ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬೆಂಗಳೂರು ಮೂಲದ ಇಬ್ಬರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಇಬ್ಬರು ಬಾಂಬರ್ ಜೊತೆ ನೇರ ಸಂಪರ್ಕದಲ್ಲಿದ್ದರು ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮಾರ್ಚ್ 01 ರಂದು ಬೆಂಗಳೂರಿನ ವೈಟ್ ಫಿಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಈ ಪ್ರಕರಣವನ್ನು ಪ್ರಾರಂಭದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ ಪ್ರಕರಣ ತನಿಖೆಯನ್ನು ಎನ್ ಐಎ ಕೈಗೆತ್ತಿಕೊಂಡಿತು. ಪ್ರಕರಣ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು, ಆರೋಪಿಯ ಜಾಡು ಹಿಡಿದು ಹೊರಟಿದ್ದಾರೆ. ಪ್ರಕರಣ ಸಂಬಂಧ ಮಾ.13 ರಂದು ಎನ್ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಶಬ್ಬೀರ್ ಎಂಬಾತನನ್ನು ಬಂಧಿಸಿದ್ದರು.
ಬಾಂಬರ್ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದನು. ಬಾಂಬ್ ಸ್ಫೋಟಗೊಂಡ ದಿನ ಶಂಕಿತ ಉಗ್ರ ಧರಿಸಿದ್ದ 10 ನಂಬರ್ ಅಂತ ಬರೆದಿದ್ದ ಬ್ರ್ಯಾಂಡೆಡ್ ಕ್ಯಾಪ್ ನ ಜಾಡು ಹಿಡಿದು ಎನ್ ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆಗ ಕೆಫೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಧಾರ್ಮಿಕ ಸ್ಥಳದ ಬಳಿ ಶಂಕಿತ ಉಗ್ರ ಟೋಪಿಯನ್ನು ಬಿಟ್ಟು ಶರ್ಟ್ ಅನ್ನು ತೆಗೆದು, ರೌಂಡ್-ನೆಕ್ ಟೀ ಶರ್ಟ್ ಹಾಕಿಕೊಂಡು ಅಲ್ಲಿಂದ ತೆರಳಿರುವುದು ತಿಳಿದಿದೆ. ಕೂಡಲೆ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೋಪಿಯಲ್ಲಿ ಸಿಕ್ಕ ಕೂದಲು ಮಾದರಿಯನ್ನು ಸಂಗ್ರಹ ಮಾಡಲಾಗಿದ್ದು, ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಶಂಕಿತನ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.