ಮನೆ ಅಪರಾಧ ಮಂಡ್ಯ: ಐಸ್ ಕ್ರೀಮ್ ತಿಂದ ಬಳಿಕ ಅವಳಿ ಮಕ್ಕಳ ಸಾವು- ತಾಯಿ ಆಸ್ಪತ್ರೆಗೆ ದಾಖಲು

ಮಂಡ್ಯ: ಐಸ್ ಕ್ರೀಮ್ ತಿಂದ ಬಳಿಕ ಅವಳಿ ಮಕ್ಕಳ ಸಾವು- ತಾಯಿ ಆಸ್ಪತ್ರೆಗೆ ದಾಖಲು

0

ಮಂಡ್ಯ: ಐಸ್ ಕ್ರೀಮ್ ಸೇವಿಸಿದ ಬಳಿಕ ಅಸ್ವಸ್ಥಗೊಂಡು, ಒಂದೂವರೆ ವರ್ಷದ ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿದ್ದು, ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Join Our Whatsapp Group

ಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಬೆಟ್ಟಹಳ್ಳಿ ಗ್ರಾಮದ ಅವಳಿ ಮಕ್ಕಳಾದ ಪೂಜಾ ಮತ್ತು ಪ್ರಸನ್ನ ಮೃತಪಟ್ಟವರು. ಬುಧವಾರ ತಾಯಿ ಮತ್ತು ಮಕ್ಕಳು ಗ್ರಾಮದಲ್ಲಿ ಮಾರಾಟಕ್ಕೆ ಬಂದವರಿಂದ ಐಸ್ ಕ್ರೀಮ್ ಖರೀದಿಸಿ ಸೇವಿಸಿದ್ದರು. ಆ ಬಳಿಕ ಮೂವರೂ ಅನಾರೋಗ್ಯದಿಂದ ಬಳಲಿದ್ದಾರೆ. ಬಳಿಕ ಮನೆಯಲ್ಲಿಯೇ ಮಕ್ಕಳು ಸಾವನ್ನಪ್ಪಿದ್ದರೆ, ಅಸ್ವಸ್ಥಗೊಂಡ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮೃತ ಮಕ್ಕಳ ಶವಗಳನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಕ್ಕಳ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿವೆ. ಈ ಬಗ್ಗೆ ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಐಸ್ ಕ್ರೀಮ್ ಮಾರಾಟ ಮಾಡಲು ಬಂದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.