ಮನೆ ಅಪರಾಧ ನಕಲಿ ವೈದ್ಯರ ಕ್ಲಿನಿಕ್​ ಗಳ ಮೇಲೆ ದಾಳಿ: 109 ನಕಲಿ ವೈದ್ಯರು ಪತ್ತೆ

ನಕಲಿ ವೈದ್ಯರ ಕ್ಲಿನಿಕ್​ ಗಳ ಮೇಲೆ ದಾಳಿ: 109 ನಕಲಿ ವೈದ್ಯರು ಪತ್ತೆ

0

ಕಲಬುರಗಿ: ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್​ ಗಳ ಮೇಲೆ ದಾಳಿ ನಡೆಸಿದ್ದು, 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಟೀಂ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ.

ಜಿಲ್ಲೆಯಲ್ಲಿ 109 ನಕಲಿ ವೈದ್ಯರನ್ನು ಪತ್ತೆ ಮಾಡಿ 43 ಕ್ಲಿನಿಕ್ ​ಗಳನ್ನ ಬಂದ್ ಮಾಡಿಸಿದ್ದಾರೆ. ಕೆಪಿಎಂಇ ಅನುಮತಿ ಪಡೆಯದೆ ಚಿಕಿತ್ಸೆ ನೀಡ್ತಿರುವ ಕ್ಲಿನಿಕ್ ​ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ನೀಡಿದ ಮೇಲೂ ಅನುಮತಿ ಪಡೆಯದಿದ್ರೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ‌ ನೀಡಲಾಗಿದೆ.