ತಜ್ಞರು ಹೇಳುವ ಪ್ರಕಾರ ಸ್ವಲ್ಪ ಮಟ್ಟಿನ ಆತಂಕ ವ್ಯಕ್ತಿಗೆ ಸಹಕಾರಿ. ಅದು ಆತನನ್ನು ಚುರುಕಾಗಿರುವಂತೆ ಮಾಡಿ, ಕಷ್ಟಪಟ್ಟು ಕೆಲಸ ಮಾಡುವಂತೆ ಪ್ರಚೋದಿಸುತ್ತದೆ. ಪರೀಕ್ಷೆಯ ಬಗ್ಗೆ ಆತಂಕವಿದ್ದರೆ ತಾನೆ ನಾವು ಸರಿಯಾಗಿ ಕುಳಿತು ಓದುವುದು ನಷ್ಟವಾಗಿ ಬಿಡುತ್ತೇನೋ ಎಂಬ ಕಳವಳವಿದ್ದರೆ.ತಾನೆ, ಮುತುವರ್ಜಿವಹಿಸಿ ವ್ಯಾಪಾರ ಮಾಡುವುದು ಅಂದರೆ ಆತಂಕ ಮಿತಿ ಮೀರಿದರೆ ಎಲ್ಲವೂ ಹಾಳಾಗಿ ಬಿಡುತ್ತದೆ. ಈ ಅತಿ ಆತಂಕವನ್ನು ನಿವಾರಿಸುವುದು ಹೇಗೆ?ಅದು ಬರದಂತೆ ಮಾಡಲು ಸಾಧ್ಯವೇ? ಈ ಕೆಳಗೆ ಕೊಟ್ಟಿರುವ ಅಂಶಗಳನ್ನು ಗಮನಿಸಿ ಅವುಗಳನ್ನು ಪಾಲಿಸಿದರೆ ಆತಂಕದ ನಿವಾರಣೆ ಸಾಧ್ಯವಿದೆ.
1. ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಿ., ನಿಮ್ಮ ಬಲಾಬಲ, ಇತಿಮಿತಿಗಳನ್ನು ಅರಿಸಿಕೊಳ್ಳಿ.
2. ನಿಮ್ಮ ಕೈಗೆಟುಕುವಂತಹ ಗುರಿಗಳನ್ನು ಮಾತ್ರ ಇಟ್ಟುಕೊಳ್ಳಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಆಸೆ ಆಕಾಂಕ್ಷೆಗಳಿರಲಿ.
3. ನಿಮ್ಮ ಜವಾಬ್ದಾರಿಗಳೇನು ಎಂದು ತಿಳಿದುಕೊಳ್ಳಿ ಅವುಗಳನ್ನು ನಿರ್ವಹಿಸಲು ನಿಮ್ಮ ಕೈಲಾಗುವುದನ್ನೆಲ್ಲಾ ಮಾಡಿ.
4. ಸಮಸ್ಯೆಗಳು ಎದುರಾದಾಗ ಅವುಗಳಿಂದ ಓಡಿ ಹೋಗಬೇಡಿ.ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ಅವನು ಅರ್ಥಮಾಡಿಕೊಳ್ಳಲು ಹಾಗೂ ಪರಿಹರಿಸಲು ಯತ್ನಿಸಿ.
5. ಅವಶ್ಯಕತೆ ಬಿದ್ದರೆ, ಇತರರ ಆಸರೆ ನೆರವು ಪಡೆಯಲು ಸಂಕೋಚ ಪಡಬೇಡಿ.
6. ಪ್ರತಿಯೊಂದನ್ನೂಒಂದು ಕ್ರಮವಾಗಿ, ಯೋಚಿತ ರೀತಿಯಲ್ಲಿ ಮಾಡಿ.ಅವ್ಯವಸ್ಥೆ ಆತಂಕಕ್ಕೆ ಎಡೆ ಮಾಡಿಕೊಡುತ್ತೇದೆ. ಎಂಬುದನ್ನು ನೆನಪಿನಲ್ಲಿಡಿ
7. ಮೈ ಮನಗಳಿಗೆ ವಿಶ್ರಾಂತಿ ನೀಡುವ ಕಲೆಯನ್ನು ಸಾಧಿಸಿ.ದಿನದ ಕೆಲಸ ಮುಗಿದ ಮೇಲೆ ಕೈಕಾಲು ಚಾಚಿ,ಸ್ವಲ್ಪಹೊತ್ತಾದರೂ ವಿಶ್ರಾಂತಿ ಪಡೆಯಿರಿ.
8. ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ದಿನನಿತ್ಯದ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡಿ.
9. ಸಂಗೀತ,ನೃತ್ಯ, ಓದುವಿಕೆ, ಚಿತ್ರಿಸುವುದು, ತೋಟಗಾರಿಕೆ ಮುಂತಾದ ಮನಸ್ಸಿಗೆ ಹಿತವಾದ ಚಟುವಟಿಕೆಗಳಲ್ಲಿ ತೊಡಗಿ.
