ಮನೆ ಕಾನೂನು ಸಿಡಿ ಪ್ರಕರಣ:  ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಒಪ್ಪಿಗೆ

ಸಿಡಿ ಪ್ರಕರಣ:  ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಒಪ್ಪಿಗೆ

0

ಬೆಂಗಳೂರು:  ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅಂತಿಮ ವರದಿಯನ್ನು ಸಲ್ಲಿಸಲು ವಿಶೇಷ ತನಿಖಾ ತಂಡ(SIT)ಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ತನಿಖಾ ವರದಿ  ಸಲ್ಲಿಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದ್ದು, ಅರ್ಜಿದಾರರು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಲಾಗಿದೆ. ಅಂತಿಮ‌ ವರದಿ ಸಲ್ಲಿಕೆಗೆ ಎಸ್ಐಟಿ ಅವಕಾಶ ಕೋರಿತ್ತು. ಸದ್ಯ ಎಸ್​ಐಟಿ ತನಿಖೆ ಪ್ರಶ್ನಿಸಿರುವ ಯುವತಿಯ ಅರ್ಜಿ ಬಗ್ಗೆ ಇಂದು ವಿಚಾರಣೆ ನಡಿಸಿದ ಕೋರ್ಟ್​ ತನಿಖಾ ವರದಿ  ಸಲ್ಲಿಸಲು ತಿಳಿಸಿದೆ.

ಇದೀಗ ಎಸ್ ಟಿ ಸಲ್ಲಿಸುವ ಅಂತಿಮ ವರದಿ ಮೇಲೆ ರಮೇಶ್ ಜಾರಕಿಹೊಳಿ ಭವಿಷ್ಯ ನಿಂತಿದೆ. ಲೈಂಗಿಕ ಕಿರುಕುಳದ ಸೆಕ್ಸ್ ಸಿಡಿ ಬಹಿರಂಗವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹಿಂದಿನ ಲೇಖನಶ್ರೀನಗರ ಕಿಟ್ಟಿ ನಟನೆಯ ಗೌಳಿ ಚಿತ್ರದ ಟೀಸರ್ ರಿಲೀಸ್
ಮುಂದಿನ ಲೇಖನಸಿಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ: ತನ್ವೀರ್ ಸೇಠ್