ಮನೆ ಮನೆ ಮದ್ದು ಅರಿಶಿನ  ಕಾಮಾಲೆ (ಜಾಂಡಿಸ್ )

ಅರಿಶಿನ  ಕಾಮಾಲೆ (ಜಾಂಡಿಸ್ )

0

ಯಕೃತ್ತಿಗೆ ರಕ್ತ ಹರಿಯುವುದೇ ಪ್ರೋರ್ ಟಲ್ ಸೆರ್ಕುೄಲೇಷನ್…ಪಿತ್ತ ಜನಾಂಗದಲ್ಲಿ ಸ್ರವಿಸುವ ಪಿತ್ತರಸವು ಸಂಗ್ರಹವಾಗಿ ಕಲ್ಲು ಆಗುವುದು,ಯಕೃತ್ತಿನಲ್ಲಿ ಪಿತ್ತ ಸಂಚಯವಾಗುವುದು. ಯಕೃತ್ತಿಯಲ್ಲಿ ಸೂಕ್ಷ್ಮ ವಿಷ ಕ್ರಿಮಿಗಳು ಹೆಚ್ಚಿ ಊತವಾಗುವುದು, ಯಕೃತ್ತಿಯಲ್ಲಿ ಹುಣ್ಣು ಆಗುವುದು – ಇವುಗಳಿಂದ ಪಿತ್ತರಸವು ರಕ್ತದಲ್ಲಿ ಸೇರಿ ಹರಿಯುವುದರಿಂದ ದೇಹದ  ಎಲ್ಲಾ ಅಂಗಗಳೂ ಅರಿಶಿನ ಬಣ್ಣವಾಗಿ ಪ್ರಾಣಾಂತಿಕ ಮಾಡುವುದನ್ನೇ ಜಾಂಡೀಸ್ ಎಂದು ಕರೆಯುತ್ತಾರೆ.

Join Our Whatsapp Group

    1. ಪಿತ್ತರಸವು ಕ್ಷಾರಗುಣವನ್ನು ಹೊಂದಿದೆ. ಅದರ ವಿರುದ್ಧವಾಗಿ ಆಮ್ಲಕ್ಕೆ ಹೆಚ್ಚಾಗಿರುವ  ನಿಂಬೇ ರಸವನ್ನು ನೀರಿನಲ್ಲಿ ದಿನಕ್ಕೆ 6 ಬಾರಿಯಾದರೂ ಸೇವಿಸುವುದರಿಂದ ಆಮ್ಲತೆಯು ಹೆಚ್ಚಿ ಕ್ಷಾರಗುಣವನ್ನು ಕಡಿಮೆ ಮಾಡುತ್ತದೆ.

 2.ಕಿತ್ತಳೆ ರಸ, ಮೋಸಂಬಿ ರಸ ಬೆಲ್ಲದ ಹಣ್ಣಿನ ರಸ, ನೇರಳೆ ಹಣ್ಣಿನ ರಸ ಗಳನ್ನು ಸೇವಿಸುವುದರಿಂದ ಪಿತ್ತರಸವು ಕಡಿಮೆಯಾಗಿ ಅರಿಶಿನ ಕಾಮಾಲೆ ಗುಣವಾಗುವುದು.

 3.ಸೋಡಾ ಬೈಕಾರ್ಭೋನೇಟನ್ನು ನೀರಿನಲ್ಲಿ ಮಿಶ್ರ ಮಾಡಿ ಸೇವಿಸುವುದರಿಂದ ಪಿತ್ತ ರಸವು ಕಡಿಮೆಯಾಗಲು ಕಾರಣವಾಗುತ್ತದೆ.

4. ಬೇವಿನ ಎಲೆಗಳು ಕಹಿಯಾಗಿರುವುದರಿಂದ ಅದನ್ನು ಸೇವಿಸುವುದರಿಂದ ಪಿತ್ತರಸ ಹೆಚ್ಚಾಗಿ ಸ್ರವಿಸುವುದು.

