ಮನೆ ರಾಜಕೀಯ ಮುಂದಿನ 20 ವರ್ಷಗಳ ಕಾಲ ಬಿಜೆಪಿ ವಿಪಕ್ಷದಲ್ಲೇ ಇರಲಿದೆ: ಲಕ್ಷ್ಮಣ ಸವದಿ ವಾಗ್ದಾಳಿ

ಮುಂದಿನ 20 ವರ್ಷಗಳ ಕಾಲ ಬಿಜೆಪಿ ವಿಪಕ್ಷದಲ್ಲೇ ಇರಲಿದೆ: ಲಕ್ಷ್ಮಣ ಸವದಿ ವಾಗ್ದಾಳಿ

0

ವಿಜಯಪುರ: ಮನೆಯೊಂದು ಮೂರು ಬಾಗಿಲಾಗಿರುವ ಹಾಗೂ ರಾಜಕೀಯ ಭವಿಷ್ಯವಿಲ್ಲದ ಬಿಜೆಪಿ ಬರುವ 20 ವರ್ಷಗಳ ಕಾಲ ವಿಪಕ್ಷದಲ್ಲೇ ಇರಲಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ತತ್ವ, ಸಿದ್ಧಾಂತ ಗಾಳಿಗೆ ತೋರಲಾಗಿದೆ ಎಂದು ಕಾಂಗ್ರೆಸ್ ಶಾಸಕನಾಗಿ ನಾನು ಹೇಳಿದ್ದಲ್ಲ, ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಹೇಳಿರುವುದು ಎಂದು ಕುಟುಕಿದರು.

ರಾಮಕೃಷ್ಣ ಹೆಗಡೆ ಅವರ ಅಪ್ಪಟ ಬೆಂಬಲಿಗರಾಗಿದ್ದ ನಾವು, ಅವರು ಇರುವವರೆಗೆ ಜತೆಯಲ್ಲಿದ್ದೆವು. ತಮ್ಮ ಅನಾರೋಗ್ಯದ ಪರಿಸ್ಥಿತಿ ಸಂದರ್ಭದಲ್ಲಿ ಲಾಲಕೃಷ್ಣ ಅಡ್ವಾಣಿ ಅವರು ನಮ್ಮನ್ನು ಸಂಪರ್ಕಿಸಿ ಬಿಜೆಪಿ ಸೇರ್ಪಡೆ ಮಾಡಿಸಿದ್ದರು.‌ ಆಗ ಬಿಜೆಪಿ ಪಕ್ಷದಲ್ಲಿ ಅನಂತಕುಮಾರ್ ಅವರಂಥಹ ನಾಯಕರಿದ್ದರು. ಈಗ ಬಿಜೆಪಿ ಪಕ್ಷದಲ್ಲಿ ಅಂಥ ನಾಯಕರಿಲ್ಲ. ಕುಟುಂಬ ರಾಜಕೀಯ ಮತ್ತು ಆಂತರಿಕ ಸಂಘರ್ಷದಿಂದ ಬಿಜೆಪಿ ತತ್ತರಿಸಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ 135 ಶಾಸಕ ಬಲದೊಂದಿಗೆ ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿದೆ. ಹೀಗಾಗಿ ಯಾವ ಪಕ್ಷವನ್ನು ಯಾರು ತೊರೆಯಲಿದ್ದಾರೆ ಎಂದು ಕಾದು ನೋಡಿ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾದ ಗ್ಯಾರಂಟಿ ಯೋಜನೆಗಳಿಂದ ಜನರು ಸಂತೃಪ್ತರಾಗಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದರು.

ಹಿಂದಿನ ಲೇಖನಗ್ಯಾರಂಟಿ ಯೋಜನೆ ಟೀಕಿಸಿದ್ದ ಮೋದಿಯವರೇ ಈಗ ಗ್ಯಾರಂಟಿ ಘೋಷಣೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಬರ ಪರಿಹಾರ ಕೆಲಸ ಪ್ರಾರಂಭವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