ಮನೆ ರಾಜ್ಯ ರೈತನ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ

ರೈತನ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ

0

ಮಂಡ್ಯ: ಮಟಮಟ ಮಧ್ಯಾಹ್ನ ರೈತನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಶಿಕುಮಾರ್ (45) ಪ್ರಾಣಾಪಾಯದಿಂದ ಪಾರಾದ ರೈತ.

ಇಂದು ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಘಟನೆ ನಡೆದಿದ್ದು, ಮೇಕೆಯನ್ನು ಚಿರತೆ ಹೊತ್ತೊಯ್ದಿದೆ.

 ಚಿರತೆ ದಾಳಿಯಿಂದ ಗ್ರಾಮದ ಜನತೆ ಭಯಭೀತರಾಗಿದ್ದಾರೆ.

 ಚಾಮನಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಎರಡು ಚಿರತೆಗಳು ಬೀಡು ಬಿಟ್ಟಿವೆ. ಚಿರತೆಗಳ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.