5. ಕಾಲಮೇಘ ಎನ್ನುವ ಗಿಡವನ್ನು ಒಣಗಿಸಿ ಸೇವಿಸುವುದರಿಂದ ಪಿತ್ತರಸವು ಹೆಚ್ಚುವುದು ಬಂಗಾಳ ದೇಶದಲ್ಲಿ ಸಿಕ್ಕುವ ಪಟಾಲ ಎಂಬ ಹಣ್ಣುಗಳನ್ನು ಸೇವಿಸಿ ಅವುಗಳ ಎಲೆಯನ್ನು ಕಹಿಯಾಗಿರುವುದರಿಂದ ಪಿತ್ತರಸವನ್ನು ಹಿಡಿತದಲ್ಲಿಟ್ಟುಕೊಳ್ಳುತ್ತದೆ.

6. ಕಬ್ಬಿನ ರಸವನ್ನು ಒಂದು ದಿನಕ್ಕೆ ಒಂದು ಲೀಟರ್ ತಂದು ನಾಲ್ಕು ಗಂಟೆಗಳಿಗೆ ಒಂದಾವರ್ತಿ ಒಂದು ಲೋಟ ಕುಡಿಯುತ್ತಾ ಬಂದರೆ ಅರಿಶಿನ ಬಣ್ಣ ಮೂತ್ರಲ್ಲಿ ವಿಸರ್ಜನೆ ಯಾಗಿ ರಕ್ತಕ್ಕೆ ಸೇರಿದ  ಪಿತ್ತವು ಕಡಿಮೆಯಾಗುತ್ತದೆ.

7. ನಿಂಬೇರಸ ಹಸಿ ಶುಂಠಿ ರಸ ಹಾಕಿ ಮಿಶ್ರ ಮಾಡಿದ ಮಜ್ಜಿಗೆಯನ್ನು ದಿನಕ್ಕೆ ಒಂದು ಲೀಟರ್ ಅನ್ನು ಆಗಾಗ ಕುಡಿಯುವುದರಿಂದ ಅರಿಶಿನ ಕಾಮಾಳೆ ನಿವಾರಣೆ ಆಗುವುದು.

8. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಕೊತ್ತಂಬರಿ,ಹಸಿ ಶುಂಠಿ ಚೂರುಗಳ ಮಿಶ್ರ ಮಾಡಿ ದಿನಕ್ಕೆ ಮೂರು ವೇಳೆ ಸೇವಿಸುವುದರಿಂದ ಜಾಂಡಿಸ್ ಗುಣವಾಗುತ್ತದೆ.

9. ಪ್ರತಿದಿನವೂ ಒಂದು ಚಮಚ  ಅರಿಶಿನ ಪುಡಿಯನ್ನು ಬೆಲ್ಲದೊಡನೆ ಮಿಶ್ರಮಾಡಿ ಸೇವಿಸಿ ಕಾಯಿಸಿ ಆರಿಸಿದ ನೀರು, ಮಜ್ಜಿಗೆ ಕಬ್ಬಿನ ರಸ ಇವುಗಳ ಯಾವುದನ್ನು ಕುಡಿದರೂ ಜಾಂಡೀಸ್ ಗುಣವಾಗುತ್ತದೆ

10. ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜಾಂಡೀಸ್ ರೋಗಿಗಳ ಶೇಖರವಾಗಿರುವ ಪಿತ್ತರಸವನ್ನು ತಗ್ಗಿಸಲು   ಮೂತ್ರ ವಿರೇಚನಗಳ ಮೂಲಕ ಹೊರದೂಡುವುದೇ ಆಗಿದೆ. ಈ ಕಾರಣದಿಂದ ಮಜ್ಜಿಗೆಯಲ್ಲಿ ಒಂದು ಚಮಚ ಅರಿಶಿನ ಮಿಶ್ರ ಮಾಡಿ ಸೇವಿಸಬೇಕು.

