ಮನೆ ಸುದ್ದಿ ಜಾಲ ಪ್ರತಿ ಕ್ವಿಂಟಾಲ್‌ಗೆ 3377 ರೂ.‌‌ದರದಲ್ಲಿ ರಾಗಿ ಖರೀದಿಗೆ ಸರ್ಕಾರ ಆದೇಶ

ಪ್ರತಿ ಕ್ವಿಂಟಾಲ್‌ಗೆ 3377 ರೂ.‌‌ದರದಲ್ಲಿ ರಾಗಿ ಖರೀದಿಗೆ ಸರ್ಕಾರ ಆದೇಶ

0

ಮೈಸೂರು (Mysuru)-ಬೆಂಬಲ ಬೆಲೆ ಯೋಜನೆಯಡಿ ರಾಜ್ಯಾದ್ಯಂತ ಪ್ರತಿ ಕ್ವಿಂಟಾಲ್‌ಗೆ 3377 ರೂ.‌‌ದರದಲ್ಲಿ ರಾಗಿ ಖರೀದಿಸಲು ಸರ್ಕಾರವು ಆದೇಶಿಸಿದೆ.
2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯದಲ್ಲಿ ಹೆಚ್ಚು ರಾಗಿ ಉತ್ಪಾದನೆಯಾಗಿದ್ದು, ರಾಜ್ಯದ ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯನ್ನು ಮುಂದುವರೆಸುವಂತೆ ಬೇಡಿಕೆ ಸಲ್ಲಿಸಿರುವ ಕಾರಣದಿಂದ ಈಗಾಗಲೇ 2021-22ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರಾಗಿಯನ್ನು ಮಾರಾಟ ಮಾಡಿರುವ ರೈತರನ್ನು ಹೊರತುಪಡಿಸಿ ಇನ್ನುಳಿದ ರಾಗಿ ಬೆಳೆದ ರೈತರಿಂದ ಈಗಾಗಲೇ ನೊಂದಣಿಯಾಗಿರುವ 1.14 ಲಕ್ಷ ಮೆಟ್ರಿಕ್ ಟನ್ ಸೇರಿದಂತೆ ಇನ್ನೂ 2.00 ಲಕ್ಷ ಮೆಟ್ರಿನ್ ಟನ್ ರಾಗಿಯನ್ನು ರಾಜ್ಯಾದ್ಯಂತ ಪ್ರತಿ ಕ್ವಿಂಟಾಲ್‌ಗೆ ರೂ. 3377/- ರ ದರದಲ್ಲಿ ಖರೀದಿಸಲು ಸರ್ಕಾರವು ಆದೇಶಿಸಿದೆ.
ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 9 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. 2021-22ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಈಗಾಗಲೇ ರಾಗಿಯನ್ನು ಮಾರಾಟ ಮಾಡಿರುವ ರೈತರನ್ನು ಹೊರತುಪಡಿಸಿ ಇನ್ನುಳಿದ ರಾಗಿ ಬೆಳೆದ ರೈತಬಾಂಧವರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಲು ಕೋರಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ತಿಳಿಸಿದ್ದಾರೆ.
ಖರೀದಿಸುವ ಏಜೆನ್ಸಿ / ನಿಗಧಿ ಮಾಡಿರುವ ಬೆಂಬಲ ಬೆಲೆ:
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ, ಮೈಸೂರು, ಕನಿಷ್ಟ ಬೆಂಬಲ ಬೆಲೆ (ಪ್ರತಿ ಕ್ವಿಂಟಾಲ್‌ಗೆ) ರೂ.3377. ಪ್ರತಿ ಎಕರೆಗೆ 10 ಕ್ವಿಂಟಾಲ್ ಗರಿಷ್ಠ 20 ಕ್ವಿಂಟಾಲ್ ಖರೀದಿಸಲಾಗುವುದು. ದಿನಾಂಕ:10.05.2022 ರಿಂದ ನೊಂದಣಿ ಪ್ರಾರಂಭವಾಗಿದೆ.
ಎA.ಎಸ್.ಪಿ ನೊಂದಣಿ/ಖರೀದಿ ಕೇಂದ್ರಗಳು:- ಮೈಸೂರು ತಾಲ್ಲೂಕಿನಲ್ಲಿ ಎ.ಪಿ.ಎಂ.ಸಿ. ಆವರಣ, ಬಂಡಿಪಾಳ್ಯ, ಟಿ.ನರಸೀಪುರ ತಾಲ್ಲೂಕಿನಲ್ಲಿ – ಎ.ಪಿ.ಎಂ.ಸಿ. ಆವರಣ, ಬನ್ನೂರು, ಹುಣಸೂರು ತಾಲ್ಲೂಕಿನಲ್ಲಿ – ಎ.ಪಿ.ಎಂ.ಸಿ. ಆವರಣ, ಹುಣಸೂರು, ಕೆ. ಆರ್. ನಗರ ತಾಲ್ಲೂಕಿನಲ್ಲಿ – ಎ.ಪಿ.ಎಂ.ಸಿ. ಆವರಣ, ಕೆ.ಆರ್.ನಗರ, ಪ್ರವಾಸಿ ಮಂದಿರ (ಶ್ರೀರಾಮ ದೇವಸ್ಥಾನದ ಹತ್ತಿರ) ಚುಂಚನಕಟ್ಟೆ ಮತ್ತು ಎ.ಪಿ.ಎಂ.ಸಿ. ಆವರಣ, ಸಾಲಿಗ್ರಾಮ. ಹೆಚ್.ಡಿ. ಕೋಟೆ ತಾಲ್ಲೂಕಿನಲ್ಲಿ – ಎ.ಪಿ.ಎಂ.ಸಿ. ಆವರಣ, ಸರಗೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ – ಎ.ಪಿ.ಎಂ.ಸಿ. ಆವರಣ, ಪಿರಿಯಾಪಟ್ಟಣ ಮತ್ತು ಎ.ಪಿ.ಎಂ.ಸಿ. ಆವರಣ, ಬೆಟ್ಟದಪುರ ಇಲ್ಲಿ ರಾಗಿ ನೊಂದಣಿ ಹಾಗೂ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬೆಂಬಲ ಬೆಲೆ ಯೋಜನೆಯ ರಾಗಿ ಕಾರ್ಯಾಚರಣೆಗೆ ಷರತ್ತುಗಳು : ಸರ್ಕಾರವು ರಾಜ್ಯದಾದ್ಯಂತ ಈಗಾಗಲೇ ನೊಂದಣಿಯಾಗಿರುವ 1.14 ಲಕ್ಷ ಮೆಟ್ರಿಕ್ ಟನ್ ಸೇರಿದಂತೆ ಇನ್ನೂ 2.00 ಲಕ್ಷ ಮೆಟ್ರಿನ್ ಟನ್ ರಾಗಿಯನ್ನು ರಾಜ್ಯಾದ್ಯಂತ ಖರೀದಿಸಲು ಮಾತ್ರ ಗುರಿ ನಿಗಧಿಪಡಿಸಿರುವುದರಿಂದ ಸದರಿ ಗುರಿಯನ್ನು ಮುಟ್ಟುವರೆಗೆ ಖರೀದಿ ಕೇಂದ್ರಗಳು ಕಾರ್ಯಾಚರಣೆ ನಡೆಸುತ್ತವೆ. ರೈತರಿಗೆ ಕೃಷಿ ಇಲಾಖೆಯಿಂದ ನೀಡಿರುವ “ಪ್ರೂಟ್ಸ್” ಐಡಿಯನ್ನು (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ನೊಂದಣಿ/ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆಯ ಯೋಜನೆಯಡಿ ರಾಗಿ ಮಾರಾಟ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದು. ಈ ಪ್ರೂಟ್ಸ್ ಐಡಿಯಲ್ಲಿ ಯಾವುದಾದರೂ ನ್ಯೂನತೆಗಳಿದ್ದಲ್ಲಿ ಕೃಷಿ ಇಲಾಖೆಯಿಂದಲೇ ಸರಿಪಡಿಸಿಕೊಂಡು ತದನಂತರ ನೋಂದಾಯಿಸಿಕೊಳ್ಳುವುದು. ನೊಂದಾಯಿಸಿಕೊAಡ ರೈತರು ತಾವು ರಾಗಿ ಸರಬರಾಜು ಮಾಡುವ ದಿನಾಂಕವನ್ನು ಖರೀದಿ ಕೇಂದ್ರವು ನಿಗಧಿ ಪಡಿಸಿರುವ ದಿನಾಂಕದAದೇ ಸರಬರಾಜು ಮಾಡಬೇಕು. ರೈತರು ಸರಬರಾಜು ಮಾಡುವ ರಾಗಿಯ ಗುಣಮಟ್ಟವನ್ನು ಗುಣಮಟ್ಟ ಪರಿವೀಕ್ಷಕರು/ಗ್ರೇಡರ್‌ಗಳು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುವುದು. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ಸರಬರಾಜು ಮಾಡಬೇಕು. ರೈತರು ರಾಗಿಯನ್ನು ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಯಾವುದೇ ಕಾರಣಕ್ಕೂ ಮಧ್ಯವರ್ತಿ ಅಥವಾ ಏಜೆಂಟರ್‌ಗಳನ್ನು ಬೆಂಬಲಿಸಬಾರದು. ಖರೀದಿಯಲ್ಲಿ ಮಧ್ಯವರ್ತಿಗಳು/ಏಜೆಂಟ್‌ಗಳು ಭಾಗವಹಿಸುವುದು ಕಾನೂನು ಬಾಹಿರವಾಗಿರುತ್ತದೆ. ರೈತರಿಂದ ಖರೀದಿಸುವ ರಾಗಿ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು.