ಮನೆ ಸುದ್ದಿ ಜಾಲ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆಗೊಳಿಸುವ ಅಂತಿಮ ಆದೇಶಕ್ಕೆ ಡಿಲಿಮಿಟೇಶನ್ ಪ್ಯಾನೆಲ್ ಸಹಿ

ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆಗೊಳಿಸುವ ಅಂತಿಮ ಆದೇಶಕ್ಕೆ ಡಿಲಿಮಿಟೇಶನ್ ಪ್ಯಾನೆಲ್ ಸಹಿ

0

ನವದೆಹಲಿ(New Delhi): ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಜಮ್ಮು ಮತ್ತು ಕಾಶ್ಮೀರದ ಮೂರು ಸದಸ್ಯರ ಡಿಲಿಮಿಟೇಶನ್ ಆಯೋಗವು ಗುರುವಾರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆಗೊಳಿಸುವ ಅಂತಿಮ ಆದೇಶಕ್ಕೆ ಸಹಿ ಹಾಕಿದೆ.

ಈ ಆದೇಶದ ಪ್ರತಿ ಮತ್ತು ಕ್ಷೇತ್ರಗಳ ಸಂಖ್ಯೆ ಮತ್ತು ಅವುಗಳ ಗಾತ್ರವನ್ನು ವಿವರಿಸುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ರಾಜ್ಯಪತ್ರದ ಮೂಲಕ ಆದೇಶವನ್ನು ಹೊರಡಿಸಲಾಗುತ್ತದೆ. ಕೇಂದ್ರಾಡಳಿತ ಪ್ರದೇಶದ ಸ್ಥಾನಗಳ ಸಂಖ್ಯೆಯನ್ನು 83 ರಿಂದ 90ಕ್ಕೆ ಹೆಚ್ಚಿಸಲು ಆಯೋಗವು ಪ್ರಸ್ತಾಪಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ 24 ಸ್ಥಾನಗಳು ಖಾಲಿ ಉಳಿದಿವೆ. ಮೊದಲ ಬಾರಿಗೆ, ಪರಿಶಿಷ್ಟ ಪಂಗಡಕ್ಕೆ ಒಂಬತ್ತು ಸ್ಥಾನಗಳನ್ನು ಪ್ರಸ್ತಾಪಿಸಲಾಗಿದೆ. ಸಮಿತಿಯು ಜಮ್ಮುವಿಗೆ ಆರು ಮತ್ತು ಕಾಶ್ಮೀರಕ್ಕೆ ಒಂದು ಹೆಚ್ಚುವರಿ ಸ್ಥಾನವನ್ನು ಪ್ರಸ್ತಾಪಿಸಿದೆ.

ಕಾಶ್ಮೀರದಲ್ಲಿ 46 ಸ್ಥಾನ ಮತ್ತು ಜಮ್ಮು 37 ಸ್ಥಾನಗಳನ್ನು ಹೊಂದಿದೆ. ಮಾರ್ಚ್ 2020ರಲ್ಲಿ ರಚನೆಯಾದ ಸಮಿತಿಗೆ ಕಳೆದ ವರ್ಷ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಗಿತ್ತು. 

ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಚುನಾವಣಾ ಆಯುಕ್ತರನ್ನು ಅದರ ಪದನಿಮಿತ್ತ ಸದಸ್ಯರನ್ನಾಗಿ ಹೊಂದಿದೆ.

ಹಿಂದಿನ ಲೇಖನಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜೈಲು ಶಿಕ್ಷೆ
ಮುಂದಿನ ಲೇಖನರೀಪ್ ಬೆನಿಫಿಟ್ ಫೌಂಡೇಶನ್ ಜೊತೆ ಮೈಸೂರು ವಿವಿ ಒಪ್ಪಂದ