ಮನೆ ಸ್ಥಳೀಯ ಸರಕು ಸಾಗಾಣೆ ಮತ್ತು ಪ್ರಯಾಣಿಕರ ವಿಭಾಗದ ಗಳಿಕೆಯಲ್ಲಿ ಮೈಸೂರು ವಿಭಾಗದಿಂದ ನೂತನ ದಾಖಲೆ

ಸರಕು ಸಾಗಾಣೆ ಮತ್ತು ಪ್ರಯಾಣಿಕರ ವಿಭಾಗದ ಗಳಿಕೆಯಲ್ಲಿ ಮೈಸೂರು ವಿಭಾಗದಿಂದ ನೂತನ ದಾಖಲೆ

0

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರ ಆದರ್ಶವಾದ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡದ ಸಮರ್ಪಿತ ಪ್ರಯತ್ನಗಳ ಫಲವಾಗಿ ತನ್ನ ಇತಿಹಾಸದಲ್ಲಿಯೇ ಗಮನಾರ್ಹವಾದ ಮೈಲಿಗಲ್ಲುಗಳನ್ನು ಸಾಧಿಸಿದೆ.

Join Our Whatsapp Group

2023-24ರ ಹಣಕಾಸು ವರ್ಷದಲ್ಲಿ, ಮೈಸೂರು ವಿಭಾಗವು 11.648 ದಶಲಕ್ಷ ಟನ್‌ ಗಳಷ್ಟು (M.T) ಅತ್ಯಧಿಕ ಲೋಡಿಂಗ್ ಅನ್ನು ಸಾಧಿಸಿದೆ, ಇದು ಹಿಂದಿನ ವರ್ಷದ ಅತ್ಯಧಿಕ ದಾಖಲೆಯನ್ನು 22.0% ರಿಂದ ಮೀರಿಸಿದೆ. ಈ ಗಮನಾರ್ಹ ಸಾಧನೆಯು ವಿಭಾಗದ ಕಾರ್ಯಾಚರಣೆಯ ದಕ್ಷತೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ಪ್ರಸಕ್ತ ಹಣಕಾಸು ವರ್ಷದ ಗುರಿಯನ್ನು ಗಮನಾರ್ಹವಾಗಿ 11.7% ರಷ್ಟು ಮೀರಿಸಿದೆ.

ವ್ಯಾಗನ್ ಲೋಡಿಂಗ್ ಸಾಧನೆ: ಮಾರ್ಚ್ 31, 2024 ರಂದು, ವಿಭಾಗವು 928 ವ್ಯಾಗನ್‌ಗಳನ್ನು ಲೋಡ್ ಮಾಡಿದ್ದೂ, ಆಗಸ್ಟ್ 2023 ರಲ್ಲಿ ಸ್ಥಾಪಿಸಲಾದ ಹಿಂದಿನ ದಾಖಲೆಯನ್ನು ಮೀರಿಸಿ ಒಂದೇ ದಿನದಲ್ಲಿ ಲೋಡ್ ಮಾಡಿದ ಅತ್ಯಧಿಕ ವ್ಯಾಗನ್‌ಗಳಿಗಾಗಿ ಹೊಸ ದಾಖಲೆಯನ್ನು ಸ್ಥಾಪಿಸಿದೆ.

ಮಾಸಿಕ ಲೋಡಿಂಗ್ ಮೈಲಿಗಲ್ಲು: ಮಾರ್ಚ್ 2024 ರಲ್ಲಿ, ವಿಭಾಗವು 1.145 ದಶಲಕ್ಷ  ಟನ್‌ಗಳನ್ನು ಲೋಡ್ ಮಾಡಿ, ಡಿಸೆಂಬರ್ 2023 ರಲ್ಲಿ ಒಂದೇ ಮಾಸದಲ್ಲಿ ಮಾಡಿದ್ದ 1.125 ದಶಲಕ್ಷ  ಟನ್‌ಗಳ ಹಿಂದಿನ ಅತ್ಯಧಿಕ ದಾಖಲೆಯನ್ನು ಮೀರಿಸಿದೆ. ಇದು ವಿಭಾಗದ ಸ್ಥಿರತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ.

ದಾಖಲೆಯ ಕಬ್ಬಿಣದ ಅದಿರು ಲೋಡಿಂಗ್: ವಿಭಾಗವು 9.325 ದಶಲಕ್ಷ  ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಲೋಡ್ ಮಾಡಿ, ಹಿಂದಿನ ವರ್ಷದ ಅತ್ಯಧಿಕ ದಾಖಲೆಯಾದ 6.995 ದಶಲಕ್ಷ  ಟನ್‌ಗಳನ್ನು ಗಮನಾರ್ಹವಾಗಿ 33.3% ರಿಂದ ಮೀರಿಸಿದೆ. ಹೆಚ್ಚುವರಿಯಾಗಿ, ಇದು ರೈಲ್ವೆ ಮಂಡಳಿಯು ನಿಗದಿಪಡಿಸಿದ ಗುರಿಗಿಂತ 27.6% ರಷ್ಟು ಗಮನಾರ್ಹ ಅಂತರದಿಂದ ಪ್ರಸಕ್ತ ಹಣಕಾಸು ವರ್ಷದ ಗುರಿಯನ್ನು ಮೀರಿದೆ ಮತ್ತು ನಿರ್ಣಾಯಕ ಸರಕುಗಳನ್ನು ನಿರ್ವಹಿಸುವಲ್ಲಿನ ಅದರ ಕ್ಷಮತೆಯನ್ನು ಪ್ರದರ್ಶಿಸುತ್ತದೆ.

ಅಷ್ಟೆ ಅಲ್ಲದೆ, ಮಾರ್ಚ್ 31 ರಂದು, ವಿಭಾಗವು 696 ವ್ಯಾಗನ್ ಕಬ್ಬಿಣದ ಅದಿರನ್ನು (12 ರೇಕ್‌ಗಳು) ಲೋಡ್ ಮಾಡಿತು, ಇದು ಆಗಸ್ಟ್ 2023 ರಲ್ಲಿ ದಾಖಲಾದ ಹಿಂದಿನ ಅತ್ಯಧಿಕ ಲೋಡಿಂಗ್ ಅನ್ನು ಮೀರಿಸಿ, ವಿಭಾಗವು ಪ್ರಮುಖ ಸರಕುಗಳನ್ನು ನಿರ್ವಹಿಸುವಲ್ಲಿನ ತನ್ನ ನಿರಂತರ ಸುಧಾರಣೆಯನ್ನು ನಿರೂಪಿಸುತ್ತಿದೆ.

ಮಾಸಿಕ ಕಬ್ಬಿಣದ ಅದಿರು ಲೋಡಿಂಗ್ ದಾಖಲೆ: ವಿಭಾಗವು ಒಂದು ತಿಂಗಳಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಲೋಡ್ ಮಾಡಿದ್ದು, ಪ್ರಸಕ್ತ ತಿಂಗಳಲ್ಲಿ 0.939 M.T ಅನ್ನು ಲೋಡ್ ಮಾಡಿ, ಆಗಸ್ಟ್ 2023 ರಲ್ಲಿ ಹಿಂದಿನ ದಾಖಲೆಯನ್ನು ಮುರಿದಿದೆ.

ಆಟೋಮೊಬೈಲ್ ಲೋಡಿಂಗ್ ರೆಕಾರ್ಡ್: 2023-24 ರ ಆರ್ಥಿಕ ವರ್ಷದ ಕೊನೆಯರೆಗೆ ವಿಭಾಗವು 26 ರೇಕ್‌ಗಳ ಆಟೋಮೊಬೈಲ್‌ಗಳನ್ನು (ವಾಹನಗಳನ್ನು) ಲೋಡ್ ಮಾಡಿದ್ದೂ, ಇದು 2021-22 ಹಣಕಾಸು ವರ್ಷದಲ್ಲಿನ ಹಿಂದಿನ ಅತ್ಯಧಿಕ ದಾಖಲೆಯನ್ನು ಮೀರಿಸಿ ವೈವಿಧ್ಯಮಯ ಸರಕು ಪ್ರಕಾರಗಳನ್ನು ನಿರ್ವಹಿಸುವಲ್ಲಿನ ಅದರ ದಕ್ಷತೆಯನ್ನು ಪ್ರದರ್ಶಿಸಿದೆ.

ಅಭೂತಪೂರ್ವ ಸರಕು ಗಳಿಕೆ: ವಿಭಾಗವು ಇದುವರೆಗಿನ ಅತ್ಯಧಿಕ ಸರಕು ಸಾಗಾಣೆ ವಿಭಾಗದಲ್ಲಿ ಒಟ್ಟು 993.51 ಕೋಟಿಗಳನ್ನು ಗಳಿಸಿದೆ. ಈ ಸಾಧನೆಯು ಹಿಂದಿನ ವರ್ಷದ ಗಳಿಕೆಗಿಂತ ಶ್ಲಾಘನೀಯವಾದ 10.8% ಹೆಚ್ಚಳವನ್ನು ಮತ್ತು ಪ್ರಸಕ್ತ ಹಣಕಾಸು ವರ್ಷದ ಗುರಿಯನ್ನು 0.7% ರಷ್ಟರಲ್ಲಿ ಮೀರಿಸಿದೆ. ಇದು ವಿಭಾಗದ ಆರ್ಥಿಕ ಕುಶಾಗ್ರಮತಿ ಮತ್ತು ಆದಾಯ ಉತ್ಪಾದನೆಯ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ.

