ಮನೆ ಸ್ಥಳೀಯ ಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಜಾರ್ಜಿಯನ್ ತಂಡದವರಿಂದ ಸಾಂಸ್ಕೃತಿಕ ಪ್ರದರ್ಶನ

ಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಜಾರ್ಜಿಯನ್ ತಂಡದವರಿಂದ ಸಾಂಸ್ಕೃತಿಕ ಪ್ರದರ್ಶನ

0

ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಮೈಸೂರು ಫೆಸ್ಟ್ ಕಾರ್ಯಕ್ರಮವು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿದ್ದು ಜನವರಿ 28 ರಂದು ಸಂಜೆ 4 ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಇಂಡಿಯಾ ಜಾರ್ಜಿಯನ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.

ಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಅತ್ಯಂತ ಗಮನಾರ್ಹವಾದ ಸಾಂಸ್ಕೃತಿಕ ಪ್ರದರ್ಶನ ಇದಾಗಿದ್ದು ವಿಶ್ವ ಪ್ರಸಿದ್ಧ ಸಂಗೀತ ಸ್ಥಳಗಳಲ್ಲಿ ಜಾರ್ಜಿಯಾ ಸಾಂಸ್ಕೃತಿಕ ತಂಡದವರು ಅವರು ಜನವರಿ 28 ರಂದು ಪ್ರದರ್ಶನವನ್ನು ಮೈಸೂರಿನಲ್ಲಿ ನೀಡುವರು.

ಜಾರ್ಜಿಯಾ ಸಂಗೀತವು ವಿಶ್ವದ ವಿಶಿಷ್ಟ ಹಾಗೂ ಆಕರ್ಷಕ ಸಂಗೀತ ಶೈಲಿಗಳಲ್ಲಿ ಹೊಂದಾಗಿದೆ. ಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಇವರ ಪ್ರದರ್ಶನವನ್ನು ಕಣ್ ತುಂಬಿಕೊಳ್ಳಬಹುದಾಗಿದೆ.