ಮನೆ ಅಪರಾಧ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದಿದ್ದ ಐವರ ಗ್ಯಾಂಗ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದಿದ್ದ ಐವರ ಗ್ಯಾಂಗ್ ಬಂಧನ

0

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ವೃದ್ಧೆಯೊಬ್ಬರ ಮನೆಯ ಮೇಲೆ ಬ್ಯಾಂಕ್ ಲೋನ್ ಪಡೆದಿದ್ದ ಐವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೃದ್ಧೆ ಮನೆ ಮಾರಾಟ ಮಾಡಿ‌ ವಿದೇಶಕ್ಕೆ‌ ತೆರಳಲು ತೀರ್ಮಾನಿದ್ದರು. ಈ ವಿಚಾರವನ್ನು ಪಕ್ಕದ ಮನೆಯ ನಿವಾಸಿ ಮಂಜುನಾಥ್ ಬಳಿ ಹೇಳಿಕೊಂಡಿದ್ದರು. ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಮಂಜುನಾಥ, ತನ್ನ ಸ್ನೇಹಿತರ ಜೊತೆಗೆ ಸೇರಿ ಲೋನ್ ಪಡೆದು ವಂಚನೆ ಎಸಗಿದ್ದಾನೆ.

ಪ್ರಕರಣದ ತನಿಖೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ಗಳ ಯಡವಟ್ಟು ಬೆಳಕಿಗೆ ಬಂದಿದೆ.