ಮನೆ ಸ್ಥಳೀಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19 ನೇ ವಾರ್ಷಿಕ ಘಟಿಕೋತ್ಸವ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19 ನೇ ವಾರ್ಷಿಕ ಘಟಿಕೋತ್ಸವ

0

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವವನ್ನು ಮಾ.03 ರಂದು ಮಧ್ಯಾಹ್ನ 12 ಗಂಟೆಗೆ ಕರಾಮುವಿ ಯ ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕುಲಪತಿಗಳಾದ ಪ್ರೊ. ಶರಣಪ್ಪ ವಿ.ಹಲಸೆ ರವರು ತಿಳಿಸಿದರು.

ಇಂದು ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ರವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿಗಳು ಬಿ.ಎಸ್ ಪಾಟೀಲ್ ರವರು ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ.

ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್ ರವರು ಘಟಿಕೋತ್ಸವದಲ್ಲಿ ಉಪಸ್ಥಿತರಿರಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ರವರು ಘಟಿಕೋತ್ಸವದ ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ಮಾಡುವರು.

 ಘಟಿಕೋತ್ಸವದಲ್ಲಿ ಮೂವರು ಗಣ್ಯರುಗಳಾದ ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಹೆಚ್.ಸಿ. ಸತ್ಯನ್, ಚಿತ್ರದುರ್ಗದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಕೆ.ಎಂ. ವೀರೇಶ್, ಹಾಗೂ ಮಂಡ್ಯದ ಎಸ್.ಬಿ. ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮೀರಾ ಶಿವಲಿಂಗಯ್ಯ ರವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು. 03 ಪಿಹೆಚ್ ಡಿ, 30 ಚಿನ್ನದ ಪದಕಗಳು ಮತ್ತು 37 ನಗದು ಬಹುಮಾನಗಳನ್ನು ವಿದ್ಯಾರ್ಥಿಗಳು ಪಡೆದಿದ್ದು, ಇವರನ್ನೊಳಗೊಂಡoತೆ 7,869 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಒಟ್ಟು 67 ವಿದ್ಯಾರ್ಥಿಗಳಲ್ಲಿ 14 ಪುರುಷರು ಮತ್ತು 53 ಮಹಿಳೆಯರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಪ್ರಧಾನ ಮಾಡಲಾಗುವುದು. ಕನ್ನಡ, ಇತಿಹಾಸ ಹಾಗೂ ರಾಜ್ಯಶಾಸ್ತç ವಿಷಯಗಳಲ್ಲಿ 03 ಪುರುಷರು ಪಿಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ.

ಕನ್ನಡ ವಿಷಯದಲ್ಲಿ ಒಟ್ಟು 496 ವಿದ್ಯಾರ್ಥಿಗಳಲ್ಲಿ 161 ಪುರುಷರು ಹಾಗೂ 335 ಮಹಿಳೆಯರು, ಇಂಗ್ಲೀಷ್ ವಿಷಯದಲ್ಲಿ ಒಟ್ಟು 411 ವಿದ್ಯಾರ್ಥಿಗಳಲ್ಲಿ 135 ಪುರುಷರು ಹಾಗೂ 276 ಮಹಿಳೆಯರು, ಹಿಂದಿ ವಿಷಯದಲ್ಲಿ ಒಟ್ಟು 75 ವಿದ್ಯಾರ್ಥಿಗಳಲ್ಲಿ 30 ಪುರುಷರು ಹಾಗೂ 45 ಮಹಿಳೆಯರು, ಸಂಸ್ಕೃತ ವಿಷಯದಲ್ಲಿ ಒಟ್ಟು 16 ವಿದ್ಯಾರ್ಥಿಗಳಲ್ಲಿ 11 ಪುರುಷರು ಹಾಗೂ 05 ಮಹಿಳೆಯರು, ಉರ್ದು ವಿಷಯದಲ್ಲಿ ಒಟ್ಟು 18 ವಿದ್ಯಾರ್ಥಿಗಳಲ್ಲಿ 04 ಪುರುಷರು ಮತ್ತು 14 ಮಹಿಳೆಯರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಸಮಾಜ ವಿಜ್ಞಾನ ವಿಷಯಗಳಾದ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಾರ್ವಜನಿಕ ಆಡಳಿತ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಒಟ್ಟು 1239 ವಿದ್ಯಾರ್ಥಿಗಳಲ್ಲಿ 484 ಪುರುಷರು ಮತ್ತು 755 ಮಹಿಳೆಯರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಬಿ.ಕಾಂ. ವಿಭಾಗದಲ್ಲಿ ಒಟ್ಟು 178 ವಿದ್ಯಾರ್ಥಿಗಳಲ್ಲಿ 95 ಪುರುಷರು ಹಾಗೂ 83 ಮಹಿಳೆಯರು ಸ್ನಾತಕ ಪದವಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಬಿ.ಎಡ್ ವಿಭಾಗದಲ್ಲಿ ಒಟ್ಟು 472 ವಿದ್ಯಾರ್ಥಿಗಳಲ್ಲಿ 202 ಪುರುಷರು ಹಾಗೂ 270 ಮಹಿಳೆಯರು ಶಿಕ್ಷಣಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನು ಪಡೆದಿರುತ್ತಾರೆ.

