ಮನೆ ಅಪರಾಧ ವಂಚನೆ ಪ್ರಕರಣ: ಕೂಡಲಿ ಶೃಂಗೇರಿ ಮಠದಲ್ಲಿದ್ದ ಕೂಡಲಿ ಶ್ರೀನಿವಾಸ್ ಅಯ್ಯರ್, ರಾಮ್ ಕದಮ್ ವಿರುದ್ಧ ಎಫ್ಐಆರ್...

ವಂಚನೆ ಪ್ರಕರಣ: ಕೂಡಲಿ ಶೃಂಗೇರಿ ಮಠದಲ್ಲಿದ್ದ ಕೂಡಲಿ ಶ್ರೀನಿವಾಸ್ ಅಯ್ಯರ್, ರಾಮ್ ಕದಮ್ ವಿರುದ್ಧ ಎಫ್ಐಆರ್  

0

ಹೊಳೆಹೊನ್ನೂರು: ಸಮೀಪದ ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ 2019-20 ರ ಅವಧಿಯಲ್ಲಿ ಕೂಡಲಿ ಶೃಂಗೇರಿ ಮಠದಲ್ಲಿದ್ದ ಶ್ರೀನಿವಾಸ್ ಕೆಪಿ ಅಲಿಯಾಸ್ ಕೂಡಲಿ ಶ್ರೀನಿವಾಸ್ ಅಯ್ಯರ್ ಮತ್ತು ರಾಮ್ ಕದಮ್ ವಿರುದ್ಧ ಶೃಂಗೇರಿ ಮಹಾಸಂಸ್ಥಾಪನಾ ಸೇವಾ ಸಮಿತಿಯ ಕಾರ್ಯದರ್ಶಿಯವರು ವಂಚನೆಯ ಆರೋಪದ ಅಡಿ ಎಫ್ಐಆರ್ ದಾಖಲಿಸಿದ್ದಾರೆ.

Join Our Whatsapp Group

ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಸೇವಾ ಸಮಿತಿಯ (ರಿ) ಕಾರ್ಯದರ್ಶಿಯವರು ಮಠಕ್ಕೆ ಸೇರಿದ ಸುಮಾರು 36,000 ಎಕರೆ ಜಮೀನು ರಾಜ್ಯದ ನಾನಾ ಭಾಗಗಳಲ್ಲಿ ಇದ್ದು, ಈ ಹಿಂದೆ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿ ಮಠದ ಒಡೆತನಕ್ಕೆ ಸೇರಿದ 4,123 ಎಕರೆಯಷ್ಟು ಜಮೀನು ಇರುವುದನ್ನು ಪತ್ತೆ ಮಾಡಿದ್ದರು.

2019-2020 ರ ಅವಧಿಯ ಬ್ಯಾಂಕ್ ಸ್ಟೇಟ್ ಮೆಂಟ್ ಒಂದರಲ್ಲಿ ಕೆ ಪಿ ಶ್ರೀನಿವಾಸ್ ತನ್ನ ಹೆಸರಿಗೆ ಲಕ್ಷಾಂತರ ರೂಪಾಯಿಗಳನ್ನು ಡ್ರಾ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.

ಕೆ.ಪಿ ಶ್ರೀನಿವಾಸ್ ರವರ ಅಕ್ರಮಕ್ಕೆ ಸಾಕ್ಷಿಯೆಂದರೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ್ ಚಟ್ನಹಳ್ಳಿ, ಗ್ರಾಮದ ಸವರ್ ನಂಬರ್ 53 ರಲಿ.. 161 ಎಕರೆ ಜಮೀನನ್ನು ನೊಳಂಬ ಎಜುಕೇಷನ್ ಟ್ರಸ್ಟ್ ರವರಿಗೆ 99 ವರ್ಷ ಅವಧಿಗೆ ಬೋಗ್ಯಕ್ಕೆ ನೀಡಲಾಗಿದ್ದು, ಈ ದಸ್ತಾವೇಜು ಪತ್ರಕ್ಕೆ ಕೆ ಪಿ ಶ್ರೀನಿವಾಸ್ ರವರು ಸಾಕ್ಷಿ ಸಹಿ ಹಾಕಿಕಿದ್ದಾರೆ.‌

ಈ ವ್ಯವಹಾರದಲ್ಲಿ ಮಠಕ್ಕೆ ವಂಚನೆ ಮಾಡಿ ಲಕ್ಷಾಂತರ ರೂ ಹಣವನ್ನು ಒಳ ಒಪ್ಪಂದದ ವ್ಯವಹಾರದ ಮೂಲಕ ಪಡೆದಿರುತ್ತಾರೆ ಮತ್ತು ಶ್ರೀನಿವಾಸ್ ರವರು ಶಿವಮೊಗ್ಗ ನಗರದ ವಾಸಿ ರಾಮ್ ಕದಂ ಎಂಬುವರನ್ನು ಶಾರದಾಂಬ ದೇವಸ್ಥಾನವನ್ನು ಪುರ್ನನಿರ್ಮಿಸಲು ಶ್ರೀಗಳಿಗೆ ಪರಿಚಯಿಸಿ ಮದ್ಯಸ್ಥಿಕೆ ವಹಿಸಿ ಶ್ರೀಗಳ ಮುಖಾಂತರ 37,00,000/-, ರೂ. ಹಣಕೊಡಿಸಿದ್ದು ಇಲ್ಲಿಯವರೆಗೂ ದೇವಸ್ಥಾನದ ಪುರ್ನನಿರ್ಮಣಕ್ಕೆ ಯಾವುದೇ ಕಾಮಗಾರಿ ಮಾಡಿರುವುದಿಲ್ಲ. ಮತ್ತು ಹಣವನ್ನು ವಾಪಾಸ್ ಸಂದಾಯ ಮಾಡಿರುವುದಿಲ್ಲ.

