾರಣೆಯ ವೇಳೆ ವಿದೇಶದಿಂದ ಜುನೈದ್ ಎಂಬ ಉಗ್ರ ಆಪರೇಟ್ ಮಾಡುತ್ತಾ ಇದ್ದದ್ದು ಬೆಳಕಿಗೆ ಬಂದಿತ್ತು. ಜೊತೆಗೆ ಸರಣಿ ಬಾಂಬ್ ಬ್ಲಾಸ್ಟ್ ರೂವಾರಿ ನಾಸೀರ್ ಜೈಲಿನಲ್ಲಿ ಈ ಶಂಕಿತರಿಗೆ ಭಯೋತ್ಪಾದಕ ಕೃತ್ಯಗಳ ತರಬೇತಿ ನೀಡಿದ್ದ ಎಂಬುದು ತಿಳಿದುಬಂದಿತ್ತು.
ಈ ಸಂಬಂಧ ತನಿಖೆ ನಡೆಸುತ್ತಿರುವ ಎನ್ಐಎ ಇಂದು ನಡೆಸಿರುವ ದಾಳಿಯಲ್ಲಿ ಆರು ಕಡೆ ಮನೆಗಳ ಪರಿಶೀಲನೆ ಮಾಡಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.