10. ನಿಮ್ಮ ಸಾಧನೆ ಬಗ್ಗೆ ತೃಪ್ತಿಪಡಿ.
11. ಪ್ರೀತಿ ಮಮತೆಗಳು ಮನಸ್ಸಿಗೆ ಶಕ್ತಿ ವರ್ಧಕಗಳು. ಬೇರೆಯವರಿಗೆ ಪ್ರೀತಿ ಮಮತೆ ತೋರಿಸಿ ಮತ್ತು ಅವರಿಂದ ಅವನ್ನು ಪಡೆಯಿರಿ.
12. ನಿರಾಶೆ,ವಿಫಲತೆಗಳು ಕಂಡು ಬಂದರೆ,ಅಧೀರರಾಗಬೇಡಿ. ಸೋಲು ಗೆಲುವಿಗೆ ಮೆಟ್ಟಿಲಾಗಬಹುದು ನಿಮ್ಮಲ್ಲಿ ಪೂರ್ಣ ಭರವಸೆ ಇಟ್ಟು ಮರಳಿ ಯತ್ನವನ್ನು ಮಾಡಿ.
13. ಹಣ,ಅಧಿಕಾರಗಳ ಹಿಂದೆ ಬೀಡಬೇಡಿ. ಅವು ಸಿಕ್ಕರೂ ಆತಂಕ,ಸಿಗದಿದ್ದರೂ ಆತಂಕ ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿಯಿರಿ.
14. ನಿಮ್ಮ ಮಕ್ಕಳಿಗೆ ಸೂಕ್ತ ಪ್ರಯಾಣದಲ್ಲಿ ಪ್ರೀತಿ ಮಮತೆಯನ್ನು ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಕೊಡಿ.
15. ಯಾವುದೇ ಬಗೆಯ ಕಾಯಿಲೆ ಬಂದರೂ ಉದಾಸೀನ ಮಾಡದೆ. ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ ರೋಗದ ಬಗ್ಗೆ ಭಯ ಬೇಡ.
ವೇದಿಕೆಯ ಭಯ :
ವೇದಿಕೆಯ ಮೇಲೆ ಹೋಗಿ, ಹತ್ತಾರು, ನೂರಾರು ಸಭಿಕರ ಮುಂದೆ ಮಾತನಾಡಲು, ಹಾಡು ಹಾಡಲು, ನೃತ್ಯ ಮಾಡಲು, ಅಭಿನಯ ಮಾಡಲು ಸಭಿಕರಿಂದ ಚಪ್ಪಾಳೆ, ಶ್ಲಾಘನೆಯನ್ನು ಪಡೆಯಲು ಎಲ್ಲರಿಗೂ ಇಷ್ಟ.ಹಾಗೆಯೇ ರೇಡಿಯೋದಲ್ಲಿ ಟಿವಿ ತೆರೆಯ ಮೇಲೆ ಕಾಣಿಸಿಕೊಳ್ಳಲೂ ಇಷ್ಟ. ಆದರೆ ಹೀಗೆ ಮಾಡುವಾಗ, ಪ್ರಾರಂಭದಲ್ಲಿ ಪ್ರತಿಯೊಬ್ಬರನ್ನು ಭಯ ಕಾಡುತ್ತದೆ. ಎಷ್ಟು ಚೆನ್ನಾಗಿ ಸಿದ್ಧತೆ ಮಾಡಿದ್ದೆ. ಆದರೆ ವೇದಿಕೆಯ ಮೇಲೆ ಹೋಗುತ್ತಿದ್ದಂತೆ ಎದೆಯಲ್ಲಿ ಢವಢವ, ಹೊಟ್ಟೆಯಲ್ಲಿ ಸಂಕಟ, ಬಾಯಿ ಒಣಗಿಹೋಯಿತು.ಧ್ವನಿಯೇ ಹೊರಡಲಿಲ್ಲ ಕೈಕಾಲುಗಳು ನಡುಗಿದವು. ಏನು ಮಾತಾಡಿದೆನೋ, ಏನು ಹಾಡಿದೆನೋ, ಏನು ಅಭಿನಯಿಸಿದೆನೋ, ಕೆಟ್ಟದಾಗಿತ್ತು. ನನಗೆ ಅವಮಾನವಾಯಿತು. ಭೂಮಿ ಬಾಯಿ ತೆರೆದು ನನ್ನನ್ನು ನುಂಗಬಾರದಿತ್ತೇ ಎನಿಸಿತು ಎನ್ನುತ್ತೇವೆ. ಇದನ್ನೇ ವೇದಿಕೆ ಭಯ ಅಥವಾ ‘ಸ್ಟೇಚ್ ಫಿಯರ್’ ಎನ್ನುತ್ತಾರೆ. ಕೆಲವರು ಬಹುಬೇಗ ಈ ಭಯದಿಂದ ಬಿಡುಗಡೆ ಹೊಂದುತ್ತಾರೆ. ಕೆಲವರಿಗೆ ಇದು ದೀರ್ಘಕಾಲ ಕಾಡುತ್ತದೆ. ಅವರ ನಿರ್ವಹಣಾ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಮಾತನಾಡುವಾಗ ಹಾಡುವಾಗ ಅಭಿನಯಿಸುವಾಗ ತಪ್ಪಾಗಿ ಅಭ್ಯಾಸವಾಗುತ್ತದೆ.
