ಮನೆ ರಾಜಕೀಯ ಒಳ್ಳೆಯ ಕೆಲಸ ತಮ್ಮಿಂದ, ಕೆಟ್ಟದಾಗಿದ್ದರೆ ಕೇಂದ್ರದ ಕಡೆ ಬೆರಳು ತೋರುವುದು ಸಿಎಂ ಕಾಯಕ: ಪ್ರಹ್ಲಾದ ಜೋಶಿ

ಒಳ್ಳೆಯ ಕೆಲಸ ತಮ್ಮಿಂದ, ಕೆಟ್ಟದಾಗಿದ್ದರೆ ಕೇಂದ್ರದ ಕಡೆ ಬೆರಳು ತೋರುವುದು ಸಿಎಂ ಕಾಯಕ: ಪ್ರಹ್ಲಾದ ಜೋಶಿ

0

ಹುಬ್ಬಳ್ಳಿ: ರಾಜ್ಯದಲ್ಲಿ ಮಳೆಯಾಗಿಲ್ಲ ಎಂದರೆ ಅದಕ್ಕೆ ಪ್ರಧಾನಿ ಮೋದಿ, ಕೇಂದ್ರ ಸರ್ಕಾರವೇ ಕಾರಣ ಎಂದು ಸಿಎಂ ಸಿದ್ಧರಾಮಯ್ಯ ಆರೋಪಿಸುವುದೊಂದೇ ಬಾಕಿ ಉಳಿದಿದೆ. ಅಂತಹ ಹೇಳಿಕೆಯೂ ಬರಬಹುದೆಂದು ಎದುರು ನೋಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

Join Our Whatsapp Group

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಒಳ್ಳೆಯ ಕೆಲಸ ತಮ್ಮಿಂದ ಎನ್ನುವುದು, ಕೆಟ್ಟದಾಗಿದ್ದರೆ ಕೇಂದ್ರದ ಕಡೆ ಬೆರಳು ತೋರುವುದು ಸಿಎಂ ಕಾಯಕವಾಗಿದೆ. ಪುಣ್ಯಕ್ಕೆ ರಾಜ್ಯದಲ್ಲಿ ಮಳೆ ಆಗುವುದನ್ನು ಮೋದಿ ಅಡ್ಡಿಪಡಿಸಿದ್ದಾರೆ ಎಂದು ಹೇಳಿಲ್ಲವಷ್ಟೇ, ಅದನ್ನು ಹೇಳಬಹುದೇನೋ ಎಂದರು.

ಗೆಲ್ಲುವ ಪಕ್ಷದಲ್ಲಿ ಟಿಕೆಟ್ ಪೈಪೋಟಿ, ಸ್ವಲ್ಪ ಗೊಂದಲ, ಅಸಮಾಧಾನ ಸಹಜ. ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಯ ಅಸಮಾಧಾನ ಶಮನ ಪ್ರಕ್ರಿಯೆ ನಡೆದಿದೆ. ಅಸಮಾಧಾನ ಶಮನಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶಸ್ತ್ರಚಿಕಿತ್ಸೆ ಬಗ್ಗೆ ವ್ಯಂಗ್ಯ ವಾಡಿರುವುದು ಸರಿಯಲ್ಲ. ಆರೋಗ್ಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು, ಇದು ಒಳ್ಳೆ ಲಕ್ಷಣವಲ್ಲ ಎಂದರು.

ಮಠಾಧೀಶರ ಹೇಳಿಕೆ ಬಗ್ಗೆ ನಾನು ಹೆಚ್ಚಿನದೇನು ಹೇಳುವುದಿಲ್ಲ. ಮಠಾಧೀಶರು ಹೇಳಿಕೆ ನೀಡಿ ನಂತರ ಒತ್ತಡದಿಂದ ಹೇಳಿದೆ ಎಂಬುದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಜೋಶಿ ಹೇಳಿದರು.

ಹಿಂದಿನ ಲೇಖನವ್ಯಭಿಚಾರದಲ್ಲಿ ಪತ್ನಿ ನಿರತಳಲ್ಲದಿದ್ದರೆ ಆಕೆಗೆ ಜೀವನಾಂಶ ಸಿಗದಂತೆ ನಿರ್ಬಂಧಿಸಲಾಗದು: ಮಧ್ಯಪ್ರದೇಶ ಹೈಕೋರ್ಟ್
ಮುಂದಿನ ಲೇಖನಆದಾಯ ತೆರಿಗೆ ಇಲಾಖೆ ನನಗೆ ನೋಟೀಸ್ ನೀಡಿದೆ: ಡಿ ಕೆ ಶಿವಕುಮಾರ್