ಮನೆ ಅಪರಾಧ ನಟ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸೆಟ್​ ಬೆಂಕಿಗಾಹುತಿ: ನಾಲ್ಕು ಕೋಟಿ ನಷ್ಟ

ನಟ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸೆಟ್​ ಬೆಂಕಿಗಾಹುತಿ: ನಾಲ್ಕು ಕೋಟಿ ನಷ್ಟ

0

ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್ ​ಗೆ ಬೆಂಕಿ ಬಿದ್ದಿದ್ದು ಸುಮಾರು ನಾಲ್ಕು ಕೋಟಿ ರೂಪಾಯಿ ನಷ್ಟವಾಗಿದೆ.

Join Our Whatsapp Group

ಆದರೆ ಈ ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಶಾರ್ಟ್ ಸರ್ಕ್ಯೂಟ್ ​ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸೆಟ್​ ಗೆ ಬೆಂಕಿ ಬಿದ್ದಾಗ ಶೂಟಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ಯಾವುದೇ ಹಾನಿಯಾಗಿಲ್ಲ.

ನಂದಮೂರಿ ಕಲ್ಯಾಣ್ ರಾಮ್ ಅವರು ಕ್ರೈಂ ಥ್ರಿಲ್ಲರ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣ ಹಾಗೂ ಕೆಲವು ಕಚೇರಿ ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಸೆಟ್​ನಲ್ಲಿ ಮಾಡುತ್ತಿತ್ತು. ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಒಂದೇ ಜಾಗದಲ್ಲಿ ಬೇರೆ ಬೇರೆ ಸೆಟ್​ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗುತ್ತಿದೆ. ಈಗ ಆ ಬೃಹತ್ ಸೆಟ್​ ಬೆಂಕಿಗೆ ಆಹುತಿಯಾಗಿದೆ. ಸೆಟ್​ಗೆ ಬೆಂಕಿ ಬಿದ್ದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ.

ಕಲ್ಯಾಣ್ ರಾಮ್ ನಟಿಸುತ್ತಿರುವ ಸಿನಿಮಾದಲ್ಲಿ ಹಿರಿಯ ನಟಿ, ರಾಜಕಾರಣಿ ವಿಜಯಶಾಂತಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್​ನ ಅರ್ಜುನ್ ರಾಮ್​ಪಾಲ್, ನಾಯಕಿಯಾಗಿ ಸಾಯಿ ಮಂಜ್ರೇಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಪ್ರದೀಪ್ ಚಿಲಕೂರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಶೋಕ್ ಬಂಡವಾಳ ಹೂಡಿದ್ದಾರೆ. ಕಲ್ಯಾಣ್ ರಾಮ್ ನಟನೆ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ.

ಹಿಂದಿನ ಲೇಖನಕಲಬುರಗಿ: ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿಯ ಹತ್ಯೆ
ಮುಂದಿನ ಲೇಖನಬಸವ ಜಯಂತಿ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