ಮನೆ ಸುದ್ದಿ ಜಾಲ ಚಾಮರಾಜನಗರ: ಸೂರ್ಯನ ಸುತ್ತ ವೃತ್ತಾಕಾರದ ರಚನೆ ಗೋಚರ

ಚಾಮರಾಜನಗರ: ಸೂರ್ಯನ ಸುತ್ತ ವೃತ್ತಾಕಾರದ ರಚನೆ ಗೋಚರ

0

ಚಾಮರಾಜನಗರ(Chamarajanagara): ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಬುಧವಾರ ಆಗಸದಲ್ಲಿ ಸೂರ್ಯನ ಸುತ್ತ ವೃತ್ತಾಕಾರದ ರಚನೆ ಗೋಚರಿಸಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ.

ಬೆಳಿಗ್ಗೆ 11 ಗಂಟೆಯ ನಂತರ ಈ ಅಪರೂಪದ ವಿದ್ಯಾಮಾನ ಘಟಿಸಿದ್ದು,  ಹಲವರು ಮೊಬೈಲ್, ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಬಿದ್ದು ವಕ್ರೀಭವನಗೊಂಡಾಗ ವೃತ್ತ ಗೋಚರಿಸುತ್ತದೆ.