ಯಾದಗಿರಿ: ವನ್ಯಜೀವಿಗಳ ಬೇಟೆಯಾಡಿ, ವನ್ಯ ಜೀವಿಗಳ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಬಂಧನ ಮಾಡಲಾಗಿದೆ.
ಯಾದಗಿರಿ ತಾಲೂಕಿನ ದುಪ್ಪಲ್ಲಿಯ ನಿವಾಸಿ ಮಹೇಶ ಹಾಗೂ ಯಾದಗಿರಿ ನಗರದ ನಿವಾಸಿ ಆನಂದ ಬಂಧನವಾಗಿದ್ದು, ಸೈದಾಪುರ ಹೊಬಳಿ ವ್ಯಾಪ್ತಿಯ ಜಮೀನು ಪ್ರದೇಶಗಳಲ್ಲಿ ವನ್ಯಜೀವಿಗಳ ಬೇಟೆಯಾಡಿ ಮಾಂಸ ಹಾಗೂ ವನ್ಯಜೀವಿಗಳ ತಲೆ ಬುರುಡೆ, ಮೂಳೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕೃಷ್ಣ ಮೃಗ, ಉಡ, ಮುಳ್ಳು ಹಂದಿ, ನವಿಲುಗಳು, ಕಾಡು ಹಂದಿ ಸೇರಿದಂತೆ ವಿವಿಧ ವನ್ಯಜೀವಿಗಳನ್ನು ಬೇಟೆಯಾಡಿ ಮಾಂಸ ಹಾಗೂ ಮೂಳೆಗಳನ್ನು ಮಾರಾಟ ಮಾಡುತ್ತಿದ್ದ ಖದೀಮರು ಇವರಾಗಿದ್ದಾರೆ ಎನ್ನುವುದು ಸಾಬೀತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ
ಬಂಧಿತರಿಂದ ವನ್ಯಜೀವಿಗಳ ಮಾಂಸ ಹಾಗೂ ಮೂಳೆಗಳ ಜಪ್ತಿ ಮಾಡಲಾಗಿದೆ.