ಮನೆ ಅಪರಾಧ ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಕಳ್ಳ

ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಕಳ್ಳ

0

ಮೈಸೂರು: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದು ಮನೆಯವರಿಗೆ ಸಿಕ್ಕಿಹಾಕಿಕೊಂಡಾಗ ತಪ್ಪಿಸಿಕೊಳ್ಳಲು ಮನೆಯ ಮಹಡಿಯ ಮೇಲಿಂದ ಜಿಗಿದು ತಪ್ಪಿಸಿಕೊಳ್ಳಲು ಹೋಗಿ ತಲೆಗೆ ಪೆಟ್ಟು‌ ಮಾಡಿಕೊಂಡಿದ್ದಾನೆ.

Join Our Whatsapp Group

ಹೀಗೆ ಕಳ್ಳತನ ಮಾಡಲು ಬಂದಿದ್ದವನ ಹೆಸರು ರವಿ. ವೃತ್ತಿಯಲ್ಲಿ ಕಾರ್ಪೆಂಟರ್. ಈತ ತಾನು ಕೆಲಸ ಮಾಡಿದ ಡಾ ಬಾಲಾಜಿ ಎಂಬುವವರ ಮನೆಯಲ್ಲೇ ಕಳ್ಳತನ ಮಾಡಿ‌ ಸಿಕ್ಕಿ ಬಿದ್ದಿದ್ದಾನೆ.  

ಜೊತೆಗೆ ಆ ಬೀರುವಿನ ಹಾಗೂ ಮನೆಯ ನಕಲಿ ಕೀ ಸಹ ಮಾಡಿ‌ ಇಟ್ಟುಕೊಂಡಿದ್ದ. ಬಾಲಾಜಿ ಹಾಗೂ ಅವರ ಮನೆಯವರು ಇಲ್ಲದಾಗ ಬಂದು ಕಳ್ಳತನ ಮಾಡಿದ್ದ. ಇದೇ ರೀತಿ ಮೂರು ಬಾರಿ ಕಳ್ಳತನ ಮಾಡಿದ್ದಾನೆ. ಇದೀಗ ನಾಲ್ಕನೆಯ ಬಾರಿಗೆ ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದಿದ್ದಾನೆ.

ರವಿ ತಾನು ಸಿಕ್ಕಿಬಿದ್ದ ಮನೆಯ ಮಹಡಿಯ ಮೇಲಿಂದ ಜಿಗಿದು ಪರಾರಿಯಾಗಲು ಮುಂದಾಗಿದ್ದಾನೆ. ಈ ಪ್ರಯತ್ನದಲ್ಲಿ ಮಹಡಿಯಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟು‌ ಮಾಡಿಕೊಂಡಿದ್ದಾನೆ ಎಂದು ಡಾ ಬಾಲಾಜಿ ಪತ್ನಿ ಅವರ ಪತ್ನಿ ಹರಿಣಿ ಹೇಳಿದ್ದಾರೆ.

ತಕ್ಷಣ ಮೈಸೂರು ಗ್ರಾಮಾಂತರ ಪೊಲೀಸರಿಗೆ ವಿಷಯ ತಿಳಿಸಿದ ಬಾಲಾಜಿ ಅವರು ರವಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ರವಿ ಜೈಲು ಸೇರಿದ್ದಾನೆ.