ಮನೆ ರಾಜ್ಯ ಮೈಸೂರು: ಇಂದಿನಿಂದ ಏ.೪ ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಮೈಸೂರು: ಇಂದಿನಿಂದ ಏ.೪ ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

0

ಮೈಸೂರು: ತಿ.ನರಸೀಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಜಲಸಂಗ್ರಾಹಾಗಾರಗಳ ಸ್ವಚ್ಛತೆ ಕೆಲಸವನ್ನು ಕೈಗೊಳ್ಳುತ್ತಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮಾ.೨೩ ಮತ್ತು ೨೪ ರಂದು ಪುರಸಭಾ ಕಛೇರಿಯ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಒಳಪಡುವ ವಿನಾಯಕ ಕಾಲೋನಿ, ಪೇಟೇಕೇರಿ ಬೀದಿ, ತೇರಿನ ಬೀದಿ, ವಿಶ್ವಕರ್ಮ ಬೀದಿ, ಅಗ್ರಹಾರ, ಹಳೇಕುರುಬರಬೀದಿ, ಹೊಸ ಕುರುಬರಬೀದಿ, ಕಡ್ಲೆರಂಗಮ್ಮನ ಬೀದಿ, ಮಸೀದಿ ಬೀದಿ, ನಂಜನಗೂಡು ರಸ್ತೆ, ದಾಸನಾಯಕರ ಬೀದಿ ಮತ್ತು ಸುಶೀಲಮ್ಮ ಕಾಲೊನಿ, ಮಾ.೨೫ ಮತ್ತು ೨೬ ರಂದು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಹತ್ತಿರದ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಒಳಪಡುವ ಆಲಗೂಡು ಮತ್ತು ಶ್ರೀರಾಂಪುರ ಬೀದಿ, ಮಾ.೨೭ ರಂದು ಸರ್ಕಾರಿ ಆಸ್ಪತ್ರೆ ಹತ್ತಿರದ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಒಳಪಡುವ ತ್ರಿವೇಣಿನಗರ, ವಿವೇಕಾನಂದನಗರ ಹಾಗೂ ಇಂದಿರಾಕಾಲೋನಿ, ಮಾ.೨೮, ೨೯ ಮತ್ತು ಏ.೪ ರಂದು ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ) ಆವರಣದ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಒಳಪಡುವ ಹೆಚ್.ಬಿ.ಕಾಲೋನಿ ವಾರ್ಡ್-೧೦, ಹೆಳವರಹುಂಡಿವಾರ್ಡ್-೦೯, ಮಾ.೩೦ ಮತ್ತು ೩೧ ರಂದು ಹೆಳವರಹುಂಡಿ ಮೇಲ್ಪಟ್ಟದ ಜಲಸಂಗ್ರಹಾಗಾರಕ್ಕೆ ಒಳಪಡುವ ಹೆಳವರಹುಂಡಿ ಮುದ್ದಬೀರನ ಹುಂಡಿ ಕೆ.ಹೆಚ್.ಬಿ. ಕಾಲೋನಿ ಹಾಗೂ ವಿದ್ಯಾನಗರ, ಏ.೧ ಮತ್ತು ೨ ರಂದು ಫಿಲ್ಟರ್ ಹೌಸ್ (ನೀರು ಶುದ್ದೀಕರಣ ಘಟಕದ ಆವರಣದಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಒಳಪಡುವ ಭೈರಾಪುರ, ಹಳೇ ತಿರುಮಕೂಡಲು ಹೊಸ ತಿರುಮಕೂಡಲು ಹಾಗೂ ಗೋಪಾಲಪುರ, ಏ.೪ ರಂದು ಶುದ್ದೀಕರಣ ಘಟಕದ ಪುರಸಭಾ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮುಂಜಾಗ್ರತೆಯಾಗಿ ಸದರಿ ದಿನಾಂಕಗಳoದು ನೀರಿನ ಸಂಗ್ರಹಣೆ ಮಾಡಿಕೊಳ್ಳಬೇಕೆಂದು ತಿ.ನರಸೀಪುರದ ಪುರಸಭೆಯ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.