ಎಂ.ಕಾo ನಲ್ಲಿ 615 ವಿದ್ಯಾರ್ಥಿಗಳಲ್ಲಿ 220 ಪುರುಷರು ಹಾಗೂ 395 ಮಹಿಳಾ ವಿದ್ಯಾರ್ಥಿಗಳು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಎಂ.ಬಿ.ಎ ವಿಭಾಗದಲ್ಲಿ ಒಟ್ಟು 719 ವಿದ್ಯಾರ್ಥಿಗಳಲ್ಲಿ 338 ಪುರುಷರು ಹಾಗೂ 381 ಮಹಿಳಾ ಮಹಿಳೆಯರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ವಿಜ್ಞಾನ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗಗಳಾದ ಬಿ.ಎಲ್.ಐ.ಎಸ್ಸಿ, ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ. ಗಣಕಶಾಸ್ತ್ರ, ಎಂ.ಎಸ್ಸಿ. ರಸಾಯನಶಾಸ್ತ್ರ, ಎಂ.ಎಸ್ಸಿ. ಗಣಿತಶಾಸ್ತ್ರ, ಎಂ.ಎಸ್ಸಿ ಪರಿಸರಶಾಸ್ತ್ರ, ಎಂ.ಎಸ್ಸಿ. ಪರಿಸರ ವಿಜ್ಞಾನ ಮಾಹಿತಿ ವಿಜ್ಞಾನ ಭೂಗೋಳಶಾಸ್ತ್ರ, ಎಂ.ಎಸ್ಸಿ. ಆಹಾರ ವಿಜ್ಞಾನ ಮತ್ತು ಪೌಷ್ಟಿಕತೆ, ಎಂ.ಎಸ್ಸಿ. ಜೀವರಸಾಯನಶಾಸ್ತ್ರ, ಎಂ.ಎಸ್ಸಿ. ಜೈವಿಕ ತಂತ್ರಜ್ಞಾನ, ಎಂ.ಎಸ್ಸಿ. ಭೌತಶಾಸ್ತ್ರ, ಎಂ.ಎಸ್ಸಿ. ಸೂಕ್ಷ್ಮ ಜೀವಶಾಸ್ತ್ರ, ಹಾಗೂ ಎಂ.ಎಸ್ಸಿ. ಮನೋವಿಜ್ಞಾನ ವಿಭಾಗದಲ್ಲಿ ಒಟ್ಟು 1304 ವಿದ್ಯಾರ್ಥಿಗಳಲ್ಲಿ 501 ಪುರುಷರು ಹಾಗೂ 803 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಕೆ.ಎಲ್.ಎನ್. ಮೂರ್ತಿ, ಡೀನ್ ಅಕಾಡೆಮಿಯ ಲೀಡರ್ ಲಕ್ಷ್ಮೀ, ಹಣಕಾಸು ಅಧಿಕಾರಿಯಾದ ಡಾ.ರಮೇಶ್  ಸೇರಿದಂತೆ ಇತರರು ಉಪಸ್ಥಿತರಿದ್ದರು.