ಮನೆ ಅಪರಾಧ ನಕಲಿ ಬೆತ್ತಲೆ ವಿಡಿಯೋ ತೋರಿಸಿ ಶಿಕ್ಷಕನಿಗೆ ವಂಚಿಸಿದ ಸೈಬರ್ ಖದೀಮರು

ನಕಲಿ ಬೆತ್ತಲೆ ವಿಡಿಯೋ ತೋರಿಸಿ ಶಿಕ್ಷಕನಿಗೆ ವಂಚಿಸಿದ ಸೈಬರ್ ಖದೀಮರು

0

ಚಿಕ್ಕಬಳ್ಳಾಪುರ : ಚರ್ಮರೋಗ ಕಾಯಿಲೆ ವಾಸಿಗೆಂದು ಫೇಸ್​​ ಬುಕ್ ​​ನಲ್ಲಿ ಸಿಕ್ಕ ಲಿಂಕ್‍ನ್ನು  ಬಳಸಿ ಅರೆಬೆತ್ತಲಾದ ಶಿಕ್ಷಕನ ವಿಡಿಯೋವನ್ನೇ ಸಂಪೂರ್ಣ ಬೆತ್ತಲೆ ವಿಡಿಯೋದಂತೆ ಸೃಷ್ಠಿಸಿ, ಆತನಿಂದ 9 ಲಕ್ಷದ 99 ಸಾವಿರ ರೂ. ಹಣವನ್ನು ಪಡೆದು ಬ್ಲಾಕ್‍ಮೇಲ್   ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಜಿಲ್ಲೆಯ ಗೌರಿಬಿದನೂರು ನಗರವಾಸಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಜಗದೀಶ್ ಎನ್ನುವವರು ವಂಚನೆ ಹಾಗೂ ಬ್ಲಾಕ್‍ಮೇಲ್‍ ಗೆ ಒಳಗಾದವರು.

ಅಸಲಿಗೆ ಜಗದೀಶ್‍ ಗೆ  ಸೋರಿಯಾಸಿಸ್ ಎನ್ನುವ ಚರ್ಮರೋಗ ಕಾಯಿಲೆ ಇದೆ. ಸೋರಿಯಾಸಿಸ್ ಕಾಯಿಲೆಗೆ ಚಿಕಿತ್ಸೆ ನೀಡುವುದಾಗಿ ಫೇಸ್ ​​ಬುಕ್​​​ ನಲ್ಲಿ ಲಿಂಕ್​ ಒಂದು ಹರಿದಾಡುತ್ತಿತ್ತು. ಲಿಂಕ್‍ ನವರು ಹೇಳಿದ ಹಾಗೆ ಅರೆಬೆತ್ತಲಾಗಿ ಜಗದೀಶ ವಿಡಿಯೋ ಕಳಿಸಿದ್ದಾನೆ. ಅದೇ ವಿಡಿಯೋವನ್ನು ಬಳಸಿಕೊಂಡು ಶಿಕ್ಷಕನ ನಕಲಿ ಬೆತ್ತಲೆ ವಿಡಿಯೋ ಸೃಷ್ಠಿಸಿದ್ದಾರೆ.

ಅದನ್ನೇ ಮುಂದಿಟ್ಟುಕೊಂಡ ಸೈಬರ್ ವಂಚಕರು ಶಿಕ್ಷಕ ಜಗದೀಶ್‍ನಿಂದ ವಿವಿಧ ದಿನಾಂಕಗಳಲ್ಲಿ ವಿವಿಧ ಅಕೌಂಟ್‍ಗಳಿಗೆ ರೂ. 9,99000 ಹಣವನ್ನು ಹಾಕಿಸಿಕೊಂಡಿದ್ದಾರೆ. ಕೊನೆಗೆ ತಾನು ಮೋಸ ಹೋಗಿರುವುದನ್ನು ಅರಿತುಕೊಂಡ ಶಿಕ್ಷಕ ಜಗದೀಶ್ ನ್ಯಾಯ ಕೊಡಿಸುವಂತೆ ಚಿಕ್ಕಬಳ್ಳಾಪುರ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.

ಹಿಂದಿನ ಲೇಖನಮೋದಿ ಮೋದಿ ಎನ್ನುವ ಯುವಕರಿಗೆ “ಕಪಾಳಮೋಕ್ಷ” ಮಾಡಬೇಕು: ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ
ಮುಂದಿನ ಲೇಖನರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಎನ್ ಐ ಎ