ವಿಭಾಗವು ಸರಕು ಸಾಗಣೆ ಸಾಧನೆಗಳ ಜೊತೆಯಲ್ಲಿ ಪ್ರಯಾಣಿಕರ ವಿಭಾಗದಲ್ಲಿ ಮತ್ತು ಪಾರ್ಸೆಲ್ ಗಳಿಕೆಯಲ್ಲಿಯೂ ಉತ್ತಮವಾದ ಸಾಧನೆ ತೊರಿಸಿದೆ.

ಪ್ರಯಾಣಿಕರ ಗಳಿಕೆ: FY 2023-24 ರ ಅವಧಿಯಲ್ಲಿ ರೂ 413.73 ಕೋಟಿಗಳನ್ನು ಗಳಿಸಿದ್ದು, ವಿಭಾಗವು ಹಿಂದಿನ ವರ್ಷದ ಗಳಿಕೆಯನ್ನು 9.3% ರಷ್ಟು ಮೀರಿಸಿ ಸಾಧನೆ ಮೆರೆದಿದೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಸೇವೆ ಒದಗಿಸುವ ಅದರ ಬದ್ಧತೆಯನ್ನು ತೋರಿಸುತ್ತದೆ.

ಪಾರ್ಸೆಲ್ ಗಳಿಕೆಗಳು: ವಿಭಾಗವು ಪ್ರಸಕ್ತ ವರ್ಷದಲ್ಲಿ ರೂ 10.65 ಕೋಟಿಗಳ ಗಳಿಕೆಯೊಂದಿಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 25.29% ರಷ್ಟು ಗಮನಾರ್ಹ ಹೆಚ್ಚಳವನ್ನು ಪ್ರದರ್ಶಿಸಿ ಪಾರ್ಸೆಲ್ ಸೇವೆಗಳನ್ನು ನಿರ್ವಹಿಸುವಲ್ಲಿನ ತನ್ನ ದಕ್ಷತೆಯನ್ನು ತೋರಿಸಿದೆ.

ಟಿಕೆಟ್ ಪರಿಶೀಲನಾ ಗಳಿಕೆ: ಮಾರ್ಚ್ 2024 ರವರೆಗೆ, ಟಿಕೆಟ್ ತಪಾಸಣೆಯ ಗಳಿಕೆಯು ರೂ 8.06 ಕೋಟಿಗಳಷ್ಟಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹ 14.48% ಹೆಚ್ಚಳವನ್ನು ಪ್ರತಿನಿಧಿಸುತ್ತದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ಈ ಶ್ಲಾಘನೀಯ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಸಹಕಾರಿಯಾಗಿರುವ ಎಲ್ಲಾ ಅಧಿಕಾರಿಗಳು, ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮಗಳಿಗೆ ಹೃತ್ಪೂರ್ವಕ ಮೆಚ್ಚುಗೆ ಹಾಗು ಲೋಡಿಂಗ್ ಗ್ರಾಹಕರು ಮತ್ತು ಪ್ರಯಾಣಿಕರುಗಳ ಸಹಕಾರಕ್ಕೆ ವಂದನೆಗಳನ್ನು ವ್ಯಕ್ತಪಡಿಸಿದರು. ಈ ಸಾಧನೆಯು ವಿಭಾಗದ ಉತ್ಕೃಷ್ಟತೆ ಮತ್ತು ಗ್ರಾಹಕರ ತೃಪ್ತಿಗೆ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಮೈಸೂರು ವಿಭಾಗದ ಸಾಧನೆಗಳು, ಕಾರ್ಯಾಚರಣೆಯ ಶ್ರೇಷ್ಠತೆ, ಆದಾಯ ಹೆಚ್ಚಳ ಮತ್ತು ಗ್ರಾಹಕರ ತೃಪ್ತಿಗೆ ವಿಭಾಗದ ಅಚಲವಾದ ಬದ್ಧತೆಯ ಬಗ್ಗೆ ಒತ್ತಿಹೇಳುತ್ತವೆ. ಮೈಸೂರು ವಿಭಾಗವು ರೈಲ್ವೆ ಕಾರ್ಯಾಚರಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸುತ್ತಿರುವುದರಿಂದ ರಾಷ್ಟ್ರ ಸೇವೆಗೆ ಹಾಗು ಸ್ವತಃ ತನ್ನ ಬೆಳವಣಿಗೆ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಮರ್ಪಿತವಾಗಿದೆ ಎಂದು ಅವರು ಹೇಳಿದರು.