ಮನೆ ರಾಜ್ಯ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಲಾರದು, ಲೂಟಿ ಹೊಡೆದು ಖಾಲಿ ಮಾಡಿದ್ದಾರೆ: ಹೆಚ್.ಡಿ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಲಾರದು, ಲೂಟಿ ಹೊಡೆದು ಖಾಲಿ ಮಾಡಿದ್ದಾರೆ: ಹೆಚ್.ಡಿ ಕುಮಾರಸ್ವಾಮಿ

0

ಬೆಂಗಳೂರು: ನಮ್ಮದು ಒಂದು ಸಂಪದ್ಭರಿತ ರಾಜ್ಯ, ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಲಾರದು, ಇವರು ಲೂಟಿ ಹೊಡೆದು ಖಜಾನೆ ಖಾಲಿ ಮಾಡಿದ್ದಾರೆ, ಸರ್ಕಾರದ ಸ್ವೇಚ್ಛಾಚಾರದಿಂದಾಗಿ ಅದು ಬರಿದಾಗಿದೆ ಎಂದು ಜೆಡಿಎಸ್ ನಾಯಕ ಹೆಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಧಾನಸೌಧದ ಬಳಿ ಒಲ್ಲ್ಲದ ಮನಸ್ಸಿನಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮೊನ್ನೆ ವಿಧಾನ ಪರಿಷತ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಮ್ಮಾ ತಾಯಿ, ಅನುದಾನ ನೀಡಿ ಅಂತ ಹೇಳಿದ್ದನ್ನು ಲೇವಡಿ ಮಾಡಿದರು ಮತ್ತು ಛೇಡಿಸಿದರು.

ನಿರ್ಗತಿಕರ ಹಾಗೆ ಬೇಡುವ ದೈನೇಸಿ ಸ್ಥಿತಿ ಒಬ್ಬರ ರಾಜ್ಯದ ಮುಖ್ಯಮಂತ್ರಿಗೆ ಬರಬಾರದಿತ್ತು. ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ, ಸ್ವಂತ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.