ಮನೆ ಅಪರಾಧ ಕೋರ್ಟ್​ ತೀರ್ಪಿನ ಬಳಿಕ ನ್ಯಾಯಾಲಯದ ಆವರಣದಿಂದ ಅಪರಾಧಿ ಪರಾರಿ

ಕೋರ್ಟ್​ ತೀರ್ಪಿನ ಬಳಿಕ ನ್ಯಾಯಾಲಯದ ಆವರಣದಿಂದ ಅಪರಾಧಿ ಪರಾರಿ

0

ರಾಜಸ್ಥಾನ: ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿಯೊಬ್ಬ ತೀರ್ಪು ಪ್ರಕಟವಾದ ಕೂಡಲೇ ರಾಜಸ್ಥಾನದ ಅಲ್ವಾರ್‌ ನ ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದಾರೆ.

Join Our Whatsapp Group

ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ತಕ್ಷಣ ಮನೀಶ್ ನ್ಯಾಯಾಲಯದಿಂದ ಓಡಿಹೋಗಿದ್ದಾನೆ.

ಪೊಲೀಸರು ಮನೀಶ್ ವಿರುದ್ಧ IPC ಸೆಕ್ಷನ್ 354, 354D, 452, 506 ಮತ್ತು POCSO ಸೆಕ್ಷನ್ 7/8 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ, ನಂತರ ಆತನನ್ನು ಬಂಧಿಸಲಾಯಿತು. ಅಲ್ವಾರ್‌ ನ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆಯುತ್ತಿತ್ತು.

ಆರೋಪ ಸಾಬೀತಾದ ನಂತರ ನ್ಯಾಯಾಲಯವು ಮನೀಶ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿತ್ತು. ಆದರೆ, ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಜನಸಂದಣಿಯ ಲಾಭ ಪಡೆದು ನ್ಯಾಯಾಲಯದಿಂದ ಪರಾರಿಯಾಗಿದ್ದಾನೆ.

ವಕೀಲರೊಂದಿಗೆ ಆತ ನ್ಯಾಯಾಲಯಕ್ಕೆ ಹಾಜರಾಗಿದ್ದ ಆ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಅಥವಾ ಪೊಲೀಸ್​ ಅಲ್ಲಿರಲಿಲ್ಲ. ಶಿಕ್ಷೆ ಪ್ರಕಟವಾದ ಬಳಿಕ ವಕೀಲರು ಬೇರೆ ಕೆಲಸದಲ್ಲಿ ನಿರತರಾಗಿದ್ದರು. ನ್ಯಾಯಾಲಯದ ಆವರಣದಲ್ಲಿ ಜನಜಂಗುಳಿ ಇತ್ತು. ಇದರ ಲಾಭ ಪಡೆದ ಆರೋಪಿ ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದಾನೆ.

ಪೊಲೀಸ್ ತಂಡವು ಆತನನ್ನು ಹುಡುಕುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಪೊಲೀಸರು ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.