ಈ ವೇದಿಕೆ ಭಯದ ಮೂಲ ಆತ್ಮವಿಶ್ವಾಸದ ಕೊರತೆ ಹಾಗೂ ನಕಾರಾತ್ಮಕ ಆಲೋಚನೆಗಳು, ಕೀಳರಿಮೆ ಇದ್ದವರಲ್ಲಿ ವೇದಿಕೆ ಭಯ ಹೆಚ್ಚು ಹಾಗೂ ಸದಾಕಾಲ ಅವರನ್ನು ಕಾಡುತ್ತಿರುತ್ತದೆ. ನಾನು ಚೆನ್ನಾಗಿಲ್ಲ.ನನ್ನ ಬುದ್ಧಿ ಸಾಮರ್ಥ್ಯ ಕಡಿಮೆ. ನಾನು ಸರಿಯಾಗಿ ಮಾತನಾಡಲಾರೆ ಹಾಡಲಾರೆ. ನನ್ನನ್ನು ಯಾರು ಮೆಚ್ಚುವುದಿಲ್ಲ. ನಾನು ತಪ್ಪು ಮಾಡುತ್ತೇನೆ ನಾನು ನಗೆಪಾಟಲಿಗೆ ಈಡಾಗುತ್ತೇನೆ ಎಂಬಿತ್ಯಾದಿ ಆಲೋಚನೆಗಳು ವೇದಿಕೆ ಭಯವನ್ನು ಸೃಷ್ಟಿಸುತ್ತವೆ. ಸಭಿಕರಲ್ಲಿ ಹಿರಿಯರಿದ್ದಾರೆ ಅನುಭವಿಗಳಾಗಿದ್ದರೆ, ಜ್ಞಾನಿಗಳಿದ್ದಾರೆ ತಜ್ಞರಿದ್ದಾರೆ.ಅವರು ನನ್ನ ನಿರ್ವಹಣೆಯಲ್ಲಿ ನ್ಯೂನತೆ ಕೊರತೆಯನ್ನು ಕಂಡುಹಿಡಿಯುತ್ತಾರೆ. ನಾನು ಅವರ ಮುಂದೆ ಸಣ್ಣವನಾಗುತ್ತೇವೆ.ಮೂರ್ಖನಾಗುತ್ತೇನೆ ಎಂಬ ನರಕಾತ್ಮಕ ತರ್ಕವು ಭಯವನ್ನು ಹೆಚ್ಚಿಸುತ್ತದೆ. ಮೊದಲ ಬಾರಿಗೆ ವೇದಿಕೆಗೆ ಹೋಗುವಾಗ, ವಿಪರೀತ ಸ್ಪರ್ಧೆ ಇದ್ದಾಗ ಬಹುಮಾನ ಅಥವಾ ಶ್ಲಾಘನೆಯನ್ನು ಪಡೆಯುವುದು ಪ್ರತಿಷ್ಠೆಯ ವಿಷಯವಾದಾಗ,ಸಿದ್ಧತೆ ಸಾಲದಿದ್ದಾಗ ಹಿಂದಿನ ಕಹಿ ಅನುಭವಗಳು ಸಹಾನುಭೂತಿ ತೋರದ, ಕಟ್ಟುವಿಮರ್ಶೆ ಮಾಡುವ ಸಭಿಕರಿದ್ದಾಗ, ಸೋತರೆ, ಚೆನ್ನಾಗಿ ಮಾಡದಿದ್ದರೆ ಅವಮಾನ. ಶಿಕ್ಷೆ,ತಿರಸ್ಕಾರಗಳು ಕಾದಿಟ್ಟಬುತ್ತಿ ಎಂದು ಗೊತ್ತಿದಾಗ ಸಭಿಕರಲ್ಲಿ ಅಥವಾ ತೀರ್ಪುಗಾರರಾಗಿ ಅತಿ ಗಣ್ಯ ವ್ಯಕ್ತಿಗಳಾಗಿದ್ದಾಗ,ವೇದಿಕೆ ಭಯ ತಾರಕವನ್ನು ಮುಟ್ಟುತ್ತದೆ.