ಮನೆ ಅಂತಾರಾಷ್ಟ್ರೀಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ

ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನಸುಕಿನಲ್ಲಿ 5ರ ತೀವ್ರತೆಯ ಭೂಕಂಪ ಸಂಭವಿಸಿರುವುದು ವರದಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NSC) ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 5 ಅಳತೆಯ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಆದಾಗ್ಯೂ, ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಯನ್ನು ಸ್ವೀಕರಿಸಲಾಗಿಲ್ಲ. ವಿಪತ್ತು ನಿರ್ವಹಣಾ ಅಧಿಕಾರಿಗಳ ಪ್ರಕಾರ, ರಿಕ್ಟರ್ ಮಾಪಕದಲ್ಲಿ 5 ಅಳತೆಯ ಭೂಕಂಪನ ಗುರುವಾರ ಬೆಳಿಗ್ಗೆ 5.35 ಕ್ಕೆ ಸಂಭವಿಸಿದೆ.

ಭೂಕಂಪದ ಕೇಂದ್ರಬಿಂದು ತಜಕಿಸ್ತಾನದ ಗೊರ್ನೊ-ಬದಕ್ಷನ್ ಪ್ರದೇಶದಲ್ಲಿತ್ತು. ಇದರ ನಿರ್ದೇಶಾಂಕಗಳು ಅಕ್ಷಾಂಶ 37.49 ಡಿಗ್ರಿ ಉತ್ತರ ಮತ್ತು ರೇಖಾಂಶ 71.85 ಡಿಗ್ರಿ ಪೂರ್ವದಲ್ಲಿದೆ. ಇದು ಭೂಮಿಯ ಹೊರಪದರದಲ್ಲಿ 108 ಕಿಮೀ ಒಳಗೆ ಸಂಭವಿಸಿದೆ” ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.