ಮನೆ ರಾಜ್ಯ ಗೋವಿಂದರಾಜನಗರ ಕ್ಷೇತ್ರದಲ್ಲಿ ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ: ಸೋಮಣ್ಣ  

ಗೋವಿಂದರಾಜನಗರ ಕ್ಷೇತ್ರದಲ್ಲಿ ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ: ಸೋಮಣ್ಣ  

0

ತುಮಕೂರು: ಗೋವಿಂದರಾಜನಗರ ಕ್ಷೇತ್ರದಿಂದ ಆರಾಮಾಗಿ ಗೆಲ್ಲುತ್ತಿದ್ದೆ. ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ. ಆದರೆ ಅಮಿತ್ ಶಾ ಹೇಳಿದ್ದಕ್ಕೆ 2 ಕಡೆ ಸ್ಪರ್ಧಿಸಿ ಸೋತಿದ್ದೇನೆ ಎಂದು ವಿಧಾನಸಭೆ ಸೋಲನ್ನು ಮಾಜಿ ಸಚಿವ ಸೋಮಣ್ಣ  ನೆನೆದಿದ್ದಾರೆ.

ನಗರದ ಮುರುಘಾ ರಾಜೇಂದ್ರ ಸಮುದಾಯ‌ ಭವನದಲ್ಲಿ ನಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಡಾ. ಪರಮೇಶ್​​ರವರ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. ನನಗಾದ ಅಪಚಾರ ನೋಡಿ MP ಟಿಕೆಟ್​ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿಗೂ ಚಿಕ್ಕಮಗಳೂರಿಗೂ ಏನು ಸಂಬಂಧ? ಆದರೂ ವಿರೋಧಿಗಳು ನನ್ನ ವಲಸಿಗ ಎಂದು ಹೇಳುತ್ತಾರೆ ಎಂದು ಪರೋಕ್ಷವಾಗಿ ಮಾಧುಸ್ವಾಮಿಗೆ ಟಾಂಗ್ ಕೊಟ್ಟರು. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಎಂದೂ ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡವರಲ್ಲ. ಆದರೆ ಪ್ರಧಾನಿ ಮೋದಿಗಾಗಿ, ಈ ರಾಷ್ಟ್ರದ ಅಭಿವೃದ್ಧಿಗಾಗಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ.

ತುಮಕೂರನ್ನ ವಾರಣಾಸಿ ಮಾಡೋದು ನನ್ನ ಗುರಿ. ಹೈಕಮಾಂಡ್ ಈಗಲೂ ಹೇಳಿದರೆ ನಿರ್ಧಾರ ಬದಲಿಸುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲು ತೀರ್ಮಾನ ಮಾಡಲಾಗಿದೆ. ಸೋಮಣ್ಣ ಪರ ಕೆಲಸ ಮಾಡಲು ಡಾ.ಪರಮೇಶ್ ನಿರ್ಧಾರ ಮಾಡಿದ್ದಾರೆ.