11. ಅನಾನಸ್ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಜೇನುತುಪ್ಪದಲ್ಲಿ ಬೆಳಿಗ್ಗೆ,ಮಧ್ಯಾಹ್ನ, ಸಾಯಂಕಾಲ ಸೇವಿಸುತ್ತಾ ಬರಲು ಜಾಂಡೀಸ್ ನಿವಾರಣೆ ಆಗುವುದು ಅನಾನಸ್ ಹಣ್ಣಿನ ರಸವನ್ನು ಮಾಡಿ ನಾಲ್ಕು ಗಂಟೆಗೆ ಒಂದು ಸಾರಿ ಯಂತೆ ಕುಡಿಯುತ್ತಾ ಬಂದರೆ ಅರಿಶಿನ ಕಾಮಾಲೆ ಗುಣವಾಗುವುದು.

12. ದೊಡ್ಡ ಪತ್ರೆ ಎಲೆಗಳನ್ನು ಸಣ್ಣಗೆ  ಹೆಚ್ಚಿಕೊಂಡು ಅದಕ್ಕೆ ಉಪ್ಲನ್ನಾಗಲೀ,  ಜೇನು ತುಪ್ಪ ನನ್ನಾಗಲೀ, ಮಿಶ್ರ ಮಾಡಿ ಸೇವಿಸಿದರೆ ಜಾಂಡಿಸ್ ನಿವಾರಣೆ ಆಗುವುದು

13 ಮಾವಿನ ಕಾಯಿಯನ್ನು ತಂದು ತೊಳೆದು ಸಣ್ಣ ಚೂರುಗಳನ್ನಾಗಿ ಮಾಡಿ ಅದಕ್ಕೆ ಕರಿಮೆಣಸಿನ ಕಾಳು ಪುಡಿಮಾಡಿ ಬೆರೆಸಿ ಜೇನುತುಪ್ಪದೊಡನೆ ಸೇವಿಸುವುದರಿಂದ ಗುಣವಾಗುವುದು. ಜಾಂಡೀಸ್ ಹೆಸರೇ ಇಲ್ಲದಂತೆ ಅರಿಶಿನ ಬಣ್ಣ ಬದಲಾಗುವುದು.

 14.ಚೆನ್ನಾಗಿ ಬಲಿತ ಹೇರಳೆ ಹಣ್ಣನ್ನು ತಂದು, ಅದನ್ನು ಎರಡು ಹೋಳುಗಳನ್ನಾಗಿ ಕತ್ತರಿಸಿ ಅದಕ್ಕೆ ಉಪ್ಪು, ಜೀರಿಗೆ ಪುಡಿಯನ್ನು ಹಾಕಿ ಕೆಂಡದ ಮೇಲಿಟ್ಟು ಕುದಿಸಿದ ನಂತರ ತಣ್ಣಗಾದ ಮೇಲೆ ಅದನ್ನು ಸೇವಿಸುವುದರಿಂದ ಜಾಂಡೀಸ್ ಗುಣವಾಗುತ್ತದೆ

15.ಹರಳು ಗಿಡದ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಕುಟ್ಟಿದ ರಸವನ್ನು 1 ಒನ್ಸ್ ಪ್ರಕಾರ ಬೆಳಿಗ್ಗೆ ಮತ್ತು ಸಾಯಂಕಾಲ ಕುಡಿದರೆ ಅರಿಶಿನ ಕಾಮಾಲೆ ಗುಣವಾಗುವುದು.

16. ಒಂದು ಗೋಲಿಯಷ್ಟು ಹಳೇ ಹುಣಸೆಹಣ್ಣಿಗೆ,ಅಷ್ಟೇ ತೂಕದ ಜೀರಿಗೆ ಪುಡಿಯನ್ನು ಮಾಡಿ ಸೇರಿಸಿ, ಜೇನು ತುಪ್ಪದೊಂದಿಗೆ ಪ್ರತಿದಿನವೂ ಎರಡೆರಡು ವೇಳೆ ಸೇವಿಸುತ್ತಿದ್ದರೆ ಜಾಂಡಿಸ್ ಗುಣವಾಗುವುದು.

