ಮನೆ ರಾಷ್ಟ್ರೀಯ 1 ಗಂಟೆಯಲ್ಲಿ ಬಜೆಟ್ ಓದಿ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

1 ಗಂಟೆಯಲ್ಲಿ ಬಜೆಟ್ ಓದಿ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

0

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಗುರುವಾರದಂದು ಲೋಕಸಭೆಯಲ್ಲಿ 2024-25ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಿದರು.

ಇದಕ್ಕೆ ಅವರು ತಗೆದುಕೊಂಡಿದ್ದ ಕೇವಲ 1 ಗಂಟೆ ಮಾತ್ರ . ಅತಿ ದೊಡ್ಡ ಬಜೆಟ್ ಭಾಷಣದ ಹೆಗ್ಗಳಿಯೂ ಅವರದ್ದೇ ಆಗಿದೆ. 2023ರಲ್ಲಿ ಕೇವಲ 87 ನಿಮಿಷಗಳನ್ನು ತೆಗೆದುಕೊಂಡಿದ್ದರು. 2020ರಲ್ಲಿ ಬರೋಬ್ಬರಿ 2 ಗಂಟೆ 45 ನಿಮಿಷಗಳ ದೀರ್ಘಕಾಲದ ಬಜೆಟ್ ಮಂಡಿಸಿದ್ದರು. ತಮ್ಮ ಪ್ರಕಟಣೆಯ ನಡುವೆ ಬ್ರೇಕ್ ತೆಗೆದುಕೊಂಡು ನೀರು ಕುಡಿದು ಬಳಿಕ ಬಜೆಟ್​ ಓದುವುದನ್ನು ಮುಂದುವರೆಸಿದ್ದರು.

ಬಜೆಟ್ ಮಂಡನೆಯ ಇತಿಹಾಸದಲ್ಲಿ ಅಷ್ಟು ದೀರ್ಘಾವಧಿಯ ಭಾಷಣವನ್ನು ಯಾರೂ ಮಾಡಿರಲಿಲ್ಲ ಎಂದು ಹೇಳಲಾಗಿತ್ತು. ಇದೀಗ ಅವರು ಕೇವಲ 1 ಗಂಟೆಗಳ ಕಾಲ ಬಜೆಟ್​ ಮಂಡಿಸಿರುವುದು ಆಶ್ಚರ್ಯ ಮೂಡಿಸಿದೆ. 2022ರಲ್ಲಿ 92 ನಿಮಿಷಗಳ ಬಜೆಟ್​ ಮಂಡಿಸಿದ್ದರು.

1977ರಲ್ಲಿ ಹೀರೂಭಾಯಿ ಎಂ. ಪಟೇಲ್ ಎಂಬುವರು ಕೇವಲ 800 ಪದದ ಭಾಷಣವನ್ನು ಪ್ರಾಯಶಃ ಅರ್ಧಗಂಟೆಗೂ ಕಡಿಮೆ ಅವಧಿಯಲ್ಲಿ ಓದಿ ಮುಗಿಸಿದ್ದರು. 2021ರಲ್ಲಿ ಅವರು ಒಂದು ಗಂಟೆ 50 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದರು. ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು 2019ರಲ್ಲಿ. ಆ ವರ್ಷ ಅವರು, 2 ಗಂಟೆ 17 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದರು.

ಬಜೆಟ್​ ಪ್ರಮುಖಾಂಶಗಳು :

ಪ್ರಧಾನ ಮಂತ್ರಿ ಆವಾಸ್ ಅಡಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ 70 ಪ್ರತಿಶತ ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ. -2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ.

ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ, 54 ಲಕ್ಷ ಯುವಕರಿಗೆ ತರಬೇತಿ ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಿದೆ.

ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.

ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಪ್ರಮಾಣದಲ್ಲಿ ಶೇ.3 ರಷ್ಟು ಹೆಚ್ಚಳವಾಗಿದೆ. 2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ.

ವಿತ್ತೀಯ ಕೊರತೆಯ ಮೇಲೆ ಹಿಡಿತ ಸಾಧಿಸಲಾಗಿದೆ. 23-24ನೇ ಹಣಕಾಸು ವರ್ಷಕ್ಕೆ ಪರಿಷ್ಕೃತ ವಿತ್ತೀಯ ಕೊರತೆ ಶೇ 5.8 ನಿಗದಿಪಡಿಸಲಾಗಿದೆ.

ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಿದೆ. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಪ್ರತ್ಯೇಕ ಮತ್ಸ ಸಂಪದ ಯೋಜನೆ ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ ವಿಸ್ತರಿಸಲಾಗುವುದು. ಜೈಜವಾನ್, ಜೈಕಿಸಾನ್, ಜೈವಿಜ್ಞಾನ, ಜೈ ಅನುಸಂಧಾನ ಎಂಬ ಪ್ರಧಾನಿ ಮೋದಿ ಅವರ ಘೋಷಣೆಯಡಿ ಕಾರ್ಯನಿರ್ವಹಿಸುತ್ತೇವೆ.

ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.