ಬೆಂಗಳೂರು: ಗ್ರಾಹಕರಿಗೆ ಪರಿಹಾರ ನೀಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪಾಲಿಸಲು ವಿಫಲವಾದ ಸ್ಪ್ಯಾನೆ ಆಟೋಮೋಟಿವ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಬಂಧನಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ವಾರೆಂಟ್ ಜಾರಿ ಮಾಡಿದೆ.
ಬೆಂಗಳೂರಿನ ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದಲ್ಲಿರುವ ವಾಹನ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರು ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ಗ್ರಾಹಕರಿಗಾದ ತೊಂದರೆ: ಬೆಂಗಳೂರಿನ ನಿವಾಸಿ ದೀಪಕ್ ಗೌಡ ಎಂಬುವವರು ತಮ್ಮ ಜಾಗ್ವಾರ್ ಕಾರ್‌ಗೆ ಒಳಾಂಗಣ ವಿನ್ಯಾಸ ಮಾಡಿಸಲು 6.96 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ ವಿನ್ಯಾಸ ದೋಷಪೂರಿತವಾಗಿತ್ತು. ಸರಿಪಡಿಸಿಕೊಡುವುದಾಗಿ ಮಳಿಗೆಯವರು ಕಾರ್ ವಶಕ್ಕೆ ಪಡೆದು ಸುಮ್ಮನಾಗಿದ್ದರು. ತಿಂಗಳುಗಟ್ಟಲೆ ಕಾರು ಮಳಿಗೆಯಲ್ಲೇ ಇತ್ತು.
ಕೊನೆಗೆ ದೀಪಕ್ ಗೌಡ ಅವರು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ, ಮಳಿಗೆಗೆ 6.57 ಲಕ್ಷ ರೂ.ಗಳನ್ನು ಬಡ್ಡಿ ಸಮೇತ ಪಾವತಿಸಲು ಆದೇಶಿಸಿತ್ತು. ಕಾನೂನು ವೆಚ್ಚವಾಗಿ 10 ಸಾವಿರ ನೀಡಲು ಸೂಚಿಸಿತ್ತು. ಗ್ರಾಹಕರ ವೇದಿಕೆ ನೀಡಿದ ಆದೇಶ ಮೂರು ವರ್ಷಗಳಾದರೂ
ಕೊನೆಗೆ ದೀಪಕ್ ಗೌಡ ಅವರು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ, ಮಳಿಗೆಗೆ 6.57 ಲಕ್ಷ ರೂ.ಗಳನ್ನು ಬಡ್ಡಿ ಸಮೇತ ಪಾವತಿಸಲು ಆದೇಶಿಸಿತ್ತು. ಕಾನೂನು ವೆಚ್ಚವಾಗಿ 10 ಸಾವಿರ ನೀಡಲು ಸೂಚಿಸಿತ್ತು. ಗ್ರಾಹಕರ ವೇದಿಕೆ ನೀಡಿದ ಆದೇಶ ಮೂರು ವರ್ಷಗಳಾದರೂ ಜಾರಿಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಿ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಗ್ರಾಹಕ ಕೋರ್ಟ್ ಆದೇಶಿಸಿದೆ.