  17. ಅರ್ಧತೂಲೆಯಷ್ಟು ಶುಂಠಿ ಪುಡಿಯನ್ನು ಆಗತಾನೆ ಕರೆದ ನೊರೆ ತೆಗೆದು ಹಾಲಿಗೆ ಹಾಕಿ ಎರಡು ವೇಳೆ ಕುಡಿಯುತ್ತಾ ಬರಲು ಅರಶಿನ ಕಾಮಾಲೆ ಗುಣವಾಗುವುದು

 18.ಮಾವಿನ ಕಾಯಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಕರಿಮೆಣಸಿನ ಕಾಳಿನಪುಡಿ, ಜೇನುತುಪ್ಪ ಸೇರಿಸಿ ಸೇವಿಸಲು ಜಾಂಡೀಸ್ ಗುಣವಾಗುವುದು.

 19.ಕಿರುನೆಲ್ಲೆ, ನೆಲ್ಲೆ ನೆಲ್ಲಿ ಎಂದು ಹೇಳುವ ಮೂಲಿಕೆಯನ್ನು ಒಂದು ತೊಲದಷ್ಟು ತಂದು ಅರೆದು, ಮಜ್ಜಿಗೆಯಲ್ಲಿ ಬೆರೆಸಿ,ಸೇವಿಸುತ್ತಾ ಬಂದರೆ ಜಾಂಡೀಸ್ ನಿವಾರಣೆ ಆಗುವುದು.

20. ಗರುಗದ ಸೊಪ್ಪನ್ನು ತಂದು, ಚೆನ್ನಾಗಿ ತೊಳೆದು ಅದರ ರಸವನ್ನು ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಅರಿಶನ ಕಾಮಾಲೆ ಗುಣವಾಗುವುದು.  

21. ಯಕೃತ್ತಿನ  ಊತಕ್ಕೆ ಹೆಚ್.ಬಿ.ವೈರಸ್ ಕಾರಣವಾಗಿರುವುದರಿಂದ ರೋಗ ಬಂದಾಗ ಎಚ್ಚರಿಕೆ ವಹಿಸಿ ಶೀಘ್ರವಾಗಿ ಗುಣಪಡಿಸಿಕೊಳ್ಳಬೇಕು ರೋಗಬರದಂತೆ ನೀರನ್ನು ಕಾಯಿಸಿ ಕುಡಿಯಬೇಕು.ಒಂದು ಚಿಟಿಕೆ ಸೀಗೆಕಾಯಿ ಪುಡಿಯನ್ನು ಇಂಗಳದ ಹಣ್ಣಿನಲ್ಲಿ ಹುದುಗಿಸಿ ನುಂಗಿಸುವುದರಿಂದ ಕಾಮಾಲೆ ವಾಸಿಯಾಗುವುದು.

22. ಬಿಳಿ ಕೊಮ್ಮೆ ಬೇರನ್ನು ಹಾಲಿನಲ್ಲಿ ಅರೆದು, ಸೇವಿಸಲು ಜಾಂಡೀಸ್ ಗುಣ ವಾಗುವುದು.

23. ಹರಳೆಲೆ ಬೇವಿನ ಎಲೆ,ಬಿಲ್ಲಪತ್ರೆ ಎಲೆಗಳನ್ನು ಕುಟ್ಟಿ ಉಂಡೆ ಮಾಡಿ ನುಂಗಿಸಿ

ಸಿಹಿ ಸಾರು ಅನ್ನ ಪಥ್ಯವಿರಲು ಗುಣವಾಗುವುದು

 24.ಕಾಮಾಲೆ ರೋಗವು ಆಹಾರ ಅಥವಾ ನೀರಿನ ಮೂಲಕ ವಿಷ ಕಣಗಳು ಶರೀರವನ್ನು ಅರಿಶಿನ ಬಣ್ಣವಾಗಿ ಮಾಡುತ್ತದೆ. ಇದಕ್ಕೆ ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಬೆಳಿಗ್ಗೆ ಹಾಲಿನಲ್ಲಿ ಅರೆದು ಕುಡಿಸಿ ಹುರುಳಿ ಕಬ್ಬಿನ ಸಿಪ್ಪೆ ಸಾರಿನೊಂದಿಗೆ ಊಟ ಮಾಡಬೇಕು ಶಲದಿವರ್ಜಿತ, ಎಣ್ಣೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಮೂರು ತಿಂಗಳು ತಿನ್ನಬಾರದು.