ಮನೆ ಆರೋಗ್ಯ ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

0

ಈಗ ಬಿ.ಪಿ ಹೃದ್ರೋಗ ಸ್ಥೂಲ ಶರೀರ ಕೊಲೆಸ್ಟ್ರಾಲ್ ಇತ್ಯಾದಿ ಪದಗಳು ವೈದ್ಯಕೀಯ ರಂಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ತಿಳಿವಳಿಕಸ್ಥರೂ ತಿಳಿವಳಿಕೆ ಯಿಲ್ಲದವರೂ  ಕೊಲೆಸ್ಟ್ರಾಲ್ ಒಂದು ಪೆಡಂಭೊತವೆಂಬಂತೆ ಭಾವಿಸುತ್ತಾರೆ.

ಕೊಲೆಸ್ಟ್ರಾಲ್ ಅದರಲ್ಲಿದೆ, ಅದನ್ನು ತಿನ್ನಬೇಡಿ ಇದನ್ನು ತಿನ್ನಿ ಇನ್ನೂ ಏನೇನೋ ಕಲ್ಪನೆಗಳು ವಾಸ್ತವದಲ್ಲಿ ಕೊಲೆಸ್ಟ್ರಾಲ್ಎಂದರೇನು? ಮನುಷ್ಯನಿಗೆ ಅದು ಹೇಗೆ ಹಾನಿಕರ ಎಂದು ತಿಳಿದುಕೊಳ್ಳಬೇಕಾದ ವಿಷಯ.

 ಕೊಲೆಸ್ಟ್ರಾಲ್ ಎನ್ನುವುದು ಒಂದು ಮೃದುವಾದ ಮೇಣದಂತಹ ವಸ್ತು.ಲಿವರ್ ನಲ್ಲಿ ತಯಾರಾಗುವ ಇದು ರಕ್ತದಲ್ಲಿ ವಿಲೀನ ವಾಗಿ, ಶರೀರದಲ್ಲೆಲ್ಲಾ ಪ್ರವಹಿಸಿ ಹಲವಾರು ಹಾರ್ಮೋನ್ ಗಳು  ಪಿತ್ತ ರಸ (Bile) ವಿಟಮಿನ್ ‘ಡಿ’ ಮುಂತಾದವುಗಳ ಉತ್ಪತ್ತಿಗೆ ಕಾರಣವಾಗಿದೆ.  ಆದರೆ ಕೊಲೆಸ್ಟ್ರಾಲ್ನಮ್ಮ ದೇಹದಲ್ಲಿ ಹೆಚ್ಚಾದರೆ, ರಕ್ತನಾಳಗಳಲ್ಲಿ ಶೇಖರಣೆಯಾಗಿ ರಕ್ತ ಸಂಚಾರಕ್ಕೆ ಆಡಚಣೆ ಉಂಟು ಮಾಡುವ ಎಥಿರೋಸ್ಕೖರೋಸಿಸ್ (Antherosclerosis) ನಿಂದಾಗಿ ಹೃದಯಾಘಾತಕ್ಕೂ ಆಕಸ್ಮಿಕ ಮರಣಕ್ಕೂ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ಗೆ ಸಂಬಂಧಿಸಿದಂತೆ ಹಲವಾರು ಪರ್ಯಾಯ ಪದಗಳು ಕೇಳಿ ಬರುತ್ತವೆ, ಬ್ಲಡ್ ಕೊಲೆಸ್ಟ್ರಾಲ್ಆಹಾರಕ್ಕೆ ಸಂಬಂಧವುಳ್ಳ ಕೊಲೆಸ್ಟ್ರಾಲ್ ಫ್ಲ್ಯಾಟ್ ( ಕೊಬ್ಬು) ಅನ್ ಸ್ಯಾಚ್ಯುರೇಟೆಡ್ ಪ್ಲಾಟ್, ಲಿಪೋ ಪ್ರೋಟೀನ್ಸ್,ಹೈಡೆನ್ಸಿಟಿ ಲಿಪೋ ಪ್ರೋಟೀನ್ಸ್ ಇತ್ಯಾದಿ.