ಮನೆ ಸುದ್ದಿ ಜಾಲ ನಿರಂತರ ಮಳೆ: ಧರೆಗುರುಳಿದ ಮರಗಳು

ನಿರಂತರ ಮಳೆ: ಧರೆಗುರುಳಿದ ಮರಗಳು

0

ಮೈಸೂರು(Mysuru): ಸೋಮವಾರ ರಾತ್ರಿಯಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಗರದಾದ್ಯಂತ ಇನ್ನಷ್ಟು ಮರಗಳು ಧರೆಗುರುಳಿವೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೆರವು ಕಾರ್ಯಾಚರಣೆಯೂ ವೇಗವಾಗಿ ನಡೆಯುತ್ತಿಲ್ಲ. ಕುಕ್ಕರಹಳ್ಳಿ ಕೆರೆ ಸಮೀಪ ರಸ್ತೆಗುರುಳಿದ ಭಾರಿ ಗಾತ್ರದ ಮರದಿಂದ ಮೈಸೂರು-ಬೋಗಾದಿ ರಸ್ತೆಯಲ್ಲಿ ಸಂಚಾರ ಕಡಿತಗೊಂಡಿದೆ. ವಿದ್ಯಾರಣ್ಯಪುರಂನಲ್ಲಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯಲ್ಲೂ ದೊಡ್ಡ ಗಾತ್ರದ ಮರ ಧರೆಗುರುಳಿದೆ. ತ್ರಿವೇಣಿ ವೃತ್ತ ಸೇರಿದಂತೆ ಅನೇಕ ಕಡೆ ಮರಗಳು ಬಿದ್ದಿವೆ.

ಮರ ತೆರವುಗೊಳಿಸುತ್ತಿದ್ದ ಪಾಲಿಕೆಯ ರಕ್ಷಣಾ ತಂಡ ಅಭಯ್ 3ನೇ ತಂಡದ ಯಂತ್ರೋಪಕರಣಗಳು ಮಳೆಯಿಂದ ಕೆಟ್ಟಿವೆ.

ಇಲ್ಲಿನ ಕುವೆಂಪು ನಗರದ ಆರ್ ಎಂ ಪಿ ಕ್ವಾರ್ಟಸ್ ಸಮೀಪದ ಕೆ ಎಚ್ ಬಿ ಕಾಲೊನಿಯಲ್ಲಿ ವಿದ್ಯುತ್ ಪರಿವರ್ತಕವೊಂದು ರಸ್ತೆಗೆ ಬಿದ್ದಿದೆ. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅಪಾಯ ಸಂಭವಿಸಿಲ್ಲ. ಇದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ.