ಮನೆ ರಾಜ್ಯ ಪಿರಿಯಾಪಟ್ಟಣ: ನೀರಿಲ್ಲದೆ ಬಸ್ ನಿಲ್ದಾಣ ಶೌಚಾಲಯಕ್ಕೆ ಬೀಗ ಹಾಕಿದ ಸಾರಿಗೆ ಇಲಾಖೆ- ಆಕ್ರೋಶ ಹೊರಹಾಕಿದ ಪ್ರಯಾಣಿಕರು

ಪಿರಿಯಾಪಟ್ಟಣ: ನೀರಿಲ್ಲದೆ ಬಸ್ ನಿಲ್ದಾಣ ಶೌಚಾಲಯಕ್ಕೆ ಬೀಗ ಹಾಕಿದ ಸಾರಿಗೆ ಇಲಾಖೆ- ಆಕ್ರೋಶ ಹೊರಹಾಕಿದ ಪ್ರಯಾಣಿಕರು

0

ಪಿರಿಯಾಪಟ್ಟಣ: ಪಿರಿಯಾಪಟ್ಟಣದಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ನೀರಿಲ್ಲದೆ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ ರಾಜ್ಯದ ಎಲ್ಲಾ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಆದರೆ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ನೀರಿನ ಅಭಾವದ ನೆಪ ಹೇಳಿ ಶೌಚಾಲಯಕ್ಕೆ ಬೀಗ ಹಾಕಿ ಸಾರಿಗೆ ಇಲಾಖೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಿರಿಯಾಪಟ್ಟಣವು ತಾಲೂಕು ಕೇಂದ್ರವಾಗಿದ್ದು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಲಾ ಕಾಲೇಜುಗಳು, ತಾಲೂಕು ಆಸ್ಪತ್ರೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪೊಲೀಸ್ ಠಾಣೆ, ಶಿಕ್ಷಣ ಇಲಾಖೆ ಮತ್ತು ನೋಂದಣಿ ಇಲಾಖೆಯ ಕಚೇರಿಗಳಿದ್ದು, ದಿನನಿತ್ಯ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ವಯೋವೃದ್ಧರು, ರೋಗಿಗಳು ಸೇರಿದಂತೆ ಸಾವಿರಾರು ಜನ ಬರುತ್ತಾರೆ
ನೀರಿಲ್ಲವೆಂದು ಶೌಚಾಲಯ ನಿರ್ವಹಣೆ ಮಾಡಲಾಗದೆ ಬೀಗ ಹಾಕಿದ್ದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ ರಸ್ತೆಯ ಅಕ್ಕ ಪಕ್ಕದಲ್ಲಿ ಮೂತ್ರ ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಮಿತ್ ಮಾತನಾಡಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದೆ ಬೆಳಗ್ಗೆನೇ ಎದ್ದು 35 ಕಿಲೋ ಮೀಟರ್ ದೂರದಿಂದ ನಾನು ಬರುತ್ತೇನೆ ಕಳೆದ ನಾಲ್ಕು ದಿನಗಳಿಂದ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಮೂತ್ರ ವಿಸರ್ಜನೆ ಮಾಡಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು

ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಇವತ್ತು, ನಾಳೆ ರೆಡಿ ಮಾಡಿಸುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನಾದರೂ ಇತ್ತಕಡೆ ಗಮನ ಹರಿಸಿ ಪಟ್ಟಣದ ಪ್ರಾಯಾಣಿಕರ ಕಷ್ಟವನ್ನು ಅರ್ಥ ಮಾಡಿಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಶೌಚಾಲಯಗಳಿಗೆ ಸಮರ್ಪಕ ನೀರು ಪೂರೈಕೆಮಾಡಿ ಶೌಚಾಲಯದ ಬೀಗ ತೆಗೆಯಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ.

ಪ್ರಯಾಣಿಕ ನಟರಾಜ್ ಮಾತನಾಡಿ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಲಸದ ನಿಮಿತ್ತ ಪಿರಿಯಾಪಟ್ಟಣಕ್ಕೆ ಬಸ್ ನಲ್ಲಿ ಬರುತ್ತೇನೆ ಜನರಿಗೆ ಶೌಚಾಲಯದ ಅಗತ್ಯತೆ ಹೆಚ್ಚಾಗಿದೆ. ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಅಕ್ಕ ಪಕ್ಕದ ರಸ್ತೆಗಳ ಬಳಿ ಮೂತ್ರ ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು