ಮನೆ ಮನೆ ಮದ್ದು ಆಯಾಸ

ಆಯಾಸ

0

1. ಕೆಲವರು ಇದ್ದಕ್ಕಿದ್ದಹಾಗೆ “ನನಗೆ ಆಯಾಸ, ಸುಸ್ತು,ನಿದ್ರಣ, ಕೈಲಿ ಶಕ್ತಿ ಇಲ್ಲ, ಎಂದು ಹೇಳುತ್ತಾರೆ.ಆಗ ಒಂದು ಲೋಟ ಹಾಲಿಗೆ ಒಂದು ಚಮಚ ಗ್ಲೊಕೋಸ್  ಹಾಕಿ ತಕ್ಷಣ ಕುಡಬೇಕು. ಗ್ಲೂಕೋಸ್ ಇಲ್ಲದಿದ್ದರೆ  ಸಕ್ಕರೆ ಅದೂ ಇಲ್ಲದಿದ್ದರೆ ಬೆಲ್ಲ ಹಾಕಿ ಪಾನಕ ಮಾಡಿ ಕುಡಿಸಬೇಕು.

Join Our Whatsapp Group

2. ಮಧುಮೇಹ ರೋಗಿಗಳಲ್ಲಿ ಈ ರೀತಿ ಆಯಾಸವಾಗಲು ಕಾರಣ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗಿರುತ್ತದೆ. ಇದನ್ನು ಮನೆಯಲ್ಲಿದ್ದವರು ಅರ್ಥ ಮಾಡಿಕೊಂಡು ಅವರಿಗೆ ಈ ಉಪಚಾರ ಮಾಡಬೇಕು. ಹತ್ತಿರದಲ್ಲಿ ಕಬ್ಬಿನ ರಸವನ್ನು ತಯಾರು ಮಾಡುವ ಅಂಗಡಿ ಇದ್ದರೆ, ಅಲ್ಲಿಗೆ ಹೋಗಿ ಹೊಸದಾಗಿ ಕಬ್ಬಿನ  ರಸವನ್ನು ಒಂದು ಲೋಟ ತಂದು ಕುಡಿಸಬೇಕು.ಇದರಲ್ಲಿ ಆಮ್ಲಜನಕವನ್ನು ಹೀರುವ ಗುಣವಿರುವುದರಿಂದ ಹೃದಯಾಘಾತದಲ್ಲಿಯೂ ಹೆಚ್ಚು ಉಪಯೋಗ. ದಾರಿಯಲ್ಲಿ ಆಯಾಸ ಕಂಡರೆ,ಪಕ್ಕದಲ್ಲಿರುವ ಜ್ಯೂಸ್ ಅಂಗಡಿಗೆ ಹೋಗಿ ಹಣ್ಣಿನ ಜ್ಯೂಸ್, ಕಬ್ಬಿನ ಜ್ಯೂಸ್ ತಕ್ಷಣ ತಂದು ಕುಡಿಸಿ, ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಬೇಕು.

3. ಕಲ್ಲಂಗಡಿ ಹಣ್ಣಿನ ರಸವನ್ನು ಸೇವಿಸುವುದರಿಂದ ಆಯಾಸ ಪರಿಹಾರ ಆಗುವುದು.

  4. ಖರ್ಬೂಜದ ಹಣ್ಣಿನ ಪಾನಕ ಸೇವಿಸುವುದರಿಂದ ರಾಸಾಯನಿಕ ವಸ್ತುಗಳು ತಕ್ಷಣ ರಕ್ತಕ್ಕೆ ಸೇರಿ ಆಯಾಸ ಪರಿಹಾರ ಮಾಡುತ್ತದೆ.

4.ಮಜ್ಜಿಗೆಗೆ ಉಪ್ಪು ಈರುಳ್ಳಿ ಸೇರಿಸಿ ಕುಡಿಸಿದರೆ ಮಾರ್ಗಾಯಾಸ ಪರಿಹಾರವಾಗುವುದು.

5.ಗರಿಕೆ ಹುಲ್ಲಿನ ರಸ ಸೇವಿಸುತ್ತಿದ್ದರೆ ಆಯಾಸ, ದಣಿವು ಬಳೆಲಿಕೆಗಳು ಕೂಡಲೇ ನಿವಾರಣೆ ಆಗುವುದು.

 6.ಮಾವಿನ ಹಣ್ಣಿನ ರಸಕ್ಕೆ ಹಾಲು ಬೆರೆಸಿ ಸಕ್ಕರೆ ಸೇರಿಸಿ ಕುಡಿಯಲು ದಣಿವು ಪರಿಹಾರವಾಗುವುದು.

8.ಹಸಿಯಾದ ಅಲಸಂದೆ ಕಾಳನ್ನು ಹೊಸದಾದ ಕಂದು ಬೆಲ್ಲದೊಳಗೆ ಸೇವಿಸಿದರೆ ಬಳಲಿಕೆ ಪರಿಹಾರವಾಗುವುದು.ಹಳ್ಳಿಗಳಲ್ಲಿ ಇದು ಸುಲಭವಾಗಿ ಸಿಗುತ್ತದೆ.

9.ಯಾರೇ ಆಗಲಿ ಮನೆಯಲ್ಲಿ ಜೇನುತುಪ್ಪ ಶೇಖರಿಸಿಟ್ಟು ಒಂದು ಲೋಟ ನೀರಿನಲ್ಲಿ  ಜೇನುತುಪ್ಪ ಸೇವಿಸಿದರೆ ಆಯಾಸ, ದಣಿವು, ಬಳಲಿಕೆ ಪರಿಹಾರವಾಗಿ ನವ ಚೈತನ್ಯ ಬರುವುದು.