ಮನೆ ರಾಜ್ಯ ಜ.26ರಿಂದ 28ರವರೆಗೆ ಶ.ಪ.ಪೂ.ಲಿಂ.ಶ್ರೀ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ 130ನೇ ಜಯಂತಿ, ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ...

ಜ.26ರಿಂದ 28ರವರೆಗೆ ಶ.ಪ.ಪೂ.ಲಿಂ.ಶ್ರೀ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ 130ನೇ ಜಯಂತಿ, ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಪಟ್ಟಾಧಿಕಾರ ರಜತ ಮಹೋತ್ಸವ

0

ಶ್ರೀರಂಗಪಟ್ಟಣ: ಡಿಎಂಎಸ್‍ ಚಂದ್ರವನ ಆಶ್ರಮದ ವತಿಯಿಂದ ಶ.ಪ.ಪೂ.ಲಿಂ.ಶ್ರೀ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ 130ನೇ ಜಯಂತಿ ಹಾಗೂ ಶ್ರೀ ಕ್ಷೇತ್ರ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ 25ನೇ ವರ್ಷ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭವನ್ನು ಜ.26ರಿಂದ 28ರವರೆಗೆ ಶ್ರೀರಂಗಪಟ್ಟಣ ಡಿಎಂಎಸ್‍ ಚಂದ್ರವನ ಆಶ್ರಮದಲ್ಲಿ ಆಯೋಜಿಸಲಾಗಿದೆ.

ಜ.26 ರ ಬೆಳಿಗಗೆ 6 ಗಂಟೆಗೆ ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ನವದುರ್ಗಿಯರ ಪೂಜೆ ಮತ್ತು ಪ್ರಧಾನ ಕಳಸ ಪೂಜಾ ಕಾರ್ಯ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ನಂಜನಗೂಡು ತಾಲ್ಲೂಕಿನ ಬಸವನಪುರ ಮಲ್ಲನಮೂಲೆಮಠದ ಶ್ರೀ ಷ.ಬ್ರ.ಸ್ವ ಚನ್ನಬಸವ ಸ್ವಾಮಿಗಳು ಷಟ್ ಸ್ಥಳ ಧ್ವಜಾರೋಹಣ ಮಾಡುವರು.

ಸಂಜೆ 5 ಗಂಟೆಗೆ ಭಕ್ತಾದಿಗಳಿಂದ ನಾಣ್ಯ, ನವಧಾನ್ಯ, ಅಕ್ಕಿ, ಬೆಲ್ಲಗಳಿಂದ ಶ್ರೀಗಳಿಗೆ ತುಲಾಭಾರ ಸೇವೆ ನಡೆಯಲಿದೆ.  ಸಂಜೆ 6 ಗಂಟೆಗೆ ಶ್ರೀಗಳ ಪೂರ್ವಾಶ್ರಮ ಆಧಾರಿತ ಚಂದ್ರವನ ಸಿರಿ ಸಾಕ್ಷ್ಯಚಿತ್ರವನ್ನು ವಿಭೂತಿಪುರ ಮಠದ ಶ್ರೀ ಷ.ಬ್ರ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಲಿದ್ದಾರೆ.

ಸಂಜೆ 6.30ಕ್ಕೆ ಡಿಎಂಎಸ್ ಜ್ಞಾನಕುಟೀರ್ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೇಬಿಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು, ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನದ ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ತಿ.ನರಸೀಪುರ ತಾಲ್ಲೂಕಿನ ವಾಟಾಳು ಸೂರ್ಯಸಿಂಹಾಸನ ಮಠದ ಶ್ರೀ ಷ.ಬ್ರ.ಸ್ವ ಡಾ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಬಳ್ಳಾರಿಯ ಕಲ್ಯಾಣಸ್ವಾಮಿ ಸಂಸ್ಥಾನಮಠದ ಶ್ರೀ ಮ.ನಿ.ಪ್ರ ಕಲ್ಯಾಣ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ.ಎಸ್ ರವೀಂದ್ರ ಶೀಕಂಠಯ್ಯ ವಹಿಸಲಿದ್ದಾರೆ.

ಜ.27 ರಂದು  ಬೆಳಿಗ್ಗೆ 6 ಗಂಟೆಗೆ ಶ್ರೀ ಕಾಶೀಚಂದ್ರಮೌಳೇಶ್ವರ ಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಕುಂಕುಮಾರ್ಚನೆ, ಮಹಾಮಂಗಳಾರತಿ ಮತ್ತ ತೀರ್ಥಪ್ರಸಾದ ವಿತರಣೆ ಕಾರ್ಯ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಶ್ರೀಗಳಿಗೆ ತುಲಾಭಾರ ಸೇವೆ ನಡೆಯಲಿದ್ದು, 10 ಗಂಟೆಗೆ ಅಶ್ವಿನಿ ಮತ್ತು ತಂಡದಿಂದ ಭಕ್ತಿಗೀತೆ ಮತ್ತು ವಚನಗಾಯನವಿರಲಿದೆ.

ಬೆಳಿಗ್ಗೆ 11 ಗಂಟೆಗೆ ಶ್ರೀ ತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ 3ನೇ ವರ್ಷದ ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿದ್ದು, ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ಬೇಬಿಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ವಹಿಸಲಿದ್ದು, ತುಮಕೂರಿನ ಚಿಕ್ಕಪೇಟೆ ಹಿರೇಮಠದ ಡಾ.ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವ ಸಮಗ್ರ ಆರೋಗ್ಯ ಟ್ರಸ್ಟ್ ಸ್ವಾಮಿ ವಿವೇಕಾನಂದ ಯೋಗ ಅಧ್ಯಯನ ಸಂಸ್ಥಾಪಕ ಡಾ.ಯೋಗಿ ದೇವರಾಜ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥರು ಡಾ.ಜಯರೇವಣ್ಣ ಎಂ.ವಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದೇ ವೇಳೆ ಬೆಂಗಳೂರಿನ ನವನೀತ್ ಕುಮಾರ್ ಅವರಿಂದ 1008 ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಸಂಜೆ 4 ಗಂಟೆಗೆ ಧಾರವಾಡದ ಬೆಟಗೇರಿಯ ತ್ರಿವೇಣಿ ಎಂ. ಅವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.

ಸಂಜೆ 4.30ಕ್ಕೆ ಸಂತರ ಮಹಾಸಂಗಾಮ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಜಿಲ್ಲೆಗಳ ಸಂತರು ಪಾಲ್ಗೊಳ್ಳಲಿದ್ದಾರೆ.

ಜ. 28 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,  ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು  ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ನಾಗಮಂಗಲದ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಆದಿಚುಂಚನಗಿರಿ ಮಹಾಂಸ್ಥಾನ ಮಠದ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಹಾಗೂ ತುಮಕೂರು ಶ್ರೀಕ್ಷೇತ್ರ ಸಿದ್ದಗಂಗಾಗ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಪೂಜ್ಯರಿಂದ ‘ತ್ರಿನೇತ್ರ ಶ್ರೀಗಳ ಜಲಯೋಗ’ ಹಾಗೂ ಶತಾಯುಷಿ ಶ್ರೀ ಮರಿದೇವರ ಶಿವಯೋಗ ಚರಿತೆ ಮತ್ತು The Ripple Effect of Spirituality (ಇದು ಅಂತರಂಗದ ಸುದ್ದಿ ಮಹಂತಮಯಿ) ಪುಸ್ತಕ ಬಿಡುಗಡೆ ಮಾಡಲಾಗುತ್ತದೆ.

ಡಿಎಂಎಸ್ ಆಯುರ್ವೇದ ಆಸ್ಪತ್ರೆಯನ್ನು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡು ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಧ್ಯಾನ ಮಂದಿರ ಉದ್ಘಾಟಿಸಲಿದ್ದಾರೆ.  ಮಾಜಿ ರಾಜ್ಯಪಾಲರಾದ ಎಸ್.ಎಂ.ಕೃಷ್ಣ ಅವರು ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಜಿ.ಟಿ.ದೇವೇಗೌಡರು ವಹಿಸಲಿದ್ದಾರೆ.