ಮನೆ ಅಪರಾಧ ಅಕ್ರಮ ಗಣಿಗಾರಿಕೆ ದಂಧೆಕೋರರಿಂದ ವ್ಯಕ್ತಿ ಮೇಲೆ ಹಲ್ಲೆ

ಅಕ್ರಮ ಗಣಿಗಾರಿಕೆ ದಂಧೆಕೋರರಿಂದ ವ್ಯಕ್ತಿ ಮೇಲೆ ಹಲ್ಲೆ

0

ನಾಗಮಂಗಲ: ಕೃಷಿ ಜಮೀನು ಕಬಳಿಕೆ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮಾಡುವ ದುರುದ್ದೇಶ ಹೊಂದಿರುವ ದುಷ್ಕರ್ಮಿಗಳು ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಬಸವೇಶ್ವರನಗರದ ಮಾದೇವಮ್ಮ-ಗುರುಸ್ವಾಮಿ ಪುತ್ರ ರುದ್ರೇಶ್ ಮೇಲೆ ಹಲ್ಲೆ ಮಾಡಲಾಗಿದೆ.

ಬಸವೇಶ್ವರನಗರದ ಮುಖ್ಯ ರಸ್ತೆಯಲ್ಲಿ ಸೋಮವಾರ ತಡರಾತ್ರಿ ದುಷ್ಕೃತ್ಯ ನಡೆದಿದ್ದು,ಹಲ್ಲೆಗೊಳಗಾದ ವ್ಯಕ್ತಿ ರುದ್ರೇಶ್ ಅವರನ್ನು ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರುದ್ರೇಶ್ ಮಾತನಾಡಿ ಸಂಕನಹಳ್ಳಿ ಸರ್ವೆ ನಂ. 54 ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುವ ಉದ್ದೇಶದಿಂದ ಹಲವಾರು ತಿಂಗಳಿಂದ ನಮಗೆ ಕಿರುಕುಳ ನೀಡುತ್ತಿದ್ದಾರೆ ಕಳೆದ ವಾರ ಮನೆ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದರು.ಈ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆವು,ಇದರಿಂದ ಕುಪಿತಕೊಂಡ ಅಕ್ರಮ ಗಣಿಗಾರಿಕೆ ದಂಧೆ ಕೋರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ,ನನಗೆ ಪ್ರಾಣ ಭಯವಿದೆ ಪೊಲೀಸರು ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು

ರುದ್ರೇಶ್ ಧರ್ಮಪತ್ನಿ ಭವ್ಯ ಮಾತನಾಡಿ ನಮ್ಮ ಕೃಷಿ ಜಮೀನನ್ನು ಕಲ್ಲು ಗಣಿಗಾರಿಕೆಗೆ ಬಳಸಿಕೊಳ್ಳುವ ಉದ್ದೇಶದಿಂದ ಗಂಡನ ಮೇಲೆ ಕೊಲೆ ಪ್ರಯತ್ನ ಮಾಡಿದ್ದಾರೆ ಗಣಿಗಾರಿಕೆಯನ್ನು ನಿಲ್ಲಿಸಿ ಕೃಷಿ ಚಟುವಟಿಕೆ ಮಾಡಲು ನಮಗೆ ಅವಕಾಶ ನೀಡಿ ನ್ಯಾಯ ಒದಗಿಸಬೇಕೆಂದರು.

ಸಹೋದರಿ ಮಂಜುಳಾ ಮಾತನಾಡಿ ಕೃಷಿ ಚಟುವಟಿಕೆ ಮಾಡುತ್ತಿರುವ ನಮ್ಮ ಮೇಲೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ ಸರ್ವೆ ನಂ.54ರ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು.