ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಪಾಯಕ್ಕೆ ದೂಡಿದೆ. ಈ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಲೇಬೇಕು ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬಿಜೆಪಿ ಸಂದೇಶ ಪ್ರಕಟಿಸಿದೆ.
ಬೆಂಗಳೂರು ಮತ್ತು ರಾಜ್ಯದ ಇತರ ಕಡೆಗಳಲ್ಲಿ ನಡೆದ ಅಪರಾಧ ಕೃತ್ಯಗಳನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಕರ್ನಾಟಕವನ್ನು ಅಪಾಯಕ್ಕೆ ದೂಡಿದ ಸಿದ್ದರಾಮಯ್ಯ ಸರ್ಕಾರ. ಜಿಹಾದಿ ಮತಾಂಧರಿಂದ ನಡೆದ ಕೊಲೆ, ಹಲ್ಲೆ, ದಬ್ಬಾಳಿಕೆಗಳು ಎಂದು ಉಲ್ಲೇಖಿಸಿರುವ ಬಿಜೆಪಿ ಅಪರಾಧ ಪ್ರಕರಣಗಳ ಪಟ್ಟಿ ಮಾಡಿದೆ.
ಅವುಗಳು ಹೀಗಿವೆ;
ಹುಬ್ಬಳ್ಳಿ: ಲವ್ ಜಿಹಾದ್‌ಗೆ ಒಪ್ಪದ ಕಾಂಗ್ರೆಸ್ ಪಾಲಿಕೆ ಸದಸ್ಯನ ಪುತ್ರಿಯ ಕೊಲೆ
ಬೆಂಗಳೂರು: ಕನ್ನಡ ಮಾತನಾಡಿದ್ದಕ್ಕೆ ನಟ, ನಟಿ ಮೇಲೆ ದಬ್ಬಾಳಿಕೆ
ಮಡಿಕೇರಿ: ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧ- ಓರ್ವನ ಹತ್ಯೆ
ಚಿತ್ರದುರ್ಗ: ಸಹದ್ಯೋಗಿಯನ್ನು ಡ್ರಾಪ್ ಮಾಡಿದ ಯುವಕನಿಗೆ ಥಳಿತ
ಬಾದಾಮಿ: ಹಿಂದೂ ಸಹೋದರರ ಮೇಲೆ ಮತಾಂಧರಿಂದ ಹಲ್ಲೆ
ಚನ್ನಗಿರಿ: ರಾಮನವಮಿ ದಿನ ಹಿಂದೂ ಯುವಕರ ಮೇಲೆ ಜಿಹಾದಿಗಳಿಂದ ಕೊಲೆ ಯತ್ನ
ವಿದ್ಯಾರಣ್ಯಪುರ: ರಾಮನವಮಿ ದಿನ ಕಾರು ತಡೆದು ಪಾಕ್ ಪರ ಘೋಷಣೆ ಹಾಕುವಂತೆ ಯುವಕರ ಮೇಲೆ ಹಲ್ಲೆ
ಮೈಸೂರು: ಮೋದಿ ಹಾಡು ತೋರಿಸಿದ್ದಕ್ಕೆ ಜಿಹಾದಿಗಳಿಂದ ಹಿಗ್ಗಾಮುಗ್ಗ ಥಳಿತ
ಮಾವಳ್ಳಿಪುರ: ನೈಜೀರಿಯಾ ಪ್ರಜೆಗಳಿಂದ ಪೊಲೀಸರ ಮೇಲೆಯೇ ಹಲ್ಲೆ
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ
ಕರ್ನಾಟಕವನ್ನು ಮರಳಿ ಪಡೆಯಬೇಕೆಂದರೆ, ಕಾಂಗ್ರೆಸ್ ಸರ್ಕಾರ ತೊಲಗಲೇಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲೇಬೇಕಿದೆ’ ಎಂದು ಬಿಜೆಪಿ ಹೇಳಿದೆ.
ಹುಬ್ಬಳ್ಳಿಯ ನೇಹಾ ಕೊಲೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಈಗಾಗಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮೃದು ಧೋರಣೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಲವ್ ಜಿಹಾದ್ ಮೇರೆ ಮೀರಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.














