ಮನೆ ಸುದ್ದಿ ಜಾಲ ಕೃಷಿ ಸಾಲಕ್ಕೆ ಸಿವಿಲ್ ಸ್ಕೋರ್ ಮಾನದಂಡ ರದ್ದಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ

ಕೃಷಿ ಸಾಲಕ್ಕೆ ಸಿವಿಲ್ ಸ್ಕೋರ್ ಮಾನದಂಡ ರದ್ದಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ

0

ಮೈಸೂರು(Mysuru): ಕೃಷಿ ಸಾಲ ನೀಡುವಾಗ ರೈತರ ಸಿವಿಲ್ ಸ್ಕೋರ್ ಅನ್ನು ಪರಿಗಣಿಸಿ ಸಾಲ ನೀಡುವ ಪದ್ಧತಿಯನ್ನು ರದ್ದುಗೊಳಿಸಬೇಕು ಅತಿವೃಷ್ಟಿ-ಅನಾವೃಷ್ಟಿಯಾದಾಗ ಬೆಳೆನಷ್ಟ ಆದಾಗ ಸಾಲ ತೀರಿಸಲು ಸಂಕಷ್ಟ ಕಷ್ಟಪಡುವ ರೈತ ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ ರೈತನ ಸಿವಿಲ್ ಪರಿಗಣಿಸಿದಾಗ ಸಾಲವೇ ಸಿಗುವುದಿಲ್ಲ. ಈ ನಿಯಮವನ್ನು ರದ್ದುಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಇಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಕರೆದಿದ್ದ ಸಭೆಯಲ್ಲಿ ರೈತ ಮುಖಂಡರು ಒಕ್ಕೊರಲಿನ ಆಗ್ರಹ ಮಾಡಿದರು

ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ  ನಿಯಮಾವಳಿಯನ್ನು ತಿದ್ದುಪಡಿ ಮಾಡುವಂತೆ ಸಭೆಯ ಆಗ್ರಹ ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು

ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಸರ್ಕಾರಿ ಭೂಮಿ ಗುಳುಂ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು ಎಂದಾಗ ಜಿಲ್ಲೆಯ ಎಲ್ಲಾ ಕೆರೆಗಳನ್ನು ಸಂರಕ್ಷಿಸಲಾಗುವುದು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಗ್ರಾಮ ಪಂಚಾಯಿತಿ  ಪಿಡಿಓ ಗಳು ಇದರ ಹೊಣೆ ಒತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ದೂರು ಸಲ್ಲಿಸಿದರೆ ಕೂಡಲೇ ಕ್ರಮಕೈಗೊಳ್ಳಲು ಸೂಚನೆ ನೀಡಿದರು

ಸಕ್ಕರೆ ಕಾರ್ಖಾನೆಯವರು ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಮಾಡಿದೆ ಇರುವ ಬಗ್ಗೆ ಕಾನೂನಿನ ಪ್ರಕಾರ 14 ದಿನದ ಒಳಗಾಗಿ ಹಣ ಪಾವತಿ ವಿಳಂಬ ಮಾಡುತ್ತಿರುವುದಕ್ಕೆ 15ರಷ್ಟು ಬಡ್ಡಿ ಸೇರಿಸಿ ಕೊಡಬೇಕೆಂದು ಹಾಗೂ ಕಬ್ಬು ಕಟಾವು ಸಾಗಾಣಿಕೆ  ಕೂಲಿ ರೈತರ ಸುಲಿಗೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮಕೈಗೊಳ್ಳಲು ಜಿಲ್ಲಾ ಆಹಾರ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಖರೀದಿ ಮಿತಿ ವಿಧಿಸಿರುವುದು, ರೈತರಿಗೆ ಸಹಕಾರಿಯಲ್ಲದ ಮಾನದಂಡಗಳನ್ನು ವಿಧಿಸುವುದು ಸರಿಯಲ್ಲ ಪಂಜಾಬ್ ಹರಿಯಾಣ ತೆಲಂಗಾಣ ಮಾದರಿಯಂತೆ ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದಾಗ ರಾಜ್ಯ ಸರ್ಕಾರಕ್ಕೆ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೂಸೂರು ಕುಮಾರ್ , ಹೊಸಕೋಟೆ ಬಸವರಾಜ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸಾಮೂಹಿಕ ನಾಯಕತ್ವ ಸಂಘದ ವಿದ್ಯಾಸಾಗರ್, ಮಂಜುಕಿರಣ್, ಬರಡನಪುರನಾಗರಾಜ್, ಬನ್ನೂರ್ ನಾರಾಯಣ್ ಮುಂತಾದ ರೈತ ಮುಖಂಡರು ಇದ್ದರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ  ಪೊಲೀಸ್ ಆರಕ್ಷಕ ಅಧೀಕ್ಷಕ ಮೈಸೂರು ಮತ್ತು ಹುಣಸೂರು ವಿಭಾಗದ ಉಪವಿಭಾಗಾಧಿಕಾರಿಗಳು, ಕೃಷಿ ಇಲಾಖೆ, ಲೀಡ್ ಬ್ಯಾಂಕ್ ,ಆಹಾರ ಇಲಾಖೆ, ಅಧಿಕಾರಿಗಳು ಉಪಸ್ಥಿತರಿದ್ದರು.