ಬೆಂಗಳೂರು: ವಕೀಲರಾಗಿ ನೋಂದಾಯಿಸಿಕೊಂಡ 2 ವರ್ಷಗಳ ನಂತರವೂ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸು ಮಾಡದೆ, ವಕೀಲ ವೃತ್ತಿಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ವಕೀಲ ಪರಿಷತ್ತು (ಕೆಎಸ್ ಬಿಸಿ) ಎಚ್ಚರಿಸಿದೆ.
ಈ ಕುರಿತಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಪತ್ರ ಬರೆದಿರುವ ಕೆಎಸ್ ಬಿಸಿ, 2010 ಜುಲೈ 14ರ ಬಳಿಕ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿರುವವರು 2 ವರ್ಷಗಳಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆ ಪಾಸಾಗಿರಬೇಕು. ಇಲ್ಲವಾದರೆ ಅಂತಹವರು ವಕೀಲಿಕೆ ನಡೆಸುವಂತಿಲ್ಲ. ನ್ಯಾಯಾಲಯಗಳ ಮುಂದೆ ವಕೀಲರ ಸಮವಸ್ತ್ರ ಧರಿಸಿ ಹಾಜರಾಗುವಂತಿಲ್ಲ. ಹಾಗೂ ವಕಾಲತ್ತು ಸಲ್ಲಿಸುವಂತಿಲ್ಲ. ಹೀಗಿದ್ದೂ ಕೆಲವರು ನಿಯ, ಮೀರಿ ವರ್ತಿಸುತ್ತಿರುವುದು ಕೆಸ್ ಬಿಸಿ ಗಮನಕ್ಕೆ ಬಂದಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಥ ವಕೀಲರ ಸನ್ನದು (ಲೈಸೆನ್ಸ್) ಅಮಾನತು ಮಾಡಲಾಗುದು ಎಂದು ಕೆಎಸ್ ಬಿಸಿ ಹೇಳಿದೆ.
ಅಲ್ಲದೇ ಅಖಿಲ ಭಾರತ ವಕೀಲರ ಪರೀಕ್ಷೆ ಪೂರ್ಣಗೊಳಿಸದೇ ವಕಾಲತ್ತು ಹಾಕಿದ್ದ ಯಲಬುರ್ಗಾದ ವಕೀಲ ಆನಂದ್ ಎ ಉಳ್ಳಾಗಡ್ಡಿ ಅವರ ಲೈಸೆನ್ಸ್ ಅನ್ನು ಈಗಾಗಲೇ ಕೆಎಸ್ ಬಿಸಿ ಅಮಾನತುಗೊಳಿಸಿದೆ ಎಂದು ಪರಿಷತ್ತು ಪತ್ರದಲ್ಲಿ ತಿಳಿಸಿದೆ.
ಸದಸ್ಯತ್ವ ಕೊಡದಂತೆ ಮನವಿ
ಇನ್ನು ಎಐಬಿಇ ಪರೀಕ್ಷೆ ಪಾಸು ಮಾಡದ ಹಾಗೂ ಪ್ರಾಕ್ಟೀಸ್ ಪ್ರಮಾಣಪತ್ರ (ಸಿಒಪಿ) ಪಡೆಯದ ವಕೀಲರಿಗೆ ರಾಜ್ಯದ ಯಾವುದೇ ವಕೀಲರ ಸಂಘ ಸದಸ್ಯತ್ವ ನೀಡಬಾರದು ಹಾಗೂ ಎಐಬಿಇ ಪಾಸಾಗದೇ ಪ್ರಾಕ್ಟೀಸ್ ಮಾಡುತ್ತಿದ್ದರೆ ಅದನ್ನು ಕೆಎಸ್ ಬಿಸಿಗೆ ಸೂಕ್ತ ದಾಖಲೆಗಳೊಂದಿಗೆ ತಿಳಿಸಬೇಕು ಎಂದು ಕೆಸ್ ಬಿಸಿ ರಾಜ್ಯದ ರಲ್ಲಾ ವಕೀಲರ ಸಂಘಗಳಿಗೆ ಮನವಿ ಮಾಡಿದೆ. ಒಂದು ವೇಳೆ ಇಂತಹ ವಕೀಲರ ಕುರಿತು ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ ಬಿಸಿ ಪತ್ರದಲ್ಲಿ ಸ್ಪಷ್ಟಪಡಿಸಿದೆ.
2 ವರ್ಷ ಕಾಲಾವಕಾಶ
2010ರ ಜುಲೈ 14ರ ನಂತರ ಕಾನೂನು ಪದವಿ ಪಡೆದಿರುವ ವಕೀಲರು ಭಾರತೀಯ ವಕೀಲರ ಪರಿಷತ್ (ಬಿಸಿಐ) ನಡೆಸುವ ಎಐಬಿಇ ಪರೀಕ್ಷೆ ಪಾಸು ಮಾಡುವುದು ಕಡ್ಡಾಯ. ವಕೀಲರಾಗಿ ನೋಂದಾಯಿಸಿಕೊಂಡ 2 ವರ್ಷಗಳಲ್ಲಿ ಎಐಬಿಇ ಪರೀಕ್ಷೆ ಉತ್ತೀರ್ಣರಾಗದಿದ್ದಲ್ಲಿ ವಕೀಲ ವೃತ್ತಿ ನಡೆಸುವಂತಿಲ್ಲ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.