ಮನೆ ರಾಜ್ಯ ಆದಾಯ ತೆರಿಗೆ ಇಲಾಖೆ ನನಗೆ ನೋಟೀಸ್ ನೀಡಿದೆ: ಡಿ ಕೆ ಶಿವಕುಮಾರ್

ಆದಾಯ ತೆರಿಗೆ ಇಲಾಖೆ ನನಗೆ ನೋಟೀಸ್ ನೀಡಿದೆ: ಡಿ ಕೆ ಶಿವಕುಮಾರ್

0

ಬೆಂಗಳೂರು: ಇತ್ಯರ್ಥವಾದ ವಿಷಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ  ಶುಕ್ರವಾರ (ಮಾರ್ಚ್​​ 29) ರಾತ್ರಿ ನನಗೆ ನೋಟಿಸ್​ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

Join Our Whatsapp Group

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಬಿಜೆಪಿಯವರಿಗೆ ಗೊತ್ತು. ಹೀಗಾಗಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಈಗಾಗಲೇ ಇತ್ಯರ್ಥವಾದ ವಿಚಾರಕ್ಕೆ ನೋಟಿಸ್ ಬಂದಿದೆ ಎಂದರು.

ಇನ್ನು ಬಾಕಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್​​ ಪಕ್ಷಕ್ಕೆ ನೋಟಿಸ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿದೆ. ನಾನು ಸೇರಿದಂತೆ ವಿಪಕ್ಷಗಳ ಅನೇಕ ನಾಯಕರಿಗೆ ಸಿಬಿಐ, ಐಟಿ, ಇಡಿ ದಾಳಿ ಮೂಲಕ ಕಿರುಕುಳ ನೀಡುತ್ತಿದೆ. ಆದರೆ ದಾಳಿ ಸಂಬಂಧ ಇದುವರೆಗೂ ಸೂಕ್ತ ದಾಖಲೆ ಸಲ್ಲಿಸಿಲ್ಲ. ಕೇಂದ್ರದ ತನಿಖಾ ಸಂಸ್ಥೆಗಳ ದಾಳಿಯನ್ನು ನಾವು ಎದುರಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯವರು ಈ ದೇಶದ ಪ್ರಜಾಪ್ರಭುತ್ವ, ಕಾನೂನನ್ನು ಹರಾಜು ಮಾಡುತ್ತಿದ್ದಾರೆ. ಅಧಿಕಾರ ಬರುತ್ತೆ ಹೋಗುತ್ತೆ, ಯಾವುದು ಕೂಡ ಶಾಶ್ವಾತವಲ್ಲ. ಯಾಕೆ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇಂಡಿಯಾ ಮೈತ್ರಿಯನ್ನು ಟಾರ್ಗೆಟ್ ಮಾಡಲಾಗಿದೆ. ಸೋಲಿನ ಭಯದಿಂದ ಎನ್​ಡಿಎ ಮೈತ್ರಿಕೂಟ ಹತಾಶೆಯಾಗಿದೆ ಎಂದು ವಾಗ್ದಾಳಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್​.ಮಂಜುನಾಥ್ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಮಾಡುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಮೋರ್​ ಸ್ಟ್ರಾಂಗ್​ ಮೋರ್ ಎನಿಮಿಸ್​​, ಮೋರ್ ಸ್ಟ್ರಾಂಗ್​ ಮೋರ್ ಪವರ್. ​ಅಮಿತ್ ಶಾ ಆದರೂ ಬರಲಿ ಪ್ರಧಾನಿ ಮೋದಿ ಆದರೂ ಬರಲಿ, ನಮಗೆ ಇದೆಲ್ಲಾ ಹೊಸದು ಅಲ್ಲ. ಗೌಡರನ್ನು ಎದುರಿಸಿದ್ದೇವೆ, ಗೌಡರ ಮಗ ಹೆಚ್​ಡಿ ಕುಮಾರಸ್ವಾಮಿಯವರನ್ನು ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನು ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನು ಎದುರಿಸುತ್ತಿದ್ದೇವೆ ಎಂದರು.

ಕೊರೊನಾ ಸಂಕಷ್ಟದ ವೇಳೆ ಇವರೆಲ್ಲ ಎಲ್ಲಿ ಹೋಗಿದ್ದರು ಹೇಳಲಿ. ಕೊರೊನಾ​ ವೇಳೆ ಹೆಣ ಹೊತ್ತು ಮಣ್ಣು ಮಾಡಲು ಯಾರೂ ಇರಲಿಲ್ಲ. ಕೊರೊನಾ ಸಮಯದಲ್ಲಿ ಫುಡ್​ ಕಿಟ್​​, ಔಷಧ ಕೊಡುವಾಗ ಯಾರೂ ಇರಲಿಲ್ಲ. ಆಗ ಜನರಿಗೆ ಕಾಂಗ್ರೆಸ್​, ಡಿ.ಕೆ.ಸುರೇಶ್ ನೆರವಾದರು ಎಂದು ತಿಳಿಸಿದರು.