ಮನೆ ರಾಜ್ಯ ಪ್ರಜ್ವಲ್ ರೇವಣ್ಣ ಪ್ರಕರಣ: ರಾಜಕೀಯ ಪ್ರೇರಿತ ಎಂದ ಹೆಚ್.ಡಿ ರೇವಣ್ಣ

ಪ್ರಜ್ವಲ್ ರೇವಣ್ಣ ಪ್ರಕರಣ: ರಾಜಕೀಯ ಪ್ರೇರಿತ ಎಂದ ಹೆಚ್.ಡಿ ರೇವಣ್ಣ

0

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ  ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದು, ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ.

Join Our Whatsapp Group

ತಮ್ಮ ಮಗ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ರೇವಣ್ಣ, ಆತ ಎಲ್ಲೋ ಹೋಗಿರಬಹುದು. ಆದರೆ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದು ಮಾಜಿ ಸಚಿವರೂ ಆದ ರೇವಣ್ಣ ಸ್ಪಷ್ಟಪಡಿಸಿದ್ದಾರೆ.

‘ನಾನೆಲ್ಲೂ ಓಡಿ ಹೋಗಿಲ್ಲ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಾವು ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇವೆ. ಪ್ರಜ್ವಲ್ ಹೋಗಬೇಕಿತ್ತು ಹೋಗಿದಾನೆ. ಕರೆದರೆ ಬರುತ್ತಾನೆ. ತನಿಖೆಗೆ ಕರೆದಾಗ ಪ್ರಜ್ವಲ್ ಬರ್ತಾನೆ’ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ.

ದೇವೇಗೌಡರ ಫ್ಯಾಮಿಲಿ ಮೇಲೆ ಅಪವಾದ ಇದೇನು ಹೊಸದಲ್ಲ

ಇದೆಲ್ಲಾ ರಾಜಕೀಯ. ಸರ್ಕಾರ ಅವರದ್ದಿದೆ, ಏನು ಬೇಕಾದರೂ ಮಾಡಲಿ. ತನಿಖೆ ನಡೆಸಿ ಕಾನೂನಿನ ರೀತಿ ಏನಿದೆ ಅದಾಗಲಿ. ದೆವೇಗೌಡರ ಕುಟುಂಬದ ಮೇಲೆ ಆರೋಪ ಇವೇನೂ ಹೊಸದಲ್ಲ. ಮೊದಲಿಂದಲೂ ಇಂಥವನ್ನು ಎದುರಿಸಿದ್ದೇವೆ. ದೇವೇಗೌಡರ ಕುಟುಂಬದ ಮೇಲೆ ಲೋಕಾಯುಕ್ತ, ಸಿಐಡಿ ತನಿಖೆ ಇವೆಲ್ಲವನ್ನೂ ಎದುರಿಸಿದ್ದೇವೆ ಎಂದು ಹೊಳೆನರಸೀಪುರ ಶಾಸಕರಾದ ಅವರು ತಿಳಿಸಿದ್ದಾರೆ.

ಕಳೆದ ವಾರ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳಿದ್ದ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿತ್ತು. ನೂರಾರು ಮಹಿಳೆಯರ ಜೊತೆ ಪ್ರಜ್ವಲ್ ರಾಸಲೀಲೆ ನಡೆಸಿದ ವಿಡಿಯೋಗಳು ಇವು. ಕೆಲಸದ ಆಮಿಷ ಇತ್ಯಾದಿ ವಿಚಾರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಪ್ರಜ್ವಲ್ ದುರುಪಯೋಗಪಡಿಸಿಕೊಂಡಿದ್ದಾರೆನ್ನಲಾಗಿದೆ.

ಎಚ್ ಡಿ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಪ್ಪ ಮತ್ತು ಮಗ ಪ್ರಮುಖ ಆರೋಪಿಗಳಾಗಿದ್ದಾರೆ.