ಈ ಎಲ್ಲಾ ವ್ಯವಹಾರಕ್ಕೆ ಶ್ರೀನಿವಾಸ್ ರವರೆ ನೇರ ಹೊಣೆಗಾರರಾಗಿರುತ್ತಾರೆ, ಈ ಬಗ್ಗೆ ಶ್ರೀಗಳು ಮತ್ತು ಭಕ್ತಾಧಿಗಳು ಸೇರಿ ವಿಚಾರಿಸಿದರೂ ಸಹ ಮಠದ ಆವರಣದಲೆ… ಅಶಾಂತಿ ಸೃಷ್ಟಿಸಿ ಶ್ರೀಗಳ ಮೇಲೆ ದಬ್ಬಾಳಿಕೆ ಮಾಡಿರುವುದಾಗಿ ಆರೋಪಿಸಲಾಗಿದೆ, ಮತ್ತು ಕೇಶವ ಫಡ್ಕೆ ಎಂಬ ಅಕ್ಕಸಾಲೆಗೆ ವ್ಯಕ್ತಿಯನ್ನು ಶ್ರೀಗಳಿಗೆ ಪರಿಚಯಿಸಿ ಮಠದ ಪುರಾತನ ಬೆಳ್ಳಿಯನ್ನು ಕರಗಿಸಿ ಕೂರ್ಮಾಸನ ಮಾಡಿಸಲು 6,97,000/- ರೂ. ಕೊಡಿಸಿದ್ದು, ಕೂರ್ಮಾಸನ ಇದುವರೆಗೂ ಲಭ್ಯವಾಗಿಲ್ಲ.

ಮಠದ ವ್ಯವಹಾರದಲ್ಲಿ ಬಾರಿ ಪ್ರಮಾಣದಲ್ಲಿ ವಂಚನೆ ನಂಬಿಕೆ ದ್ರೋಹ ಮತ್ತು ಅಕ್ರಮಗಳನ್ನು ಮಾಡಿರುತ್ತಾನೆ, ಮತ್ತು ಮಠದ ಜಮೀನುಗಳ ವ್ಯಾಜ್ಯದ ಸಲುವಾಗಿ ಹಣಕಾಸಿನ ಖರ್ಚಿಗೆ ಎಂದು ಶ್ರೀಗಳನ್ನು ನಂಬಿಸಿ ಉದ್ದಟ್ಟಿಯ ಶಾಖಾ ಮಠದಲಿ 12,00,000/ -ರೂಗಳನ್ನು ವಂಚಿಸಿದ್ದಾರೆ.

ಈ ಮೇಲ್ಕಂಡ ಎಲ್ಲಾ. ಅಲ್ಪ ಸ್ವಲ್ಪ ಹಗರಣಗಳಿಗೂ ತೀವುತರವಾದಂತಹ ದಾಖಲೆ ಪತ್ರಗಳು ಯಾವುದೂ ಸಹ ಯಾರ ಕೈಗೆ ಸಿಗದಂತೆ ಎಲ್ಲ ವನ್ನೂ ತನ್ನ ಮನೆ ಹಾಗೂ ತನ್ನ ಸಂಬಂಧಿಕರ ಮನೆಯಲಿ ಬಚ್ಚಿಟ್ಟಿರುತ್ತಾರೆ. ಈ ಎಲ್ಲಾ ವ್ಯವಹಾರಗಳು ಜನರಿಗೆ ತಿಳಿಯುತ್ತವೆ ಎಂದು ಹಿರಿಯ ಶ್ರೀಗಳು ಮಠಕ್ಕೆ ಬಾರದಂತೆ, ಬಂದರೂ ಹೆಚ್ಚು ದಿನ ಇರದಂತ ಸಂಚು ರೂಪಿಸಿ ಯಾರು ಇಲ್ಲದ ಸಮಯದಲಿ, ಶ್ರೀಗಳಿಗೆ ಬೆದರಿಕೆ ಒಡುವಂತಹ ಮತ್ತು ಮಠದಲಿ ಆಶಾಂತಿ ವಾತವಾರಣ ನಿರ್ಮಿಸಿ ತನ್ನ ಆಕ್ರಮಗಳ ಸಾಕ್ಷಿಗಳನ್ನು ನಾಶ ಮಾಡುವ ಸಲುವಾಗಿ ಕಾರ್ಯಪ್ರವೃತ್ರನಾಗಿದ್ದು ಶ್ರೀನಿವಾಸ ಅಲಿಯಾಸ್ ಕೂಡಿ.. ಶ್ರೀನಿವಾಸ ಆಯ್ಕರ್ ರವರ ವಿರುದ್ಧ ಕಾರ್ಯದರ್ಶಿಗಳು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.