ಮನೆ ರಾಜ್ಯ ಖ್ಯಾತ ಗಾಯಕ ಪಂಕಜ್​ ಉದಾಸ್​ ನಿಧನ

ಖ್ಯಾತ ಗಾಯಕ ಪಂಕಜ್​ ಉದಾಸ್​ ನಿಧನ

0

ಖ್ಯಾತ ಗಾಯಕ ಪಂಕಜ್​ ಉಧಾಸ್​ ಅವರು 73ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಕ್ಯಾನ್ಸರ್​ ನಿಂದ ಬಳಲುತ್ತಿದ್ದ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಸೋಮವಾರ (ಫೆ.26) ಬೆಳಿಗ್ಗೆ 11 ಗಂಟೆ ಸುಮಾರಿಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದರು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗಾಯಕ ಸೋನು ನಿಗಮ್​ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು (ಫೆಬ್ರವರಿ 27) ಪಂಕಜ್​ ಉಧಾಸ್​ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸಮಯ ಮತ್ತು ಸ್ಥಳದ ಬಗ್ಗೆ ಅವರ ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.

ಪಂಕಜ್ ಉಧಾಸ್​ ಅವರ ಮಗಳು ನಯಾಬ್​ ಉಧಾಸ್​ ಅವರು ತಂದೆಯ ಅಂತ್ಯಕ್ರಿಯೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಪದ್ಮಶ್ರೀ ಪಂಕಜ್​ ಉಧಾಸ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರವರಿ 26ರಂದು ನಿಧನರಾದರು ಎಂಬ ಸುದ್ದಿಯನ್ನು ತಿಳಿಸಲು ನೋವಾಗುತ್ತಿದೆ. ಮುಂಬೈನ ವರ್ಲಿಯಲ್ಲಿ ಇರುವ ಹಿಂದೂ ರುದ್ರಭೂಮಿಯಲ್ಲಿ ಫೆಬ್ರವರಿ 27ರಂದು ಮಧ್ಯಾಹ್ನ 3ರಿಂದ ಸಂಜೆ 5 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.