ಮನೆ ರಾಜ್ಯ ಬಿಟ್‌ ಕಾಯಿನ್ ಪ್ರಕರಣ: ಡಿವೈಎಸ್ಪಿ ಶ್ರೀಧರ್ ಪೂಜಾರ್ ಪರಾರಿ- ಮತ್ತೊಬ್ಬ ಇನ್ಸ್‌ಪೆಕ್ಟರ್ ಬಂಧನ

ಬಿಟ್‌ ಕಾಯಿನ್ ಪ್ರಕರಣ: ಡಿವೈಎಸ್ಪಿ ಶ್ರೀಧರ್ ಪೂಜಾರ್ ಪರಾರಿ- ಮತ್ತೊಬ್ಬ ಇನ್ಸ್‌ಪೆಕ್ಟರ್ ಬಂಧನ

0

ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್, ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.

ಎಸ್ ಐಟಿ ತಂಡದ ಇನ್ಸ್​ಪೆಕ್ಟರ್ ಅನಿಲ್ ಮತ್ತು ಅವರ ತಂಡ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಇನ್ನು ಶ್ರೀಧರ್ ಪೂಜಾರ್‌ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ.

ಇನ್ನು ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಧರ್ ಪೂಜಾರ್, ಜಾಮೀನು ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಜಾಮೀನು ವಜಾ ಮಾಡಿದ ಹಿನ್ನಲೆ ಪ್ರಮುಖ ಆರೋಪಿಯ ಬಂಧನಕ್ಕೆ ಎಸ್.ಐ.ಟಿ ತಂಡ ಹೋಗಿದ್ದರು. ಈ ಸಂದರ್ಭದಲ್ಲಿ ಪೊಲೀಸರ ವಾಹನಕ್ಕೆ ಗುದ್ದಿ ಎಸ್ಕೇಪ್ ಆಗಿದ್ದಾರೆ. ಈಗಾಗಲೇಬ ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಇನ್ಸ್‌ ಪೆಕ್ಟರ್​ ಅನ್ನು ಸಿಐಡಿ ಎಸ್ಐಟಿ ಬಂಧಿಸಿದೆ. ಇನ್ಸ್‌ ಪೆಕ್ಟರ್ ಲಕ್ಷ್ಮಿಕಾಂತಯ್ಯ ಬಂಧಿತ ಆರೋಪಿ. ಈ ಲಕ್ಷ್ಮೀಕಾಂತಯ್ಯ ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಇಂದು ಬೆಳಗ್ಗೆ ಇವರನ್ನು ಬಂಧಿಸಿದ್ದಾರೆ.