ಮನೆ ಕಾನೂನು ‘ಮನೆಗೆಲಸ ಅಚ್ಚುಕಟ್ಟಾಗಿ ಮಾಡು’ ಎಂದು ಸೊಸೆಗೆ ಅತ್ತೆ ಸೂಚಿಸುವುದು ಕ್ರೌರ್ಯವಲ್ಲ: ಆಂಧ್ರಪ್ರದೇಶ ಹೈಕೋರ್ಟ್

‘ಮನೆಗೆಲಸ ಅಚ್ಚುಕಟ್ಟಾಗಿ ಮಾಡು’ ಎಂದು ಸೊಸೆಗೆ ಅತ್ತೆ ಸೂಚಿಸುವುದು ಕ್ರೌರ್ಯವಲ್ಲ: ಆಂಧ್ರಪ್ರದೇಶ ಹೈಕೋರ್ಟ್

0

ವಿಶಾಖಪಟ್ಟಣಂ: ಕುಟುಂಬವೊಂದರಲ್ಲಿಅತೆಯು ಸೊಸೆಗೆ ಅಗತ್ಯ ಮನೆಗೆಲಸಗಳನ್ನು ಅಚ್ಚುಕಟ್ಟಾಗಿ ಮಾಡು ಎಂದು ಸೂಚಿಸುವುದು ‘ಕ್ರೌರ್ಯ’ ಎನಿಸುವುದಿಲ್ಲ. ಜತೆಗೆ , ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498ಎಗೂ ಅನ್ವಯಿಸಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತನ್ನ ಗಂಡ ಹಾಗೂ ಅತ್ತೆ ಇಬ್ಬರೂ ಆಗಾಗ್ಗೆ ಮನೆಯಲ್ಲಿ ತನ್ನ ಕೆಲಸ ಬಗ್ಗೆ ಕಮೆಂಟ್ ಮಾಡುತ್ತಿರುತ್ತಾರೆ. ಸ್ವಲ್ಪ ಹೆಚ್ಚು ಅಚ್ಚುಕಟ್ಟಾಗಿ ಕೆಲಸ ಮಾಡು ಎನ್ನುತ್ತಾರೆ ಎಂದು ಮಹಿಳೆಯೊಬ್ಬರ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ಇದು ನನ್ನ ಮೇಲೆ ಎಸಗಲಾಗುತ್ತಿರುವ ಮಾನಸಿಕ ಕ್ರೌರ್ಯ ಎಂದು ಮಹಿಳೆಯೊಬ್ಬರು ದಾಖಲಿಸಿದ್ದರು.

ಆದರೆ, ಈಗ ಅರ್ಜಿದಾರ ಮಹಿಳೆ ಬದುಕಿಲ್ಲ. 2008ರ ಏಪ್ರಿಲ್ ನಲ್ಲಿ ವಿವಾಹವಾದ ಬಳಿಕ ಎಂಟೇ ತಿಂಗಳಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಅದಕ್ಕಿಂತ ಮೊದಲೇ ಅವರು ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು. ಇತ್ತ, ಪ್ರಕರಣವನ್ನು ಮುಂದುವರಿಸಿರುವ ಆ ಮಹಿಳೆಯರ ಕುಟುಂಬಸ್ಥರು, ಆಕೆಯನ್ನು ವರದಕ್ಷಿಣೆ ಕಿರುಕುಳ ನೀಡಿ ಅತ್ತೆ, ಗಂಡ ಸಾಯಿಸಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು, ತಮ್ಮ ಮಗಳ ಅತ್ತೆ- ಮಾವ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಂತೆ ತಮ್ಮ ಮಗಳ ಮೇಲೆ ಒತ್ತಡ ಹೇರುತ್ತಿದ್ದರು. ಈ ಪ್ರಕರಣದ ವಿಚಾರಣೆಯು ಆಂಧ್ರಪ್ರದೇಶ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿ.ಆರ್.ಕೆ. ಕೃಪಾ ಸಾಗರ್ ಅವರಿದ್ದ ನ್ಯಾಯಪೀಠವು, ” ಯಾವುದೇ ಕುಟುಂಬದಲ್ಲಿ ಸದಸ್ಯರು ಮಾಡುವ ಕೆಲಸವೊಂದಕ್ಕೆ ಶ್ಲಾಘನೆ ಅಥವಾ ಟೀಕೆಯು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಇದನ್ನು ಕೌಟುಂಬಿಕ ಸದಸ್ಯರ ದೌರ್ಜನ್ಯ ಎಂದು ಬಣ್ಣಿಸಲಾಗದು. ಒಂದು ವೇಳೆ ಮನೆ ಗೆಲಸದ ಸಂಬಂಧ ದೈಹಿಕವಾಗಿ ಹಲ್ಲೆಮಾಡಲಾದರೆ ಅಥವಾ ಆಕ್ಷೇಪಾರ್ಹ ಪದಗಳಿಂದ ನಿತ್ಯವೂ ನಿಂದಿಸಿದರೆ ಮಾತ್ರವೇ ಅದು ಕ್ರೌರ್ಯ ಎನಿಸಲಿದೆ” ಎಂದು ಹೇಳಿದೆ. ಆದರೆ, ಕೇವಲ ಮನೆಕೆಲಸವನ್ನು ಅಚ್ಚುಕಟ್ಟಾಗಿ ಮಾಡು ಎಂಬುದು ಕೌಟುಂಬಿಕ ದೌರ್ಜನ್ಯ ಎಂದು ಎನಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಹಿಂದಿನ ಲೇಖನಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ
ಮುಂದಿನ ಲೇಖನತೀರ್ಥಹಳ್ಳಿ: ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