ಮನೆ ಅಪರಾಧ ಉದ್ಯಮಿ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ ಏಳು ಮಂದಿ ಬಂಧನ

ಉದ್ಯಮಿ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ ಏಳು ಮಂದಿ ಬಂಧನ

0

ಬೆಂಗಳೂರು(Bengaluru): ಮೆಟಲ್ ಫ್ಯಾಬ್ರಿಕೇಟರ್ ಉದ್ಯಮಿ ಚಂದ್ರಾ ಲೇಔಟ್ ಪ್ರದೇಶದ 9ನೇ ಮುಖ್ಯ ಬಿಸಿಸಿ ಲೇಔಟ್ ನಿವಾಸಿ ಜೋಹೆಬ್ ಅಬ್ರಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿಯನ್ನು  ಚಂದ್ರಾ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಶಾಫಿ, ಶಬ್ಬೀರ್ ಹುಸೇನ್, ಹನ್ನಾನ್ ಪಾಷಾ, ಮೊಹಮ್ಮದ್ ಮುಬಾರಕ್, ಥಬ್ರೇಜ್ ಪಾಷಾ, ನದೀಮ್ ಪಾಷಾ ಮತ್ತು ತನ್ವೀರ್ ಪಾಷಾ ಬಂಧಿತರು.  ಪೊಲೀಸರು ಆರೋಪಿಗಳಿಂದ ಕಾರು, ಬ್ಯಾಗ್ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

33 ವರ್ಷದ ಉದ್ಯಮಿ ಜೋಹೆಬ್ ಅಬ್ರಾರ್ ರನ್ನು ಅಪಹರಿಸಿ ಭಾನುವಾರ ನಸುಕಿನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.  ಮಿನಾಜ್ ನಗರದ ನಿವಾಸಿ ಅಬ್ರಾರ್ ಅವರ ತಾಯಿ ಫರೀದಾ ಸುಲ್ತಾನಾ (58) ಈ ಸಂಬಂಧ ದೂರು ದಾಖಲಿಸಿದ್ದರು. ಅಬ್ರಾರ್ ಮತ್ತು ಶಬ್ರೀನ್ ಖನ್ನೂಮ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.