ಮನೆ ಸ್ಥಳೀಯ ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಿ: ಕೆ.ಎಂ.ಗಾಯಿತ್ರಿ

ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಿ: ಕೆ.ಎಂ.ಗಾಯಿತ್ರಿ

0

    ಮೈಸೂರು: ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.

    Join Our Whatsapp Group

    ಇಂದು ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಭಾರತೀಯ ಆಹಾರ ಸಂಶೋಧನಾ ಕೇಂದ್ರ ಆವರಣದಲ್ಲಿ (ಸಿಎಫ್‌ಟಿಆರ್‌ಐ) ಸಿಬ್ಬಂದಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಕಡ್ಡಾಯ ಮತದಾನದ ಬಗ್ಗೆ ಪ್ರಮಾಣ ವಚನ ಬೋಧಿಸಿದ ಅವರು ನಗರ ಪ್ರದೇಶದ ಜನರು ಹೆಚ್ಚಾಗಿ ಮತದಾನ ಮಾಡುವುದಿಲ್ಲ ಎಂದು ಆರೋಪಗಳನ್ನು ದೂರ ಮಾಡಲು ನಗರ ಪ್ರದೇಶದ ವಿದ್ಯಾವಂತ ಮತದಾರರು ಮತದಾನ ಮಾಡಬೇಕು. ಕೇಂದ್ರ ಚುನಾವಣಾ ಆಯೋಗವು ಪ್ರತಿ ಚುನಾವಣೆಯಲ್ಲೂ ಸುಧಾರಣೆ ಮಾಡಿ ಮತದಾನ ಮಾಡಲು ಸುಲಭ ಮಾಡಿದೆ. ಸರ್ಕಾರಿ ನೌಕರರಲ್ಲಿ ಮತದಾನ ಕಡಿಮೆಯಾಗಿದೆ. ಈ ಬಾರಿ ಎಲ್ಲರೂ ಹೆಚ್ಚಾಗಿ ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

    ಈ ಸಂದರ್ಭದಲ್ಲಿ ಎಫ್ ಟಿ ಆರ್ ನಿರ್ದೇಶಕರಾದ ಅನ್ನಪೂರ್ಣ ಅವರು ಮಾತನಾಡಿ ಮತದಾನ ಕೇಂದ್ರ ದೂರವಿದೆ ಎಂದು ಮತದಾನ ಮಾಡದೆ ಮತ ವಂಚನೆ ಮಾಡಿಕೊಳ್ಳಬೇಡಿ. ಗ್ರಾಮೀಣ ಪ್ರದೇಶಗಳಿಗಿಂತ ಈ ಬಾರಿ ನಗರ ಪ್ರದೇಶದ ಜನರು ಹೆಚ್ಚು ಮತದಾನ ಮಾಡಿ ನಮ್ಮ ಕರ್ತವ್ಯವನ್ನು ನಿಭಾಯಿಸೋಣ ಎಂದು ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ರಾಮ್ ಪ್ರಸಾದ್ ಅವರು, ಸ್ವೀಪ್ ಸಹಾಯಕ ನೋಡಲ್ ಅಧಿಕಾರಿ ಶಾಂತಾ ಅವರು, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.