ಮನೆ ಯೋಗಾಸನ ಅಧೋಮುಖ ಶ್ವಾನಾಸನ

ಅಧೋಮುಖ ಶ್ವಾನಾಸನ

0

     ‘ಅಧೋಮುಖ’ ವೆಂದರೆ ಕೆಳಮೊಗ ‘ಶ್ವಾನ ’ವೆಂದರೆ ನಾಯಿ.ಈ ಭಂಗಿಯು, ಮುಂಗಾರುಗಳನ್ನು ಮುಂದಕ್ಕೆ ತಲೆಗಳನ್ನು ಕೆಲಗೆ ಮಾಡಿ ಹಿಂಗಾಲುಗಳನ್ನು ಮೇಲಕ್ಕೆತ್ತಿರುವ  ನಾಯಿಯನ್ನು ಹೋಲುವುದರಿಂದ ಆಸನಕ್ಕೆ ಹೆಸರು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ಕೆಳಮೊಗಮಾಡಿ,ನೆಲದ ಮೇಲೆ ಹೊಟ್ಟೆಯನ್ನೂರಿ, ನೀಳವಾಗಿ ಮಲಗಬೇಕು ಬಳಿಕ ಒಂದಡಿ ಅಂತರವಿರುವಂತೆ  ಪಾದಗಳನ್ನು ಪಕ್ಕಕ್ಕೆ ಆಗಲಿಸಬೇಕು.

2. ಆಮೇಲೆ ಅಂಗೈಗಳನ್ನು ಎದೆಯ ಪಕ್ಕದಲ್ಲಿ ಇರಿಸಿ,ಕೈಬೆರಳುಗಳನ್ನು ತಲೆಹಿರಿಸುವ ದಿಕ್ಕಿಗೆ ತುದಿಯಾಗುವಂತೆ ಊರಿಡಬೇಕು.

3. ಬಳಕ ಉಸಿರನ್ನು ಹೊರಹೋಗಿಸಿ ಮುಂಡವನ್ನು ನೆಲದಿಂದ ಮೇಲೆತ್ತಬೇಕು. ಅನಂತರ ತೋಳುಗಳನ್ನು ನೀಳವಾಗಿಸಿ, ತಲೆಯನ್ನು ಪಾದಗಳ ದಿಕ್ಕಿಗೆ ಒಳಗೆ ಸೇರಿಸಿ ನಡುನೆತ್ತಿಯನ್ನು ನೆಲದ ಮೇಲೂರಿಟ್ಟು, ಮೊಣಕೈಗಳನ್ನು ನೇರಮಾಡಿ,ಬೆನ್ನನ್ನು ಹಿಗ್ಗಿಸಬೇಕು.

4. ತರುವಾಯ ಕಾಲುಗಳನ್ನು ಬಿಗಿಮಾಡಿ,ಮಂಡಿಗಳನ್ನು ಬಾಗದಂತಿರಬೇಕು. ಬಳಿಕ ಅಂಗಾಲುಗಳನ್ನು ನೆಲದ ಮೇಲೆ ಭದ್ರವಾಗಿ ಉಸಿರಿಟ್ಟು ಅಡಿಗಳೆರಡನ್ನು ಸಮಾಂತರ ಮಾಡಿ, ಕಾಲ್ಬೆರಳನ್ನು ತಲೆ ಯಿರುವ ಕಡೆಗೆ ತುದಿ ಮಾಡಿರಿಸಬೇಕು.

5. ಆಮೇಲೆ ನೀಳವಾಗಿ ಉಸಿರಾಡುತ್ತ, ಈ ಭಂಗಿಯಲ್ಲಿ ಸುಮಾರು ಒಂದು ನಿಮಿಷಕಾಲ ನೆಲೆಸಬೇಕು. ಬಳಿಕ ಉಸಿರನ್ನು ಹೊರದೂಡುತ್ತ, ತಲೆಯನ್ನು ನೆಲದಿಂದ ಮೇಲೆತ್ತಿ ಮುಂಡವನ್ನು ನೀಳವಾಗಿ ಮುಂಗಡೆಗೆ ಜಗ್ಗಿಸಿ ದೇಹವನ್ನು ಮೆಲ್ಲಗೆ ನೆಲದ ಮೇಲಿಳಿಸಿ ವಿಶ್ರಮಿಸಿ  ಕೊಳ್ಳಬೇಕು.

ಪರಿಣಾಮಗಳು

 ಅಭ್ಯಾಸಿಯು ಹೆಚ್ಚು ಬಳಲಿದ್ದಾಗ ಆಸನಾಭ್ಯಾಸದಲ್ಲಿ ಹೆಚ್ಚು ಕಾಲ ಕಳೆದುದೇ ಆದರೆ, ಬಳಲಿಕೆಯನ್ನು ಬಲುಬೇಗ  ಕಳೆದುಕೊಳ್ಳಬಹುದು ಮತ್ತು ದೇಹಕ್ಕೆ ಲವಲವಿಕೆಯನ್ನು ಪಡೆಯಬಹುದು. ಓಟದ ಪಂದ್ಯದಲ್ಲಿ ಭಾಗವಹಿಸುವವರಿಗೆ ಈ ಆಸನಾಭ್ಯಾಸವುದಿಂದ ಬಹಳ ಫಲಕಾರಿ. ಜಿಂಕೆಯೋಟವನ್ನು ಕಲಿಯಬಯಸುವವರು ಈ ಆಸನಾಭ್ಯಾಸದಿಂದ ಹಗುರ ಹೆಜ್ಜೆಯನ್ನು ಗಳಿಸಿ, ಬಯಕೆಯನ್ನೀಡೇರಿಸಿಕೊಳ್ಳಲು ಸಾಧ್ಯ. ಈ ಭಂಗಿಯ ಹಿಮ್ಮಡಿಯಲ್ಲಿಯ ಪೆಡಸುತನವನ್ನು ನೀಗಿಸಿ ನೋವನ್ನು ಕಳೆದು ಹಿಮ್ಮಡಿಯೆಲುಬಿನ ತೀಕ್ಷ್ಣತೆ ಯನ್ನು ಹದ ಮಾಡುತ್ತದೆ. ಇದೂ ಅಲ್ಲದೆ, ಕಾಲಿನ  ಗಿಣ್ಣುಗಳಿಗೆ ಬಲ ಕೊಟ್ಟು ಕಾಲುಗಳನ್ನು ಸುರೂಪುಗೊಳಿಸುತ್ತದೆ. ಅಲ್ಲದೆ ಈ ಆಸನಾಭ್ಯಾಸವು ಹೆಗಲೆ ಲುಬುಗಳಲ್ಲಿಯ ಪೆಡಸುತನ, ಅವುಗಳಲ್ಲಿಯ ಕೀಲು ನೋವುಗಳನ್ನು ದೂರಮಾಡಿ ಬಿಡುತ್ತದೆ   ಕಿಬ್ಬೊಟ್ಟೆಯೊಳಗಿನ ಮಾಂಸಖಂಡಗಳು  ಬೆನ್ನೆಲುಬಿನ ಕಡೆಗೆ ಜಗ್ಗಾಡಿ,ಆ ಮೂಲಕ ಶಕ್ತಿಯನ್ನು ಗಳಿಸುವುದು ವಪೆಯು ಎದೆಯ ಗೂಡಿನ ಕಡೆಗೆ ಉಬ್ಬುವುದರಿಂದ ಹೃದಯದ ಬಡಿತದ ವೇಗವು ತಗ್ಗುವುದು ಈ ಭಂಗಿಯು ಶರೀರವನ್ನು ಉಲ್ಲಾಸ ಗೊಳಿಸಲು ತುಂಬಾ ಸಹಕಾರಿ.

    184 ಈ ಚಿತ್ರದಲ್ಲಿ ಕಾಣಿಸಿರುವಂತೆ ಶ್ರೀರ್ಷಾಸನವನ್ನು ಅಭ್ಯಾಸಮಾಡಲು ಹೆದುರುವವರು ಈ ಆಸನಾಭ್ಯಾಸವನ್ನು ಸುಲಭವಾಗಿ ಕೈಗೊಳ್ಳಬಹುದು. ಇದರಲ್ಲಿ ಮುಂಡವನ್ನು ನೆಲಕ್ಕಿಳಿಸುವ ಭಂಗಿ ಯಿರುವುದರಿಂದ , ಅದು ಪುರಾ ಹಿಗ್ಗಿ ಹೃದಯದ ಮೇಲೆ ಯಾವ ಒತ್ತಡವೂ ಇಲ್ಲದೆ ಶುದ್ಧ ರಕ್ತವು ಈ ಭಾಗವನ್ನು ಸರಾಗವಾಗಿ ಚಲಿಸುವಂತಾಗುತ್ತದೆ. ಅಲ್ಲದೆ ಮೆದುಳಿನ ಸೂಕ್ಷ್ಮಕೋಶಗಳು ಈ ಆಸನಾಭ್ಯಾಸದಿಂದ ಹುರುಪುಗೊಂಡು, ಮಿದುಳು ಭಾಗ ಆಯಾಸವನ್ನು ಹೋಗಲಾಡಿಸಿ, ಅದರಲ್ಲಿ ತಾರುಣ್ಯವನ್ನು ಮೂಡಿಸುತ್ತದೆ. ಹೆಚ್ಚು ರಕ್ತದೊಡ್ಡ ದಿಂದ ಪೀಡಿತರಾದವರು ಈ ಆಸನದ ಭಂಗಿಯನ್ನು ನಿರಾತಂಕವಾಗಿ ಅಭ್ಯಸಿಸಬವುದು.